ಕೊಲೆಗಡುಕ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಧಿಕ್ಕಾರ: ಯಡಿಯೂರಪ್ಪ

ಮಂಗಳೂರು, ಗುರುವಾರ, 7 ಸೆಪ್ಟಂಬರ್ 2017 (12:18 IST)

Widgets Magazine

ಕೊಲೆಗಡುಕ ಸರ್ಕಾರಕ್ಕೆ ಧಿಕ್ಕಾರ ಎಂದು ಕೂಗಿ ಭಾಷಣ ಆರಂಭಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಶಾಂತಿಗೆ ಹೆಸರಾಗಿದ್ದ ಕರ್ನಾಟಕದಲ್ಲಿ ಅಶಾಂತಿ ಸೃಷ್ಟಿಸಿದ್ದೀರಿ. ಸಿದ್ದರಾಮಯ್ಯನವರೇ ನಿಮ್ಮ ರಾಜಕೀಯ ದೊಂಬರಾಟ ನಡೆಯುವುದಿಲ್ಲ.. ರಾಜ್ಯ ಸರಕಾರ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿಲ್ಲ ಎಂದು ಗುಡುಗಿದರು. 
 
ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾದ ಸಚಿವ ಕೆ.ಜೆ.ಜಾರ್ಜ್ ಕೂಡಲೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಸಿಬಿಐ ತನಿಖೆ ಮುಕ್ತಾಯವಾಗುವವರೆಗೆ ತಮ್ಮ ಸಚಿವ ಸ್ಥಾನದಿಂದ ದೂರವಿರಬೇಕು. ಇಲ್ಲವಾದರೆ ಉಗ್ರ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದರು,
 
ಹಿರಿಯ ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್ ಹತ್ಯೆಗೆ ಹೊಣೆ ಯಾರು? ಕಲಬುರಗಿ ಹತ್ಯೆಯಾಗಿ ವರ್ಷಗಳೇ ಉರುಳಿದರೂ ಹಂತಕರನ್ನು ಬಂಧಿಸಲಾಗಿಲ್ಲ ಇದೆಂತಹ ಸರಕಾರ ನಿಮ್ಮದು ಎಂದು ಕಿಡಿಕಾರಿದರು.
 
ಕೊಲೆಗಡುಕರನ್ನು ರಕ್ಷಿಸುತ್ತಿರುವ ಸಿಎಂ ಸಿದ್ದರಾಮಯ್ಯ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ಸಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ತಿಳಿಸಿದ್ದಾರೆ.  
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಸಚಿವ ರಮಾನಾಥ್ ರೈಗೆ ಈ ಜನ್ಮದಲ್ಲಿ ಅನ್ನ ಸಿಗಲ್ಲ: ಆರ್.ಅಶೋಕ್

ಮಂಗಳೂರು: ಶಾಲಾ ಮಕ್ಕಳ ಅನ್ನವನ್ನು ಕಸಿದ ರಮಾನಾಥ್ ರೈಗೆ ಈ ಜನ್ಮದಲ್ಲಿ ಅನ್ನ ಸಿಗಲ್ಲ ಎಂದು ಮಾಜಿ ಡಿಸಿಎಂ ...

news

ಗೌರಿ ಲಂಕೇಶ್ ಹತ್ಯೆ ಬಳಿಕ ಲಂಕೇಶ್ ಪತ್ರಿಕೆ ಗತಿಯೇನು? ಇಂದ್ರಜಿತ್ ಲಂಕೇಶ್ ಹೇಳಿದ್ದಿಷ್ಟು!

ಬೆಂಗಳೂರು: ಗೌರಿ ಲಂಕೇಶ್ ಹತ್ಯೆಯಾದ ಬಳಿಕ ಅವರು ಬಹುವಾಗಿ ಪ್ರೀತಿಯಿಂದ ಬೆಳೆಸಿದ ಲಂಕೇಶ್ ಪತ್ರಿಕೆಯ ...

news

ದಿಟ್ಟ ಪತ್ರಕರ್ತೆ ಗೌರಿ ಹತ್ಯೆಗೆ ಕಮಲ್ ಹಾಸನ್ ಸೇರಿ ಹಲವರ ಖಂಡನೆ

ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ...

news

‘ನಮ್ಮನ್ನು ಕಂಡರೆ ಸಿದ್ದರಾಮಯ್ಯಗೆ ನಡುಕ’

ಮಂಗಳೂರು: ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆ ವಿರೋಧಿಸಿ ಮಂಗಳೂರು ಚಲೋ ರ್ಯಾಲಿ ನಡೆಸುತ್ತಿರುವ ಬಿಜೆಪಿ ...

Widgets Magazine