Widgets Magazine
Widgets Magazine

ಜಿಎಸ್ ಟಿ ಎಫೆಕ್ಟ್: ಬಾಯಿಸುಡುತ್ತಿದೆ ಕಾಫಿ-ಟೀ ಬೆಲೆ

ಬೆಂಗಳೂರು, ಶನಿವಾರ, 1 ಜುಲೈ 2017 (12:29 IST)

Widgets Magazine

ಬೆಂಗಳೂರು:ಜಿಎಸ್ ಟಿ ಜಾರಿಯಾದ ಹಿನ್ನಲೆಯಲ್ಲಿ ರೆಸ್ಟ್ರೋರೆಂಟ್ ಗಳಲ್ಲಿ ಕಾಫಿ, ತಿಂಡಿ ರೇಟ್ ಗಳು ಗಗನಕ್ಕೇರಿವೆ. ಮುಂಜಾನೆ ಬಿಸಿ ಬಿಸಿ ಕಾಫಿ ಹೀರಲೆಂದು ಹೋಟೆಲ್ ಗಳಿಗೆ ತೆರಳಿದ ಬೆಂಗಳೂರು ಗ್ರಾಹಕರಿಗೆ ಕಾಫಿ ಬಿಸಿ ಜತೆ ಜಿಎಸ್ ಟಿ ಬಿಸಿಯೂ ತಟ್ಟಿ ಬಾಯಿಸುಟ್ಟುಕೊಳ್ಳುವಂತಾಗಿದೆ.
 
ಈವರೆಗೆ ಕಾಫಿ, ಟೀ.ಗೆ 20 ರೂ. ನೀಡುತ್ತಿದ್ದ ಗ್ರಾಹಕ ಜಿಎಸ್‌ಟಿಯಿಂದಾಗಿ ಇಂದು ಶೇ.18ರಷ್ಟು ಹೆಚ್ಚಿನ ಹಣ ನೀಡುವಂತಾಗಿದೆ. ಅಂದರೆ 20 ರೂಗೆ ಸಿಗುತ್ತಿದ್ದ ಕಾಪಿಗೆ ಇಂದು ಒಟ್ಟು 38 ರೂ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ತಿಂಡಿ ವಿಷಯದಲ್ಲಿಯೂ ಕೂಡ ಇದೇ ರೀತಿಯ ದರ ಹೆಚ್ಚಳ ಮಾಡಲಾಗಿದೆ. 
 
ಈವರೆಗೆ ಶೇ.4 ಮತ್ತು ಶೇ.6 ತೆರಿಗೆ ಸೇರಿ ಒಟ್ಟು ಶೇ.10ರಷ್ಟು ತೆರಿಗೆ ಪಾವತಿ ಮಾಡುತ್ತಿದ್ದ ರೆಸ್ಟೋರೆಂಟ್‌ಗಳು ಇದೀಗ ಶೇ.18ರಷ್ಟು ತೆರಿಗೆ ಪಾವತಿ ಮಾಡಬೇಕಿದೆ. ಶೇ.8ರಷ್ಟು ಹೆಚ್ಚುವರಿ ಪಾವತಿ ಮಾಡುತ್ತಿದ್ದು, ಇದನ್ನು ಗ್ರಾಹಕರಿಂದಲೇ ವಸೂಲಿ ಮಾಡಲಾಗುತ್ತಿದೆ. ಆದರೆ ಜನಸಾಮಾನ್ಯರೇ ಹೆಚ್ಚಾಗಿ ಹೋಗುವ ದರ್ಶಿನಿಗಳಲ್ಲಿ ಯಾವುದೇ ರೀತಿಯ ದರ ಬದಲಾವಣೆ ಮಾಡಿಲ್ಲ. 
 



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಜಿಎಸ್ ಟಿ ಪರಿಣಾಮ ಬೆಂಗಳೂರು ಕಾಫಿ ತಿಂಡಿ ಬೆಲೆ ಹೆಚ್ಚಳ Coffee Gst Effect Tea Rate Tongue Burn

Widgets Magazine

ಸುದ್ದಿಗಳು

news

ಗರ್ಭಿಣಿಯನ್ನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಂಬ್ಯುಲೆನ್ಸ್ ಸುತ್ತುವರೆದ 12 ಸಿಂಹಗಳು

ಪ್ರತಿಯೊಂದು ಪ್ರಸವವೂ ಹೆಣ್ಣಿಗೆ ಪುನರ್ಜನ್ಮ ಎನ್ನುತ್ತಾರೆ. ಗುಜರಾತ್`ನ ಮಂಗುಬೆನ್ ಮಕ್ವಾನಾ ಎಂಬ ಮಹಿಳೆಯ ...

news

ಕರ್ತವ್ಯ ನಿರತ ಪೊಲೀಸ್ ಅಧಿಕಾರಿಯ ಬರ್ಬರ ಹತ್ಯೆ

ಕರ್ತವ್ಯ ನಿರತ ಪೊಲೀಸ್ ಅಧಿಕಾರಿಯನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ...

news

ಕಾವೇರಿ ಮಂಡಳಿ ರಚಿಸಿದರೆ ಮಾತ್ರ ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿಗೆ ಬೆಂಬಲ: ಪಿಎಂಕೆ ಷರತ್ತು

ತಿಂಗಳೊಳಗಾಗಿ ಕಾವೇರಿ ಮಂಡಳಿ ರಚಿಸಿದರೆ ಮಾತ್ರ ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮನಾಥ ಕೋವಿಂದ್ ...

news

17 ವರ್ಷಗಳ ಹಗ್ಗಜಗ್ಗಾಟದ ಬಳಿಕ ಜಿಎಸ್`ಟಿ ಜಾರಿ: ಇಲ್ಲಿದೆ ಕಂಪ್ಲೀಟ್ ಚಿತ್ರಣ

ಜಿಎಸ್`ಟಿಯನ್ನ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬಿಜೆಪಿ ವಿರೋಧಿಸಿತ್ತು. ಇದೀಗ, ಬಿಜೆಪಿ ಅಧಿಕಾರಕ್ಕೆ ...

Widgets Magazine Widgets Magazine Widgets Magazine