ಹರಿಹರೆಯದ ಯುವತಿ ಆತ್ಮಹತ್ಯೆಗೆ ಶರಣು: ಕಾರಣ ಕೇಳಿದರೆ ಶಾಕ್ ಆಗ್ತೀರಾ…

ನಾಗಪುರ, ಶುಕ್ರವಾರ, 7 ಡಿಸೆಂಬರ್ 2018 (20:09 IST)


ಆಕೆ ಇನ್ನು ಹರಿಹರೆಯದ ಯುವತಿ. ಜೀವನ ನೋಡುವುದು ಬಹಳಷ್ಟಿತ್ತು. ಆದರೆ ಆಕೆಗೆ ಅಂಟಿದ ವ್ಯಸನ ಆಕೆಯ ಬಾಳನ್ನೇ ನಾಶ ಮಾಡಿದೆ.

ಮಹಾರಾಷ್ಟ್ರದ ನಾಗಪುರದಲ್ಲಿ ಓರ್ವ ಹದಿಹರೆಯದ ಬಾಲಕಿಯ ಆತ್ಮಹತ್ಯೆ ಪ್ರಕರಣ ಹೊಸ ಟ್ವಿಸ್ಟ್ ಪಡೆದುಕೊಂಡಿದೆ. ಅಂತರ್ಜಾಲ ಆಟದ ವ್ಯಸನದ ದುಷ್ಪರಿಣಾಮದಿಂದ ಯುವತಿ ಆತ್ಮಹತ್ಯೆ ಆಗಿರಬಹುದು ಎಂದು ಪೊಲೀಸರು ಶಂಕಿಸಿದ್ದು, ನಿಟ್ಟಿನಲ್ಲಿ ತನಿಖೆ ಕೈಗೊಂಡಿದ್ದಾರೆ.

ನಾಗಪುರದ ಬೆಲ್ತರೋಡಿ ಪ್ರದೇಶದಲ್ಲಿನ ತನ್ನ ಮನೆಯಲ್ಲಿ 17 ವರ್ಷದ ಬಾಲಕಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದು, ಆಕೆಯ ಮುಂಗೈ ಮೇಲೆಹೊರ ಹೋಗಲು ಇಲ್ಲಿ ತುಂಡರಿಸು” (ಕಟ್ ಹಿಯರ್ ಟು ಎಕ್ಸಿಟ್) ಎಂದು ಬೆರೆದುಕೊಂಡಿರುವುದು ಕಂಡುಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಬೆಲ್ತರೋಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ವಿಜಯ್ ತಲ್ವಾರೆ ಹೇಳಿಕೆ ನೀಡಿದ್ದು, ಮೃತ ಬಾಲಕಿಯ ಪೋಷಕರು ನೀಡಿರುವ ಹೇಳಿಕೆ ಪ್ರಕಾರ ಬಾಲಕಿಯ ಅಧ್ಯಯನಕ್ಕೆಂದು ಪ್ರತ್ಯೇಕ ಕೊಠಡಿ ಇತ್ತು. ಅಲ್ಲಿ ಆಕೆ ಆನ್ಲೈನ್ ಗೇಮ್ಗಳನ್ನು ಆಡುತ್ತಾ ಕಾಲ ಕಳೆಯುತ್ತಿದ್ದಳು. ಹೀಗಾಗಿ ಆಕೆ ಯಾವ ಆಟ ಆಡುತ್ತಿದ್ದಾಳೆ. ಅದೇನಾದರೂ ಅಪಾಯಕಾರಿ ಆಟವಾಗಿರಬಹುದೇ ಎಂದು ಪತ್ತೆಹಚ್ಚಲು ನಾವು ಬಾಲಕಿ ಬಳಸುತ್ತಿದ್ದ ಮೊಬೈಲನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಪರಿಶೀಲನೆಗೆಂದು ಕಳುಹಿಸಿದ್ದೇವೆ ಎಂದು ಹೇಳಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಚಿವ ಸ್ಥಾನ ಸಿಗಬೇಕೆಂದು ಶಾಸಕರ ಅಭಿಮಾನಿಗಳು ಮಾಡಿದ್ದೇನು ಗೊತ್ತಾ?

ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರಕಾರದ ಸಚಿವ ಸಂಪುಟ ವಿಸ್ತರಣೆ ದಿನ ಫಿಕ್ಸ್ ಆಗಿರುವಂತೆ ಶಾಸಕರು ಒಂದೆಡೆ ...

news

ರಾಷ್ಟ್ರಮಟ್ಟದ ಶೂಟಿಂಗನಲ್ಲಿ ರಾಜ್ಯದ ಪ್ರತಿಭೆಗೆ ಬೆಳ್ಳಿ ಪದಕ

ಕೇರಳದ ತಿರುವಂತಪುರದಲ್ಲಿ ನಡೆದ ರಾಷ್ಟ್ರಮಟ್ಟದ ಶೂಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಹುಬ್ಬಳ್ಳಿ ಶೂಟಿಂಗ್ ...

news

ಬ್ಯಾಂಕ್ ಮುಂದೆ ರೈತರ ಪ್ರತಿಭಟನೆ

ಕರ್ನಾಟಕ ಬ್ಯಾಂಕ್ ಅಧಿಕಾರಿಗಳ ಕಿರುಕುಳ ತಪ್ಪಿಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ...

news

ವಿವಾಹಿತ ಮಹಿಳೆಯ ಭೀಕರ ಕೊಲೆ; ಪ್ರಿಯಕರ, ಪತಿ ಸುತ್ತ ಅನುಮಾನದ ಚಿತ್ತ?

22 ವರ್ಷ ಹರೆಯದ ಆ ಮಹಿಳೆ ತನ್ನ ಗಂಡನನ್ನು ಬಿಟ್ಟಿದ್ದಳು. ಪ್ರಿಯಕರನೊಂದಿಗೆ ಒಂದಷ್ಟು ದಿನ ಜೀವನ ...

Widgets Magazine