ಯೋಗ ದಸರಾಗೆ ಅದ್ಧೂರಿ ಚಾಲನೆ

ಮೈಸೂರು, ಶುಕ್ರವಾರ, 12 ಅಕ್ಟೋಬರ್ 2018 (11:19 IST)

ಮೈಸೂರು ದಸರಾ ಮಹೋತ್ಸವ 2018ರ ಅಂಗವಾಗಿ ಯೋಗ ದಸರಾಗೆ ಉಸ್ತುವಾರಿ ಸಚಿವ ಚಾಲನೆ ನೀಡಿದ್ದಾರೆ.

ಮೈಸೂರಿನಲ್ಲಿ ಯೋಗ ದಸರಾಗೆ ಜಿಲ್ಲಾ ಉಸ್ತುವಾರಿ ಸಚಿವ  ಜಿ.ಟಿ ದೇವೇಗೌಡ ಚಾಲನೆ ನೀಡಿದ್ದಾರೆ. ಮೈಸೂರಿನ ಕುವೆಂಪುನಗರದಲ್ಲಿ ನಡೆಯುತ್ತಿರುವ ಯೋಗ ದಸರಾ ಇದಾಗಿದೆ. ಯೋಗ ಇಲ್ಲದೆ ಆರೋಗ್ಯ ಇಲ್ಲ. ಆರೋಗ್ಯ ಇಲ್ಲದೆ ಆಯುಷ್ಯ ಇಲ್ಲ ಎಂದು ಸಚಿವ ಜಿ.ಟಿ.ದೇವೇಗೌಡರು ಹೇಳಿದರು.

ಯೋಗ ಜೀವನದಲ್ಲಿ ಎಲ್ಲರಿಗೂ ಅವಶ್ಯಕವಾಗಿ ಬೇಕು. ಕಡ್ಡಾಯವಾಗಿ ಎಲ್ಲರೂ ಯೋಗ ಮಾಡಬೇಕು. ಕಾಲೇಜುಗಳಲ್ಲಿ ಯೋಗ ಶಿಕ್ಷಣ ನೀಡುವಂತೆ ಈಗಾಗಲೇ ಸೂಚಿಸಲಾಗಿದೆ ಎಂದು ಹೇಳಿದರು.  

ಆಧುನಿಕ ಜೀವನ ಶೈಲಿಯಲ್ಲಿ ನಮ್ಮ ದೈನಂದಿನ ಜೀವನಕ್ಕೆ ಪ್ರಮುಖವಾದುದು ಯೋಗವಾಗಿದೆ ಎಂದು ಸಚಿವ ಹೇಳಿದರು.
ಮಾಜಿ ಸಚಿವ, ಶಾಸಕ ರಾಮದಾಸ್, ಯೋಗ ಗುರುಗಳಾದ ಪ್ರಕಾಶ್ ಗುರೂಜಿ, ಜಿ.ಪಂ.ಸದಸ್ಯರಾದ ಚಂದ್ರಿಕ ಸುರೇಶ್, ಉದ್ಬೂರು ಮಹದೇವಸ್ವಾಮಿ ಇದ್ದರು.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಯುವತಿಯ ಕೈಕಾಲು ಕಟ್ಟಿ ಅತ್ಯಾಚಾರ ಎಸಗಿದ ಕಾಮುಕ

ಕಲಬುರಗಿ : ವ್ಯಕ್ತಿಯೊಬ್ಬ ಯುವತಿಯ ಮನೆಗೆ ನುಗ್ಗಿ ಆಕೆಯ ಕೈ ಕಾಲು ಕಟ್ಟಿ ಅತ್ಯಾಚಾರ ಎಸಗಿದ ಘಟನೆ ...

news

ಮತ್ತು ಬರಿಸುವ ಜ್ಯೂಸ್ ಕುಡಿಸಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ

ಉತ್ತರ ಪ್ರದೇಶ : ಅಪ್ರಾಪ್ತೆಗೆ ಮತ್ತು ಬರಿಸುವ ಜ್ಯೂಸ್ ಕುಡಿಸಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ...

ಆಧಾರ್ ಕಾರ್ಡ್ ಇಲ್ಲವೆಂದು ಬಾಲಕಿಗೆ ಚಿಕಿತ್ಸೆ ನಿರಾಕರಿಸಿದ ಆಸ್ಪತ್ರೆ!

ನವದೆಹಲಿ: ಆಧಾರ್ ಕಾರ್ಡ್ ಇಲ್ಲವೆಂಬ ಕಾರಣಕ್ಕೆ ದೆಹಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಅನಾರೋಗ್ಯ ಪೀಡಿತ ...

news

ಹೈಕಮಾಂಡ್ ವಿರುದ್ಧವೇ ಅಭಿಯಾನ ಆರಂಭಿಸಿದ ಮಂಡ್ಯ ಬಿಜೆಪಿ ನಾಯಕರು!

ಬೆಂಗಳೂರು: ಮಂಡ್ಯ ಕ್ಷೇತ್ರದ ಬಿಜೆಪಿ ಪದಾಧಿಕಾರಿಗಳು ಇದೀಗ ತಮ್ಮ ಪಕ್ಷದ ಹೈಕಮಾಂಡ್ ನಾಯಕರ ವಿರುದ್ಧವೇ ...

Widgets Magazine