ಸೆಲ್ಫಿ ಹುಚ್ಚಿಗೆ ಆನೆಯಿಂದ ಬಲಿಯಾದ ಯುವಕ

ಬೆಂಗಳೂರು, ಗುರುವಾರ, 27 ಜುಲೈ 2017 (11:21 IST)

ಬೆಂಗಳೂರು: ಸೆಲ್ಫಿ ಕ್ರೇಜ್ ಜನರನ್ನು ಏನಲ್ಲ ಅಪಾಯಕ್ಕೆ ದೂಡುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ಗಜರಾಜನೊದಿಗೆ ಸೆಲ್ಪಿ ತೆಗೆದುಕೊಳ್ಳಲು ಹೋಗಿ ಆನೆ ತಿವಿದು ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿದೆ.
 
ಬಿಎಂಟಿಸಿ ಕಂಡೆಕ್ಟರ್ ವೊಬ್ಬರ ಪುತ್ರ ಅಭಿಲಾಷ್ ವಿ ಮೃತ ವ್ಯಕ್ತಿ ಎಂದು ತಿಳಿದುಬಂದಿದೆ. ಉದ್ಯಾನವನದಲ್ಲಿ ಅಭಿಲಾಷ್ ತನ್ನ ಸ್ನೇಹಿತರೊಂದಿಗೆ ಆನೆ ಪಕ್ಕದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿರುವಾಗ ಸುಂದರ್ ಎಂಬ ಆನೆ ಉದ್ರೇಕಗೊಂಡಿದೆ. ರೊಚ್ಚಿಗೆದ್ದ ಆನೆ ಅಭಿಲಾಷ್ ನನ್ನು ತಿವಿದು ಬಿಟ್ಟಿದೆ. ಆತನ ಸ್ನೇಹಿತರು ಅಪಾಯದಿಂದ ಪಾರಾಗಿದ್ದಾರೆ.
 
ಅಭಿಲಾಷ್ ಗೆ ಆನೆಗಳ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಅಭ್ಯಾಸ. ಈ ಹಿಂದೆ ಕೂಡ ಮದಗಜಗಳಾದ ರೌಡಿ ರಂಗ ಮತ್ತು ಐರಾವತನನ್ನು ಪಳಗಿಸಲು ಕ್ರಾಲ್ ನಲ್ಲಿ ಇಟ್ಟಿದ್ದಾಗಲೂ ಬಂದು ಸೆಲ್ಫಿ ತೆಗೆದುಕೊಂಡು ಹೋಗಿದ್ದರಂತೆ. ಆದರೆ ಈ ಬಾರಿ ರಜೆಯ ದಿನ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಬಂದು ಸಫಾರಿಯಲ್ಲಿದ್ದ ಸುಂದರ ಎಂಬ ಆನೆ ಬಳಿ ಸೆಲ್ಫಿ ತೆಗೆದುಕೊಳ್ಳಲು ಮುಂದಾದಾಗ ಆನೆ ದಾಳಿ ಮಾಡಿದೆ. ಈ ವೇಳೆ ತಪ್ಪಿಸಿಕೊಳ್ಳಲಾಗದೇ ಅಭಿಲಾಷ್ ಸ್ಥಳದಲ್ಲೆ ಮೃತಪಟ್ಟಿದ್ದಾರೆ. 
 ಇದರಲ್ಲಿ ಇನ್ನಷ್ಟು ಓದಿ :  
ಆನೆ ಸೆಲ್ಫಿ ಯುವಕ ಬಲಿ Bannerghatta Elephant Selfie Youth Death

ಸುದ್ದಿಗಳು

news

ಪ್ರಧಾನಿ ಮೋದಿಯನ್ನು ಸ್ವಾಗತಿಸಲು ಪುಸ್ತಕ ಹಿಡಿದು ನಿಂತಿದ್ದ ತಮಿಳುನಾಡು ಧುರೀಣರು!

ರಾಮೇಶ್ವರಂ: ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂರ ಸ್ಮಾರಕ ಉದ್ಘಾಟನೆಗೆ ಬಂದ ಪ್ರಧಾನಿ ...

news

ನಿತೀಶ್ ರಾಜಕೀಯ ಪಿತೂರಿ ಮೊದಲೇ ಗೊತ್ತಿತ್ತು ಎಂದ ರಾಹುಲ್ ಗಾಂಧಿ

ನವದೆಹಲಿ: ಬಿಹಾರದಲ್ಲಿ ರಾಜಕೀಯ ಹೈಡ್ರಾಮಾದ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ...

news

ಅಣ್ಣ ಮಾಡಿದ ತಪ್ಪಿಗೆ ತಂಗಿಗೆ ಅತ್ಯಾಚಾರಕ್ಕೊಳಗಾಗುವ ಶಿಕ್ಷೆ!

ಇಸ್ಲಾಮಾಬಾದ್: ನಮ್ಮ ದೇಶದಲ್ಲಿ ಮರ್ಯಾದೆ ಹತ್ಯೆ ಪ್ರಕರಣಗಳನ್ನು ಕೇಳಿದ್ದೇವೆ. ಆದರೆ ಪಾಕಿಸ್ತಾನದಲ್ಲಿ ...

news

ಅರ್ಧ ದಿನ ಮಾಜಿ ಸಿಎಂ ಆಗಿ ಮತ್ತೆ ಮುಖ್ಯಮಂತ್ರಿಯಾದ ನಿತೀಶ್ ಕುಮಾರ್!

ಪಾಟ್ನಾ: ಆರ್ ಜೆಡಿ ಪಕ್ಷಕ್ಕೆ ಸಡ್ಡು ಹೊಡೆದು ನಿನ್ನೆಯಷ್ಟೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ...

Widgets Magazine