Widgets Magazine

ಕೆಲವರು ರಾಜಕಾರಣದಿಂದ ನೂರಾರು ಕೋಟಿ ಸಂಪಾದಿಸಿದ್ದಾರೆ: ಕಾಂಗ್ರೆಸ್ ಸಂಸದ

ಅಂಬಾಲಾ| ರಾಜೇಶ್ ಪಾಟೀಲ್|
PTI
ಹಲವಾರು ರಾಜಕಾರಣಿಗಳು ಪ್ರವೇಶಿಸುವ ಮೂಲಕ ನೂರಾರು ಕೋಟಿ ರೂಪಾಯಿಗಳನ್ನು ಸಂಪಾದಿಸಿದ್ದಾರೆ ಎಂದು ಹರಿಯಾಣಾದ ಕಾಂಗ್ರೆಸ್ ಸಂಸದ ಚೌಧರಿ ಬಿರೇಂದರ್ ಸಿಂಗ್ ಹೇಳಿಕೆ ನೀಡಿರುವುದು ರಾಜಕೀಯ ವಲಯದಲ್ಲಿ ಕೋಲಾಹಲ ಉಂಟು ಮಾಡಿದೆ.

ಕೆಲ ತಿಂಗಳುಗಳ ಹಿಂದೆ 100 ಕೋಟಿ ರೂಪಾಯಿ ಕೊಟ್ಟರೆ ರಾಜ್ಯಸಭೆ ಸೀಟು ದೊರೆಯುತ್ತದೆ ಎಂದು ಹೇಳಿಕೆ ನೀಡುವ ಮೂಲಕ ಚೌಧರಿ ಬಿರೇಂದರ್ ಸಿಂಗ್ ರಾಜಕಾರಣಿಗಳ ಕೆಂಗೆಣ್ಣಿಗೆ ಗುರಿಯಾಗಿದ್ದರು.

ಪ್ರಸ್ತುತ ಒಬ್ಬ ವ್ಯಕ್ತಿಗೆ ಯಾವುದೇ ಕೆಲಸ ದೊರೆಯದಿದ್ದರೆ ಅಂತಹ ವ್ಯಕ್ತಿಗಳು ರಾಜಕೀಯವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಕೆಲವರಂತು ಲಕ್ಷಾಂತರ ರೂಪಾಯಿಗಳಿಂದ ಕೋಟ್ಯಾಂತರ ರೂಪಾಯಿಗಳವರೆಗೆ ಸಂಪಾದನೆ ಮಾಡಿ ಒಳ್ಳೆಯ ರಾಜಕಾರಣಿಗಳನ್ನು ಮೂಲೆಗೆ ತಳ್ಳುತ್ತಾರೆ ಎಂದು ಲೇವಡಿ ಮಾಡಿದರು.

ಸಂಸದ ಚೌಧರಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮಾಜಿ ಐಪಿಎಸ್ ಅಧಿಕಾರಿ ಮತ್ತು ಸಾಮಾಜಿಕ ಕಾರ್ಯಕರ್ತೆ ಕಿರಣ್ ಬೇಡಿ, ರಾಜಕಾರಣಿಗಳು ಸಚಿವರಾಗುವ ಮುನ್ನ ತಮ್ಮ ಆಸ್ತಿಯನ್ನು ಬಹಿರಂಗಪಡಿಸಬೇಕು.ಸಚಿವ ಪದವಿ ಅಂತ್ಯಗೊಂಡ ನಂತರ ಕೂಡಾ ಆಸ್ತಿ ಮೊತ್ತವನ್ನು ಬಹಿರಂಗಪಡಿಸಬೇಕು. ಆಸ್ತಿ ಸಂದಾಪನೆ ಅಂತರ ಹೆಚ್ಚಾದಲ್ಲಿ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಆಮ್ ಆದ್ಮಿ ಪಕ್ಷದ ಮುಖಂಡ ಪ್ರಶಾಂತ ಮಾತನಾಡಿ ಸಂಸದರ ಹೇಳಿಕೆ ಸಂಪೂರ್ಣ ಸತ್ಯವಾಗಿದೆ. ಹಣಗಳಿಸಲು ರಾಜಕೀಯ ಸುಲಭ ಮಾರ್ಗವಾಗಿದೆ ಎಂದು ತಿಳಿಸಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :