ಅಲ್ಲಾ ಮೇಲೆ ಆಣೆ ಮಾಡಿ ಹೇಳ್ತೇನೆ, ಕಾಂಗ್ರೆಸ್‌ಗೆ ಮತ ಹಾಕುವಂತೆ ಎಚ್‌ಡಿಕೆ ಹೇಳಿದ್ರು: ಜಮೀರ್

ಮಂಡ್ಯ, ಶುಕ್ರವಾರ, 14 ಏಪ್ರಿಲ್ 2017 (14:12 IST)

Widgets Magazine

ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತಹಾಕುವಂತೆ ಕುಮಾರಸ್ವಾಮಿ ಆದೇಶ ನೀಡಿದ್ದರು. ಇದನ್ನು ನಾನು ಅಲ್ಲಾ ಮೇಲೆ ಆಣೆ ಮಾಡಿ ಹೇಳ್ತೇನೆ. ಕುಮಾರಸ್ವಾಮಿಯವರೂ ದೇವರ ಮೇಲೆ ಆಣೆ ಮಾಡಲಿ ಎಂದು  ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹ್ಮದ್ ಖಾನ್ ಸವಾಲ್ ಹಾಕಿದ್ದಾರೆ.
 
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದು ನಾವು ಎಚ್.ಡಿ.ದೇವೇಗೌಡರಲ್ಲ ಎಂದು ಹೇಳಿದ್ದಾರೆ.
 
ಚಲುವರಾಯ ಸಮಾವೇಶದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಬೇಕು ಎಂದಾಗ ದೇವೇಗೌಡರು ವಿರೋಧಿಸಿದ್ದರು. ಆದರೆ, ನಾವೆಲ್ಲರು ಕುಮಾರಸ್ವಾಮಿಯವರು ಸಿಎಂ ಆಗಲೇಬೇಕು ಎಂದು ಪಟ್ಟು ಹಿಡಿದಿದ್ದೇವು ಎಂದು ತಿಳಿಸಿದ್ದಾರೆ.
 
ಇದೀಗ ಕುಮಾರಸ್ವಾಮಿ ಮತ್ತು ದೇವೇಗೌಡರು ನಮ್ಮನ್ನು ದೂರವಿಡುತ್ತಿದ್ದಾರೆ. ನಾವು ಯಾವುದೇ ತಪ್ಪು ಮಾಡಿಲ್ಲ. ಅವರು ಹೇಳಿದಂತೆ ಕೇಳಿದ್ದೇವೆ. ಅವರ ಮಾತನ್ನು ಮೀರಿಲ್ಲ ಎಂದರು.
 
ಜೆಡಿಎಸ್ ಬಂಡಾಯ ಶಾಸಕರಿಗೆ ಪಕ್ಷದ ಬಾಗಿಲು ಬಂದ್ ಆಗಿದೆ ಎಂದು ದೇವೇಗೌಡರು ಹೇಳುತ್ತಿದ್ದಾರೆ. ನಾವೂ ಬೇರೆ ಪಕ್ಷವನ್ನು ಹುಡುಕಿಕೊಂಡು ಹೋಗುತ್ತೇವೆ. ಯಾರು ಯಾರಿಗೂ ಅನಿವಾರ್ಯವಲ್ಲ ಎಂದು ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹ್ಮದ್ ಖಾನ್ ತಿರುಗೇಟು ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಹೇಮಾಮಾಲಿನಿ ಪ್ರತಿನಿತ್ಯ ಮದ್ಯ ಸೇವಿಸ್ತಾರೆ, ಆತ್ಮಹತ್ಯೆಗೆ ಶರಣಾಗಿದ್ದಾರಾ: ಮಹಾರಾಷ್ಟ್ರ ಶಾಸಕ

ಮುಂಬೈ: ಬಾಲಿವುಡ್ ನಟಿ, ಬಿಜೆಪಿ ಸಂಸದೆ ಹೇಮಾಮಾಲಿನಿ ಪ್ರತಿನಿತ್ಯ ಮದ್ಯ ಸೇವಿಸುತ್ತಾರೆ. ಆದರೆ, ಅವರು ...

news

ಆಸ್ತಿ ವಿವರ ಸಲ್ಲಿಸದ ಶಾಸಕರ ವಿರುದ್ಧ ಕಠಿಣ ಕ್ರಮ: ಲೋಕಾಯುಕ್ತ

ಬೆಂಗಳೂರು: ಕಳೆದ ವರ್ಷದ ಆರ್ಥಿಕ ವಿವರ ಸಲ್ಲಿಸದ ಎಂಟು ಮಂದಿ ಶಾಸಕರ ವಿರುದ್ಧ ಕಠಿಣ ಕ್ರಮ ...

news

ಆಫ್ಘನ್ ಮೇಲೆ ಬಾಂಬ್ ದಾಳಿ: ಕೇರಳ ವ್ಯಕ್ತಿ ಸಾವು

ನವದೆಹಲಿ: ಆಫ್ಘಾನಿಸ್ತಾನದ ಐಸಿಸ್ ಉಗ್ರರ ಅಡಗುದಾಣದ ಮೇಲೆ ನಿನ್ನೆ ಅಮೆರಿಕಾ ನಡೆಸಿದ ಬಾಂಬ್ ದಾಳಿಯಲ್ಲಿ ...

news

ಪಕ್ಷದ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಹಾಡಲು ಕಾಂಗ್ರೆಸ್ ನಿರಾಕರಣೆ

ಡೆಹರಾಡೂನ್: ಪಕ್ಷದ ಅಧಿಕೃತ ಕಾರ್ಯಕ್ರಮಗಳಲ್ಲಿ ಒಂದು ತಿಂಗಳವರೆಗೆ ವಂದೇ ಮಾತರಂ ಹಾಡುವುದಿಲ್ಲ ಏನು ...

Widgets Magazine Widgets Magazine