ಸಿಎಂ ಪಂಥಹ್ವಾನ ನೀಡಿರುವುದು ಮುರ್ಖತನ: ಯಡಿಯೂರಪ್ಪ

ಬೆಂಗಳೂರು, ಶುಕ್ರವಾರ, 14 ಜುಲೈ 2017 (13:46 IST)

ಪ್ರಧಾನಿ ನರೇಂದ್ರ ಮೋದಿ ಸಾಧನೆ ಮತ್ತು ತಮ್ಮ ಸಾಧನೆಯ ಬಗ್ಗೆ ಚರ್ಚಿಸಲು ಪಂಥಹ್ವಾನ ನೀಡಿರುವುದು ಮೂರ್ಖತನ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ತಿರುಗೇಟು ನೀಡಿದ್ದಾರೆ.
 
ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ವಿಶ್ವವೇ ಕೊಂಡಾಡುತ್ತಿದೆ. ದೇಶದ ಆರ್ಥಿಕತೆಯಲ್ಲಿ ಹೊಸ ಕ್ರಾಂತಿಯನ್ನು ಸೃಷ್ಟಿಸಿದ್ದಾರೆ. ಅಂತಹ ಮಹಾನ್ ನಾಯಕನ ಬಗ್ಗೆ ಸಿಎಂ ಚರ್ಚೆ ಮಾಡುತ್ತಾರಂತೆ ಎಂದು ಲೇವಡಿ ಮಾಡಿದ್ದಾರೆ.
 
ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವರ ಸಲಹೆಗಾರ ಕೆಂಪಯ್ಯರೊಂದಿಗೆ ಸೇರಿ ಸಂಚು ರೂಪಿಸುತ್ತಿದ್ದಾರೆ. ಕರಾವಳಿ ಗಲಭೆಯನ್ನು ನಿಯಂತ್ರಿಸಲು ಉನ್ನತ ಪೊಲೀಸ್ ಅಧಿಕಾರಿಗೆ ಜವಾಬ್ದಾರಿ ಹೊರಿಸುವುದು ಬಿಟ್ಟು ಕೆಂಪಯ್ಯಗೆ ಅಧಿಕಾರ ನೀಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 
ಸಿದ್ದರಾಮಯ್ಯ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ನಂತರ ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದೆ. ನಾಲ್ಕು ವರ್ಷಗಳಿಂದ ರಾಜ್ಯದ ಜನತೆ ಭ್ರಷ್ಟಾಚಾರ, ದುರಾಡಳಿತದಿಂದ ತತ್ತರಿಸಿ ಹೋಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಸಿಎಂ ಸಿದ್ದರಾಮಯ್ಯ ಯಡಿಯೂರಪ್ಪ ಕಾಂಗ್ರೆಸ್ ಬಿಜೆಪಿ Yeddyurappa Congress Bjp Cm Siddaramaiah

ಸುದ್ದಿಗಳು

news

ಮೊದ್ಲು ನೀವು ಶಾಸಕರಾಗಿ ಆಯ್ಕೆಯಾಗ್ತೀರಾ ನೋಡಿ? : ಸಿಎಂಗೆ ಕುಮಾರಸ್ವಾಮಿ ಸವಾಲ್

ಬೆಂಗಳೂರು: ಯಡಿಯೂರಪ್ಪ, ಕುಮಾರಸ್ವಾಮಿ ಅವರಪ್ಪನಾಣೆಗೂ ಮತ್ತೊಮ್ಮೆ ಮುಖ್ಯಮಂತ್ರಿ ಆಗಲ್ಲ ಎನ್ನುವ ಸಿಎಂ ...

news

ಭಾರತದಲ್ಲಿ ಮಿಸ್ ಮಾಡಿಕೊಳ್ಳುವಂತಹದ್ದು ಏನೂ ಇಲ್ಲ: ವಿಜಯ್ ಮಲ್ಯ ದರ್ಪದ ಹೇಳಿಕೆ

ಲಂಡನ್: ಭಾರತದಲ್ಲಿ ಸಾಲ ಮಾಡಿ ಬ್ರಿಟನ್ ಗೆ ಪರಾರಿಯಾಗಿರುವ ಮದ್ಯ ದೊರೆ ವಿಜಯ್ ಮಲ್ಯ ಮತ್ತೊಮ್ಮೆ ತಮ್ಮ ...

news

ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಪ್ರಬಲ ಸ್ಫೋಟಕ ಪತ್ತೆ: ಬೆಚ್ಚಿಬಿದ್ದ ಶಾಸಕರು

ಉತ್ತರ ಪ್ರದೇಶ ವಿಧಾನಸಭೆಯ ವಿಪಕ್ಷ ನಾಯಕ ರಾಮ್ ಗೋವಿಂದ್ ಚೌಧರಿ ಕುರ್ಚಿ ಬಳಿ ಕಸ ಗುಡಿಸುವ ವೇಳೆ ...

news

ರಾಮಮಂದಿರ ನಿರ್ಮಾಣಕ್ಕೆ ಅಡ್ಡಿಪಡಿಸಿದ್ರೆ ಹಜ್ ಯಾತ್ರೆ ಬಂದ್: ಬಿಜೆಪಿ ಶಾಸಕ

ಲಕ್ನೋ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ಪಕ್ಷದ ನಾಯಕರು ಕಟುವಾದ ಮಾತುಕತೆಗಳು ಮತ್ತು ಅನಗತ್ಯ ...

Widgets Magazine