ನಿನ್ನದು ಹಿಂದು ಜಾತಿಯಲ್ಲ, ಹಂದಿ ಜಾತಿ: ಸಚಿವ ಹೆಗಡೆಗೆ ತಿರುಗೇಟು

ಬಾಗಲಕೋಟೆ:, ಶನಿವಾರ, 6 ಜನವರಿ 2018 (16:11 IST)

 ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಿರುದ್ಧ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಬದಲಾವಣೆ ಕುರಿತು ನೀಡಿದ ಹೇಳಿಕೆ ದಿನದಿಂದ ದಿನಕ್ಕೆ ಹೊಸ ಸ್ವರೂಪ ಪಡೆಯುತ್ತಿದೆ.
ಭೀಮಾ ಕೋರೆಗಾಂವ್ ವಿಜಯೋತ್ಸವದ ಅಂಗವಾಗಿ ಆಯೋಜಿಸಲಾದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ರಾಜ್ಯ ಬ್ರಾಡ್‌ಗೇಜ್ ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ದೀನ್ ಖಾಜಿ, ಸಚಿವ ಅನಂತ್ ಕುಮಾರ್ ಹೆಗಡೆ ಹಿಂದೂ ಜಾತಿಗೆ ಹುಟ್ಟಿದವನಲ್ಲ. ಹಿಂದಿ ಜಾತಿಗೆ ಹುಟ್ಟಿದವನು ಎಂದು ಗುಡುಗಿದ್ದಾರೆ.
 
ಕೇಂದ್ರ ಸಚಿವರಾಗಿ ಉನ್ನತ ಸ್ಥಾನವನ್ನು ಅಲಂಕರಿಸಿರುವ ಹೆಗಡೆ, ತಮ್ಮ ಸಚಿವ ಸ್ಥಾನದ ಘನತೆ ಗೌರವ ಕಾಪಾಡಿಕೊಳ್ಳುವಂತಹ ಹೇಳಿಕೆ ನೀಡಬೇಕು. ಅದನ್ನು ಬಿಟ್ಟು ಮನಬಂದಂತೆ ಹೇಳಿಕೆ ನೀಡಿದರೆ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಸಿದರು.
 
ದೇಶದ ಸಂವಿಧಾನ ವಿದೇಶಗಳಲ್ಲೂ ಮಾದರಿಯಾಗಿದೆ. ಅದನ್ನು ಬದಲಾಯಿಸಲು ನಾವು ಬಂದಿದ್ದೇವೆ ಎಂದು ಅಹಂಕಾರದ ಹೇಳಿಕೆ ನೀಡಿದ್ದಾರೆ. ಅಧಿಕಾರದ ಅಹಂನಲ್ಲಿ ನಾಲಿಗೆ ಹರಿಬಿಟ್ಟರೆ ನಾಲಿಗೆ ಕತ್ತರಿಸುತ್ತೇವೆ ಎಂದು ಕಿಡಿಕಾರಿದ್ದಾರೆ.
 
ಮುಂಬರುವ ದಿನಗಳಲ್ಲಿ ರಾಜ್ಯದ ಜನತೆಯ ಸಮಸ್ಯೆಗಳಿಗೆ ಸ್ಪಂದಿಸುವುದನ್ನು ಕಲಿತುಕೊಳ್ಳಲಿ. ಇಲ್ಲವಾದಲ್ಲಿ ಯಾವ ರೀತಿ ಪಾಠ ಕಲಿಸಬೇಕು ಎನ್ನುವುದು ನಮಗೆ ಗೊತ್ತಿದೆ ಎಂದು ರಾಜ್ಯ ಬ್ರಾಡ್‌ಗೇಜ್ ಅಧ್ಯಕ್ಷ ಕುತುಬುದ್ದೀನ್ ಖಾಜಿ ಎಚ್ಚರಿಸಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮಹಾದಾಯಿ ಸಮಸ್ಯೆ ಇತ‌್ಯರ್ಥವಾದರೆ ಸಾಕು– ಎಂ.ಬಿ.ಪಾಟೀಲ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಗೋವಾ ಮುಖ್ಯಮಂತ್ರಿ ಹಾಗೂ ಯಡಿಯೂರಪ್ಪ ಸೇರಿದಂತೆ ಯಾರೊಂದಿಗಾದರೂ ಸಭೆ ...

news

ಇಂದಿರಾ ಕ್ಯಾಂಟಿನ್‌ ಮೇಲಾಧಿಕಾರಿಯಿಂದ ಮಹಿಳೆಗೆ ಲೈಂಗಿಕ ಕಿರುಕುಳ

ಇಂದಿರಾ ಕ್ಯಾಂಟೀನ್ ಮಹಿಳಾ ಕ್ಯಾಷಿಯರ್‌ಗೆ ಕ್ಯಾಂಟಿನ್ ಮೇಲಾಧಿಕಾರಿ ಲೈಂಗಿಕ ಕಿರುಕುಳ ನೀಡಿರುವ ಆರೋಪ ...

news

ಸಿ ವೋಟರ್‌ ಮಾಲೀಕ ಸಿದ್ದರಾಮಯ್ಯ ಆಪ್ತ– ಎಚ್‌ಡಿಕೆ

ಸಿ ವೋಟರ್ ಸಂಸ್ಥೆಯ ಮಾಲೀಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತನಾಗಿದ್ದು, ದುಡ್ಡು ಕೊಟ್ಟು ಸಮೀಕ್ಷೆ ...

news

ಗೌರಿಲಂಕೇಶ್ ಆರೋಪಿಗಳ ಸುಳಿವು ಲಭ್ಯ, ಶೀಘ್ರ ಬಹಿರಂಗ– ಸಿಎಂ

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳ ಸುಳಿವು ಸಿಕ್ಕಿದ್ದು, ಶೀಘ್ರದಲ್ಲೇ ...

Widgets Magazine
Widgets Magazine