ಎ.ರಾಜಾ ಎದುರು ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿಯ ನಾಮಪತ್ರ ತಿರಸ್ಕರಿಸಿದ ಚುನಾವಣಾ ಆಯೋಗ

ಚೆನ್ನೈ, ಮಂಗಳವಾರ, 8 ಏಪ್ರಿಲ್ 2014 (18:51 IST)

Widgets Magazine

ಏಪ್ರಿಲ್ 24 ರಂದು ನಡೆಯಲಿರುವ ಚುನಾವಣೆಗಾಗಿ ಮಾಜಿ ಕೇಂದ್ರ ಸಚಿವರಾದ ಎ ರಾಜಾ, ದಯಾನಿಧಿ ಮಾರನ್ ಮತ್ತು ಅನ್ಬುಮಣಿ ರಾಮದೊಸ್‍ರವರನ್ನು ಒಳಗೊಂಡಂತೆ ಸಲ್ಲಿಸಲ್ಪಟ್ಟಿದ್ದ 1,000 ನಾಮಪತ್ರಗಳು ಪರಿಶೀಲನೆಗೊಳಪಟ್ಟು ಅರ್ಹತೆಯನ್ನು ಗಳಿಸಿವೆ.

PTI

ತನ್ನ ತಂದೆಯ ಭದ್ರಕೋಟೆ ಶಿವಗಂಗಾ ಕ್ಷೇತ್ರದಿಂದ ಚೊಚ್ಚಲ ಬಾರಿ ಕಣಕ್ಕಿಳಿದಿರುವ ಮಾಜಿ ಕೇಂದ್ರ ಸಚಿವ ಕೇಂದ್ರ ಸಚಿವ ಪಿ ಚಿದಂಬರಂ ಪುತ್ರ ಕಾರ್ತಿ, ಮಾಜಿ ಕೇಂದ್ರಸಚಿವ ಬಾಲು, ಎಮ್‌ಡಿಎಂಕೆ ಸಂಸ್ಥಾಪಕ ವೈಕೊ, ಬಿಜೆಪಿ ರಾಜ್ಯಾಧ್ಯಕ್ಷ ಪೊನ್ ರಾಧಾಕೃಷ್ಣನ್ ನಾಮ ನಿರ್ದೇಶನಗಳಿಗೆ ಚುನಾವಣಾ ಅಧಿಕಾರಿಗಳು ಒಪ್ಪಿಗೆ ಸೂಚಿಸಿದ್ದಾರೆ.

"1,318 ನಾಮಪತ್ರಗಳನ್ನು ಸಲ್ಲಿಸಲಾಗಿತ್ತು. ಸೋಮವಾರ ನಡೆದ ಪರಿಶೀಲನೆಯಲ್ಲಿ ಅದರಲ್ಲಿ 300ಕ್ಕಿಂತ ಹೆಚ್ಚು ನಾಮಪತ್ರಗಳು ತಿರಸ್ಕೃತಗೊಂಡಿವೆ. ಅವುಗಳಲ್ಲಿ ಹೆಚ್ಚಿನವು ಸ್ವತಂತ್ರ ಅಭ್ಯರ್ಥಿಗಳದ್ದು" ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ಬಿಜೆಪಿ ಅಭ್ಯರ್ಥಿ ಎಸ್ ಗುರುಮೂರ್ತಿ ಸಲ್ಲಿಸಿದ್ದ ನಾಮಪತ್ರವನ್ನು, ತಾಂತ್ರಿಕ ಆಧಾರದ ಮೇಲೆ ತಿರಸ್ಕರಿಸಲಾಯಿತು. ಅವರು ಫಾರ್ಮ್‌ನ್ನು ವಿಳಂಬವಾಗಿ ಸಲ್ಲಿಸಿದ್ದರು" ಎಂದು ಚುನಾವಣಾ ಅಧಿಕಾರಿ ಪಿ ಶಂಕರ್ ತಿಳಿಸಿದ್ದಾರೆ.

"ಆದರೆ, ಬಿಜೆಪಿ ಅಭ್ಯರ್ಥಿಗೆ ಪರಿಗಣನೆಗಾಗಿ ಮೇಲ್ಮನವಿ ಸಲ್ಲಿಸುವಂತೆ ಮನವಿ ಮಾಡಿ ಎಂದು ತಿಳಿಸಲಾಗಿದೆ ಮತ್ತು ಈ ಕುರಿತು ಮಂಗಳವಾರ ನಿರ್ಧಾರವಾಗಲಿದೆ" ಎಂದು ಶಂಕರ್ ಹೇಳಿದರು.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

ಈ ಬೆತ್ತಲೆ ಮಹಿಳೆ ಮಾಡಿದಳು ಗದ್ದಲ

ಸೇಂಟ್‌‌‌‌‌ ಪೀಟರ್ಸ್‌‌‌ಬರ್ಗ್‌‌‌‌ : ಒಬ್ಬ ಮಹಿಳೆ ಬೆತ್ತಲಾಗಿ ಮ್ಯಾಕ್‌‌‌ಡೊನಾಲ್ಡ್‌ ಒಳಗಡೆ ಬಂದು ಗದ್ದಲ ...

Widgets Magazine