Widgets Magazine

ಭ್ರಷ್ಟಾಚಾರದ ವಿಷಯದಲ್ಲಿ ಬಿಜೆಪಿಯಿಂದ ಸದಾ ದ್ವಂದ ನೀತಿ : ಸೋನಿಯಾ ತರಾಟೆ

ಭೋಪಾಲ್| ರಾಜೇಶ್ ಪಾಟೀಲ್|
PTI
ಕೇಂದ್ರದಲ್ಲಿರುವ ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿದ್ದವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಮಧ್ಯಪ್ರದೇಶದಲ್ಲಿ ಲೋಕಾಯುಕ್ತರಿಂದ ತನಿಖೆಯನ್ನು ಎದುರಿಸುತ್ತಿರುವ ಬಿಜೆಪಿ ಸಚಿವರ ವಿರುದ್ಧ ಪಕ್ಷ ಯಾವ ಕ್ರಮ ಕೈಗೊಂಡಿದೆ ಎಂದು ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ ತಿರುಗೇಟು ನೀಡಿದ್ದಾರೆ.

ಝಾಬುವಾ ಜಿಲ್ಲೆಯಲ್ಲಿ ಆಯೋಜಿಸಲಾದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಮುಖಂಡರಿಂದ ಭ್ರಷ್ಟಾಚಾರದ ಆರೋಪಗಳು ಗಮನಕ್ಕೆ ಬಂದಾಗ ಯುಪಿಎ ಸರಕಾರ ಕೂಡಲೇ ಕಠಿಣ ಕ್ರಮ ಕೈಗೊಂಡು ಹುದ್ದೆಗಳಿಂದ ಅಮಾನತ್ತುಗೊಳಿಸಿದೆ. ಮಧ್ಯಪ್ರದೇಶದಲ್ಲಿರುವ ಅನೇಕ ಬಿಜೆಪಿ ಸಚಿವರ ಮನೆಗಳಲ್ಲಿ ಲೋಕಾಯುಕ್ತರು ನೂರಾರು ಕೋಟಿ ರೂಪಾಯಿ ಪತ್ತೆ ಮಾಡಿದ್ದಾರೆ. ಅಂತಹ ಭ್ರಷ್ಟ ಸಚಿವರ ವಿರುದ್ಧ ಬಿಜೆಪಿ ಯಾವ ಕ್ರಮ ತೆಗೆದುಕೊಂಡಿದೆ ಎಂದು ಜನತೆಯ ಮುಂದಿಡಲಿ ಎಂದು ಸವಾಲ್ ಹಾಕಿದರು.

ಭ್ರಷ್ಟಾಚಾರದ ವಿಷಯಕ್ಕೆ ಬಂದಾಗ ಬಿಜೆಪಿ ಸದಾ ದಂದ್ವ ನೀತಿಯನ್ನು ಅನುಸರಿಸುತ್ತಿದೆ. ರಾಜ್ಯದಲ್ಲಿ ರೈತರು ಆತ್ಮಹತ್ಯೆಗೆ ಮೊರೆಹೋಗುತ್ತಿದ್ದಾರೆ. ರೈತರು ಸೂಕ್ತ ಸಮಯದಲ್ಲಿ ರಸಗೊಬ್ಬರ ಪಡೆಯುತ್ತಿದ್ದಾರೆಯೇ? ರಸಗೊಬ್ಬರ ಪಡೆಯಲು ಜನತೆ ಬಿಜೆಪಿ ನಾಯಕರ ಮನೆಗೆ ಹೋಗುವಂತಹ ಸ್ಥಿತಿ ಎದುರಾಗಿದೆ ಎಂದು ಬಿಜೆಪಿ ವಿರುದ್ಧ ಸೋನಿಯಾ ವಾಗ್ದಾಳಿ ನಡೆಸಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :