.ನಡುರಸ್ತೆಯಲ್ಲೇ ಮುತ್ತು ಮತ್ತು ಮತ್ತಿನಾಟ.. ಬೆಚ್ಚಿಬಿದ್ದ ಬೆಂಗಳೂರು

ಬೆಂಗಳೂರು, ಶುಕ್ರವಾರ, 15 ಸೆಪ್ಟಂಬರ್ 2017 (19:46 IST)

ಉದ್ಯಾನ ನಗರಿ ಬೆಂಗಳೂರಿನಲ್ಲಿ ಪುಂಡರ ಪುಂಡಾಟಕ್ಕೆ ಮಿತಿಯೇ ಇಲ್ಲದಂತಾಗಿದೆ. ನಡುರಸ್ತೆಯ ಸಿಗ್ನಲ್`ನಲ್ಲಿ ಕುಡುಕರು ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿರುವ ಘಟನೆ ನಡೆದಿದೆ.


ಸಿಗ್ನಲ್`ನಲ್ಲಿ ಪಕ್ಕದಲ್ಲಿ ನಿಂತಿದ್ದ ಕಾರಿನಲ್ಲಿದ್ದ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿರುವ ಮತ್ತೊಂದು ಕಾರಿನಲ್ಲಿದ್ದ ಪುಂಡರು. ಬಾಟಲಿ ತೋರಿಸಿ ಕುಡಿಯುತ್ತೀಯಾ ಎಂದು ಕೇಳಿದ್ದಾರೆ. ಅಸಭ್ಯವಾಗಿ ಬೆರಳುಗಳ ಸನ್ನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ರಸ್ತೆಯಲ್ಲಿದ್ದವರಿಗೆ ಬಾಟಲಿ ತೋರಿಸಿ ಅವರ ಮೇಲೆ ಎರಚಿ ಚೇಷ್ಟೆ ಮಾಡಿದ್ದಾರೆ.

ಅಷ್ಟೇ ಅಲ್ಲ, ಕಾರಿನ ಮುಂದಿನ ಸೀಟ್`ನಲ್ಲಿ ಕುಳಿತಿದ್ದ ಯುವಕ ತನ್ನ ಗರ್ಲ್ ಫ್ರೆಂಡ್`ಗೆ ಮುತ್ತಿಕ್ಕಿ, ಮದ್ಯಪಾನ ಮಾಡಿ, ಸಿಗರೇಟ್ ಸೇದುತ್ತಾ ನಡುರಸ್ತೆಯಲ್ಲೇ ರೊಮ್ಯಾನ್ಸ್ ಮಾಡಿದ್ದಾನೆ. ಸಿಗ್ನಲ್`ನಲ್ಲಿ ನಿಂತಿದ್ದ ಜನ ಇದನ್ನ ಕಂಡು ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ಈ ಪುಂಡರ ಚೇಷ್ಟೆಯನ್ನ ವಿಡಿಯೋ ಮಾಡಿರುವ ಸುನಂದಾ ಎಂಬ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪುಂಡರ ಪತ್ತೆಗೆ ಬಲೆ ಬೀಸಿದ್ದಾರೆ.
 
 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮೋದಿಯ ವಿಪಕ್ಷ ಮುಕ್ತ ಭಾರತ ಕನಸು ನನಸಾಗಲ್ಲ: ಶರದ್ ಯಾದವ್

ಜೈಪುರ್: ವಿಪಕ್ಷಮುಕ್ತ ಭಾರತ ಎನ್ನುವ ಪ್ರಧಾನಿ ನರೇಂದ್ರ ಮೋದಿಯ ಕನಸು ಯಾವತ್ತೂ ನನಸಾಗುವುದಿಲ್ಲ ಎಂದು ...

news

ರಾಜ್ಯದಲ್ಲಿ ಕೋಮುಗಲಭೆ ಸೃಷ್ಟಿಸಲು ಬಿಜೆಪಿ ಸಂಚು : ಸಿಎಂ ಆರೋಪ

ಬೆಳಗಾವಿ: ಪಾರದರ್ಶಕತೆ ಮತ್ತು ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿರುವ ಕಾಂಗ್ರೆಸ್ ಸರಕಾರವನ್ನು ಟೀಕಿಸಲು ...

news

ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯನ ಹತ್ಯೆ

ಅಮೆರಿಕದ ಕನ್ಸಾಸ್`ನಲ್ಲಿ ಮತ್ತೊಬ್ಬ ಭಾರತೀಯನ ಹತ್ಯೆ ನಡೆದಿದೆ. ತೆಲಂಗಾಣ ಮೂಲದ ಮನೋವೈದ್ಯ ಅಚ್ಯುತಾ ...

news

ಮತಯಂತ್ರಗಳಿಗೆ ವಿವಿಪ್ಯಾಟ್‌: ಚುನಾವಣೆ ಆಯೋಗಕ್ಕೆ ಕಾಂಗ್ರೆಸ್ ಮನವಿ

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮತಯಂತ್ರಗಳಿಗೆ ವಿವಿಪ್ಯಾಟ್‌ ಅಳವಡಿಸುವಂತೆ ...

Widgets Magazine
Widgets Magazine