ಹಣಬಲ, ಜಾತಿಬಲದಿಂದ ಚುನಾವಣೆ ಗೆಲ್ಲುತ್ತೇವೆ ಎನ್ನುವುದು ಕಾಂಗ್ರೆಸ್ ಭ್ರಮೆ: ಯಡಿಯೂರಪ್ಪ

ಮೈಸೂರು, ಶುಕ್ರವಾರ, 17 ಮಾರ್ಚ್ 2017 (15:59 IST)

Widgets Magazine

ಉಪ ಚುನಾವಣೆಯಲ್ಲಿ ಹಣಬಲ, ಜಾತಿಬಲದಿಂದ ಗೆಲ್ಲುತ್ತೇವೆ ಎನ್ನುವುದು ಕಾಂಗ್ರೆಸ್ ಭ್ರಮೆಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹೇಳಿದ್ದಾರೆ.
 
ಸರಕಾರದ ವೈಫಲ್ಯವನ್ನಿಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ. ರಾಜ್ಯ ಸರಕಾರದ ಬ್ರಹ್ಮಾಂಡ್ ಭ್ರಷ್ಟಾಚಾರವನ್ನು ಜನತೆಯ ಮುಂದಿಡುತ್ತೇವೆ. ಎರಡೂ ಕ್ಷೇತ್ರಗಳಲ್ಲೂ ಬಿಜೆಪಿ ಜಯಗಳಿಸುವುದು ಖಚಿತ. ಯಾವುದೇ ಅನುಮಾನ ಬೇಡ ಎಂದರು.
 
ಕಾಂಗ್ರೆಸ್ ಪಕ್ಷ ಉಪಚುನಾವಣೆಯಲ್ಲಿ ಸಚಿವರು, ಶಾಸಕರನ್ನು ನಂಜನಗೂಡು, ಗುಂಡ್ಲುಪೇಟೆಗೆ ಕಳುಹಿಸಿದ್ರೆ ನಮಗೆ ಲಾಭ. ಅವರ ಉಪಸ್ಥಿತಿಯಲ್ಲಿಯೇ ನಾವು ಗೆದ್ದು ತೋರಿಸುತ್ತೇವೆ ಎಂದು ಸವಾಲ್ ಹಾಕಿದರು.
 
ರಾಜ್ಯಸರಕಾರ ನಂಜನಗೂಡಿಗೆ 500 ಕೋಟಿ ಅನುದಾನ ನೀಡಿದೆ. ಗುಂಡ್ಲುಪೇಟೆಗೆ ಅನುದಾನ ನೀಡಿಲ್ಲ. ಇದು ನೋಡಿದರೆ ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಪ್ರತಾಪ್‌ಸಿಂಹಗೆ ಐಪಿಎಸ್ ಅಧಿಕಾರಿ ರೂಪಾ ತಿರುಗೇಟು

ಬೆಂಗಳೂರು: ಪ್ರತಿಪಕ್ಷವಾಗಿ ನೀವು ನಿಮ್ಮ ಕರ್ತವ್ಯ ನಿರ್ವಹಿಸಿ. ಅಧಿಕಾರಿಯಾಗಿ ನಾವು ನಮ್ಮ ಕರ್ತವ್ಯವನ್ನು ...

news

ಮೋದಿ ಸರ್ಕಾರದಿಂದ ಉ.ಪ್ರದೇಶ ರೈತರ ಸಾಲ ಮನ್ನಾ: ರಾಜ್ಯದಲ್ಲಿ ರೈತರ ಆಕ್ರೋಶ

ಬೆಂಗಳೂರು: ಉತ್ತರಪ್ರದೇಶದಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲಾಗುವುದು ಎನ್ನುವ ಕೇಂದ್ರ ಸಚಿವ ರಾಧ ...

news

ರಾಹುಲ್ ಗಾಂಧಿ ಸರಳತೆ ಮೋದಿ ಸೋಲಿಗೆ ಕಾರಣವಾಗಲಿದೆ: ರಾಜ್ ಬಬ್ಬರ್

ನವದೆಹಲಿ: ಉತ್ತರಪ್ರದೇಶ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅಲೆಯನ್ನು ಅರಗಿಸಿಕೊಳ್ಳಲಾಗದೆ ಹೀನಾಯ ...

news

ಇವರ ಅಪ್ಪನಾಣೆ, ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ: ಬಿಜೆಪಿಗೆ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಇವರ ಅಪ್ಪನಾಣೆ ಇವರು ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ. ಬಿಜೆಪಿಯವರು ರಾಜ್ಯವನ್ನು ಲೂಟಿ ...

Widgets Magazine