ಆಗ್ರಾದ ಸರ್ಕ್ಯೂಟ್ ಹೌಸ್‌ನಲ್ಲಿ ರಾತ್ರಿ ಕಳೆಯುವ ಮೂಲಕ ಸಂಪ್ರದಾಯ ಮುರಿದ ಯೋಗಿ ಆದಿತ್ಯನಾಥ್

ಲಕ್ನೋ, ಮಂಗಳವಾರ, 16 ಜನವರಿ 2018 (19:52 IST)

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಆಗ್ರಾದ ಸರ್ಕ್ಯೂಟ್ ಹೌಸ್‌ನಲ್ಲಿ ರಾತ್ರಿ ಕಳೆಯುವ ಮೂಲಕ 16 ವರ್ಷಗಳ ಸಂಪ್ರದಾಯವನ್ನು ಮುರಿದುಹಾಕಿದ್ದಾರೆ.
 
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ದಂಪತಿಯನ್ನು ಆಗ್ರಾದಲ್ಲಿ ಬರಮಾಡಿಕೊಳ್ಳುವ ಸಲುವಾಗಿ ಯೋಗಿ ಆದಿತ್ಯನಾಥ್ ಅವರು ಆಗ್ರಾ ಸರ್ಕ್ಯೂಟ್ ಹೌಸ್ ನಲ್ಲಿ ವಾಸ್ತವ್ಯ ಹೂಡಿದ್ದರು.
 
ಆಗ್ರಾದ ಸರ್ಕ್ಯೂಟ್‌ ಹೌಸ್‌ನಲ್ಲಿ ರಾತ್ರಿ ಕಳೆಯುವ ಮುಖ್ಯಮಂತ್ರಿ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಭಯದಿಂದ ಕಳೆದ 16 ವರ್ಷದಲ್ಲಿ ಯಾವುದೇ ಮುಖ್ಯಮಂತ್ರಿ ವಾಸ್ತವ್ಯ ಮಾಡಿರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
 
ಈ ಹಿಂದೆ ರಾಜನಾಥ್ ಸಿಂಗ್ ಅವರು ಮುಖ‌್ಯಮಂತ್ರಿ ಆಗಿದ್ದಾಗ ಅವರು ಆಗ್ರಾದ ಸರ್ಕ್ಯೂಟ್ ಹೌಸ್‌ನಲ್ಲಿ ತಂಗಿದ್ದರು. ಅವರು ಮುಖ್ಯಮಂತ್ರಿ ಪದವಿಯಿಂದ ಕೆಳಗಿದ ಬಳಿಕ, ಮುಲಾಯಂ ಸಿಂಗ್, ಮಾಯಾವತಿ ಹಾಗೂ ಅಖಲೇಶ ಯಾದವ್ ಈ ಸಾಹಸಕ್ಕೆ ಕೈ ಹಾಕಿರಲಿಲ್ಲ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಿಜೆಪಿಯವರು ಕೌರವರು, ನಾವು ಪಾಂಡವರು– ಸಿದ್ದರಾಮಯ್ಯ

ಚುನಾವಣೆಯ ಯುದ್ಧದಲ್ಲಿ ಬಿಜೆಪಿಯವರು ಕೌರವರು, ನಾವು ಪಾಂಡವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ...

news

ಹಜ್ ಯಾತ್ರೆಗೆ ಸಹಾಯಧನ ರದ್ದುಪಡಿಸಿದ ಕೇಂದ್ರ

ಹಜ್ ಯಾತ್ರೆ ಮಾಡುವವರಿಗೆ ನೀಡುವ ಸಹಾಯಧನವನ್ನು ಪ್ರಸಕ್ತ ವರ್ಷದಿಂದ ರದ್ದುಪಡಿಸಲಾಗಿದೆ ಎಂದು ಕೇಂದ್ರದ ...

news

ಮಹಾದಾಯಿ ವಿವಾದಲ್ಲಿ ಪ್ರಧಾನಿ ಮಧ್ಯಪ್ರವೇಶ ಅಸಾಧ್ಯ– ಶೆಟ್ಟರ್

ಮಹಾದಾಯಿ ನೀರಿನ ‌ವಿವಾದದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶ ‌ಮಾಡುವುದು‌‌ ಅಸಾಧ್ಯ ...

news

ಜನಾರ್ಧನರೆಡ್ಡಿ ರಾಜಕೀಯಕ್ಕಿಳಿದರೆ ಹೈ.ಕ ಭಾಗದಲ್ಲಿ ಬಿಜೆಪಿಗೆ 20ಕ್ಕೂ ಅಧಿಕಸ್ಥಾನ– ಶ್ರೀರಾಮುಲು

ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರು ಸಕ್ರೀಯ ರಾಜಕಾರಣಕ್ಕೆ ಬಂದರೆ, ಹೈದರಾಬಾದ್ ಕರ್ನಾಟಕ ...

Widgets Magazine
Widgets Magazine