Widgets Magazine

ನರೇಂದ್ರ ಮೋದಿ ಕನಸು ನನ್ನ ಕನಸು ಒಂದೇ: ಶಶಿ ತರೂರ್

ಇಂದೋರ್| ರಾಜೇಶ್ ಪಾಟೀಲ್|
PTI
ದೇಶದ ಪ್ರಧಾನಿಯಾಗುವ ಕನಸು ಕಾಣುತ್ತಿಲ್ಲ ಎನ್ನುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹೇಳಿಕೆಗೆ ತಿರುಗೇಟು ನೀಡಿ, ಮೋದಿ ಕೂಡಾ ಯಾವತ್ತೂ ಪ್ರಧಾನಿಯಾಗಬಾರದು ಎನ್ನುವ ಕನಸನ್ನು ನಾನು ಕಾಣುತ್ತಿದ್ದೇನೆ. ಇಬ್ಬರು ಕನಸು ಒಂದೇ ಆಗಿವೆ ಎಂದು ಕಾಂಗ್ರೆಸ್ ಮುಖಂಡ ಮತ್ತು ಕೇಂದ್ರ ಸಚಿವ ಶಶಿ ತರೂರ್ ಹೇಳಿದ್ದಾರೆ

ಮುಂಬರುವ 2017ರ ವರೆಗೆ ಗುಜರಾತ್ ಜನತೆಯ ಸೇವೆ ಮಾಡುವುದೇ ನನ್ನ ಗುರಿ. ಪ್ರಧಾನಿಯಾಗುವ ಕನಸು ಕಂಡವನಲ್ಲ ಎನ್ನುವ ಮೋದಿ ಹೇಳಿಕೆಗೆ ಪ್ರತಿಕ್ರಿಯೆ ನೀಡುವಂತೆ ಸುದ್ದಿಗಾರರು ಕೇಂದ್ರ ಸಚಿವ ಶಶಿ ತರೂರ್‌ಗೆ ಕೋರಿದರು.

ಪ್ರಧಾನಮಂತ್ರಿಯಾಗುವ ಬಗ್ಗೆ ಯಾವತ್ತೂ ಕನಸು ಕಂಡಿಲ್ಲ ಎಂದು ಮೋದಿ ಹೇಳಿದ್ದಾರೆ. ಅವರು ಯಾವತ್ತೂ ಪ್ರಧಾನಿಯಾಗಬಾರದು ಎನ್ನುವ ಕನಸು ನಾನು ಕಾಣುತ್ತಿದ್ದೇನೆ ಎಂದು ಮೋದಿ ಲೇವಡಿ ಮಾಡಿದ್ದಾರೆ.

ಮಧ್ಯಪ್ರದೇಶ ಸರಕಾರ ಐಐಟಿ ಸಂಸ್ಥೆಯ ನಿರ್ಮಾಣಕ್ಕಾಗಿ ಶಾಶ್ವತವಾದ ಸರಕಾರಿ ಭೂಮಿಯನ್ನು ನೀಡುವ ಪ್ರಸ್ತಾವನೆಗೆ ವೇಗದ ಚಾಲನೆ ನೀಡಬೇಕಾಗಿದೆ ಎಂದು ತರೂರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :