Widgets Magazine

ಬಡ ಕಾರ್ಮಿಕನ ಪುತ್ರ ವಿಮಾನದಲ್ಲಿ ಹಾರೋದನ್ನು ಕಾಂಗ್ರೆಸ್ ಬಯಸತ್ತೆ: ರಾಹುಲ್ ಕನಸು

ವೆಬ್‌ದುನಿಯಾ|
PR
PR
ಬಾರ್ಮರ್, ರಾಜಸ್ಥಾನ: ಬಿಜೆಪಿಯ ನೂತನವಾಗಿ ಆಯ್ಕೆಯಾದ ಪ್ರಧಾನಮಂತ್ರಿ ಅಭ್ಯರ್ಥಿ ಮೋದಿಯ ಅಭಿವೃದ್ಧಿ ಕಾರ್ಯಕ್ರಮವನ್ನು ಕಾಂಗ್ರೆಸ್ ನಂಬರ್ 2 ರಾಹುಲ್ ಗಾಂಧಿ ಪರೋಕ್ಷವಾಗಿ ಜಾಡಿಸಿದ್ದಾರೆ. ರಾಜಸ್ಥಾನದ ಬಾರ್ಮರ್‌ನಲ್ಲಿ ರಾಹುಲ್ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡುತ್ತಾ,ಪ್ರತಿಪಕ್ಷದ ರೀತಿಯಲ್ಲಿ ನಾವೂ ಕೂಡ ಅಭಿವೃದ್ಧಿ ಕುರಿತು, ರಸ್ತೆಗಳನ್ನು, ರೈಲು, ಬಂದರು, ಶಾಲೆ ಮತ್ತು ಸೇತುವೆಗಳನ್ನು ನಿರ್ಮಿಸುವ ಕುರಿತು ಮಾತನಾಡ್ತೇವೆ. ಆದರೆ ಅವರಿಗೆ ಭಿನ್ನವಾಗಿ ಈ ಮೂಲಸೌಲಭ್ಯಗಳನ್ನು ನಿರ್ಮಿಸಿದ ಬಡ ಕಾರ್ಮಿಕರ ಅಭಿವೃದ್ಧಿಯನ್ನು ನಾವು ಬಯಸ್ತೇವೆ ಎಂದು ರಾಹುಲ್ ಹೇಳಿದರು.

ಪ್ರತಿಪಕ್ಷ ಅಂದರೆ ಬಿಜೆಪಿ ಬರೀ ಪ್ರಗತಿಯನ್ನು ಮಾತ್ರ ಬಯಸುತ್ತದೆ. ಆದರೆ ಬಡವರು ದೊಡ್ಡ ಕನಸು ಕಾಣುವುದನ್ನು ಕಾಂಗ್ರೆಸ್ ಬಯಸುತ್ತದೆ. ಬಡ ಕಾರ್ಮಿಕ ಆಕಾಶದತ್ತ ನೋಡಿ ಅವನ ಮಗ ಒಂದು ದಿನ ವಿಮಾನದಲ್ಲಿ ಹಾರುವ ಕನಸು ಈಡೇರುವುದನ್ನು ಕಾಂಗ್ರೆಸ್ ಬಯಸುತ್ತದೆ. ಹೀಗೆ ಹೇಳುತ್ತಾ, ಅವರು ಪಕ್ಷದ ಮಹತ್ವದ ಎಂಎನ್‌ಆರ್‌ಜಿಎ ಯೋಜನೆ, ಆಹಾರ ಭದ್ರತೆ ಮತ್ತು ಭೂ ಸ್ವಾಧೀನ ಯೋಜನೆಯ ಬಗ್ಗೆ ಗಮನ ಸೆಳೆದರು.


ಇದರಲ್ಲಿ ಇನ್ನಷ್ಟು ಓದಿ :