ಕುಮಾರಸ್ವಾಮಿ ಹೇಳಿಕೆಗೆ ಜಮೀರ್ ಅಹ್ಮದ್ ತಿರುಗೇಟು

ಬೆಂಗಳೂರು, ಸೋಮವಾರ, 10 ಜುಲೈ 2017 (19:09 IST)

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡುತ್ತಾರೆ.  ಸೂಟ್‌ಕೇಸ್ ಯಾರು ತೆಗೆದುಕೊಂಡಿದ್ದರು ಎನ್ನುವುದನ್ನು ಹೆಸರಿಟ್ಟು ಹೇಳಲಿ ಎಂದು ಜಮೀರ್ ಅಹ್ಮದ್ ತಿರುಗೇಟು ನೀಡಿದ್ದಾರೆ.
 
ಕಳೆದ ಮೂರು ದಿನಗಳಿಂದ ಸುಮ್ಮನಿದ್ದ ಕುಮಾರಸ್ವಾಮಿ, ಪ್ರಜ್ವಲ್ ಹೇಳಿಕೆಗೆ ಉತ್ತರ ಸಿದ್ದಪಡಿಸಿಕೊಂಡು ಹೊರಬಂದಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
 
ಶರವಣ, ನಾರಾಯಣಸ್ವಾಮಿ ಇವರನ್ನೆಲ್ಲಾ ಎಂಎಲ್‌ಸಿ ಮಾಡಿದ್ದಾರೆ. ಅವರನ್ನು ಯಾವ ರೀತಿ ಎಂಎಲ್‌ಸಿ ಮಾಡಿದ್ದಾರೆ ಎನ್ನುವುದನ್ನು ಸ್ಪಷ್ಟಪಡಿಸಲಿ. ಸೂಟ್‌ಕೇಸ್ ಯಾರು ತೆಗೆದುಕೊಂಡಿದ್ದಾರೆ, ಕೊಟ್ಟಿದ್ದಾರೆ ಎನ್ನುವ ಬಗ್ಗೆ ತನಿಖೆಯಾಗಲಿ ಎಂದು ಸವಾಲ್ ಹಾಕಿದ್ದಾರೆ.
 
ಕುಮಾರಸ್ವಾಮಿ ತನಿಖೆಗೆ ಸಿದ್ದವಾಗಿದ್ದರೆ ನಾವು ತನಿಖೆಗಾಗಿ ಸಿದ್ದರಿದ್ದೇವೆ ಎಂದು ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹ್ಮದ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಕುಮಾರಸ್ವಾಮಿ ಜಮೀರ್ ಅಹ್ಮದ್ ಜೆಡಿಎಸ್ ಬಂಡಾಯ ಶಾಸಕ ಪ್ರಜ್ವಲ್ ರೇವಣ್ಣ Kumarswamy Zameer Ahmed Jds Rebel Prajval Revanna

ಸುದ್ದಿಗಳು

news

ಉತ್ತರ ಪ್ರದೇಶದ ಲಷ್ಕರ್ ಇ ತೊಯ್ಬಾ ಅಡಗುದಾಣಗಳ ಮೇಲೆ ದಾಳಿ: ಇಬ್ಬರ ಬಂಧನ

ಜಮ್ಮು-ಕಾಶ್ಮೀರ ಪೊಲೀಸರು ಉತ್ತರಪ್ರದೇಶದಲ್ಲಿದ್ದ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಯ ಅಡಗು ತಾಣಗಳ ಮೇಲೆ ...

news

ಶೋಭಾ ಕರಂದ್ಲಾಜೆ, ಡಿವಿಎಸ್ ಬೇನಾಮಿ ಆಸ್ತಿ ತನಿಖೆಯಾಗಲಿ: ಸಚಿವ ರೈ

ಬೆಂಗಳೂರು: ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಮತ್ತು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರ ಬೇನಾಮಿ ಆಸ್ತಿಯ ...

news

ಭೂತಾನ್ ನೆರವಿಗೆ ಭಾರತ ಬಂದಂತೆ ಪಾಕ್ ಬಯಸಿದರೆ ಕಾಶ್ಮೀರಕ್ಕೆ ಎಂಟ್ರಿ: ಚೀನಾದ ಹೊಸ ದಾಳ

ನೆರೆಯ ಕಪಟಿ ಚೀನಾರಾಷ್ಟ್ರ ಭಾರತವನ್ನ ದೊಕ್ಲಾಮ್ ಪ್ರದೇಶದಿಂದ ಹಿಮ್ಮೆಟ್ಟಿಸಲು ದಿನಕ್ಕೊಂದು ದಾರಿ ...

news

ಕೊನೆಗೂ ಸತ್ಯ ಒಪ್ಪಿಕೊಂಡ ಕಾಂಗ್ರೆಸ್

ನವದೆಹಲಿ: ಭಾರತ-ಚೀನಾ ನಡುವೆ ಉದ್ವಿಗ್ನ ಪರಿಸ್ಥಿತಿ ನಡುವೆಯೂ ಭಾರತದಲ್ಲಿರುವ ಚೀನಾ ರಾಯಭಾರಿಯನ್ನು ...

Widgets Magazine