ತಾಳಿ ಕಿತ್ತು ವರನ ಕೈಗಿಟ್ಟು ಬಾಯ್`ಫ್ರೆಂಡ್ ಜೊತೆ ವಧು ಎಸ್ಕೇಪ್..!

ತಿರುವನಂತಪುರ, ಸೋಮವಾರ, 31 ಜುಲೈ 2017 (14:56 IST)

Widgets Magazine

ಮದುವೆಯಾದ ಕೆಲವೇ ನಿಮಿಷಗಳಲ್ಲಿ ವಧು ತಾಳಿ ಕಿತ್ತು ವರನ ಕೈಯಲ್ಲಿಟ್ಟು ಲವರ್ ಜೊತೆ ಹೋಗಿರುವ ಘಟನೆ ಕೇರಳದ ಪ್ರಸಿದ್ಧ ಗುರುವಾಯೂರ್ ದೇಗುಲದಲ್ಲಿ ನಡೆದಿದೆ ಎಂದು ವರದಿಯಾಗಿದೆ.
 


ಜುಲೈ 30ರಂದು ಈ ಘಟನೆ ನಡೆದಿದ್ದು, ತ್ರಿಶೂರ್ ಮುಲ್ಲಾಸ್ಸೆರಿ ಮೂಲದ ವಧು ಈ ಕೃತ್ಯ ಎಸಗಿದ್ದಾಲೆ. ಯಾವುದೇ ಅಡೆತಡೆಯಿಲ್ಲದೆ ಮದುವೆ ಸರಾಗವಾಗಿ ನಡೆದಿತ್ತು. ಮದುವೆ ಸೊಲ್ಲೆತ್ತದ ವಧು ತಲೆ ಬಗ್ಗಿಸಿ ತಾಳಿ ಕಟ್ಟಿಸಿಕೊಂಡಿದ್ದಳು. ಮದುವೆ ಬಳಿಕ ವಧು-ವರರಿಬ್ಬರು ದೇವರ ದರ್ಶನಕ್ಕೆ ತೆರಳಿದಾಗ ಭಕ್ತರ ಸಾಲಿನಲ್ಲಿ ತನ್ನ ಲವರ್ ಇರುವುದನ್ನ ಗಮನಿಸಿದ್ದಾಳೆ. ಒಂದೇ ಕ್ಷಣದಲ್ಲಿ ಆತನ ಜೊತೆ ತೆರಳಲು ನಿರ್ಧರಿಸಿದ ವಧು, ತಾಳಿ ಕಿತ್ತು ವರನ ಕೈಗೆ ಕೊಟ್ಟಿದ್ದಾಳೆ. ವರನ ಸಂಬಂಧಿಕರು ಎಷ್ಟೇ ಪ್ರಯತ್ನಪಟ್ಟರೂ ವಧುವಿನ ಮನವೊಲಿಸಲು ಸಾಧ್ಯವಾಗಲಿಲ್ಲ.
 
ತನ್ನ ಪ್ರೀತಿ ಕುರಿತಂತೆ ವಧು, ವರನಿಗೆ ಮೊದಲೇ ತಿಳಿಸಿದ್ದಳೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಘಟನೆ ಹಿನ್ನೆಲೆಯಲ್ಲಿ ವಧು-ವರರ ಕುಟುಂಬಗಳ ನಡುವೆ ದೊಡ್ಡ ಗಲಭೆಯೇ ನಡೆದಿದೆ. ಪೊಳಿಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ಧಾರೆ. ವರನ ಕಡೆಯವರು 15 ಲಕ್ಷ ರೂ. ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಕಾಂಗ್ರೆಸ್ ನಾಯಕರ ತಾಳಕ್ಕೆ ತಕ್ಕಂತೆ ಕುಣಿಯಬೇಡಿ: ಮಠಾಧೀಶರಿಗೆ ಶೆಟ್ಟರ ಸಲಹೆ

ಹುಬ್ಬಳ್ಳಿ: ಲಿಂಗಾಯುತ ಪ್ರತ್ಯೇಕ ಧರ್ಮ ಕುರಿತಂತೆ ಕಾಂಗ್ರೆಸ್ ನಾಯಕರ ತಾಳಕ್ಕೆ ತಕ್ಕಂತೆ ಕುಣಿಯಬೇಡಿ ಎಂದು ...

news

ವೀರಶೈವ ಲಿಂಗಾಯುತ ಪ್ರತ್ಯೇಕ ಧರ್ಮ ಬೇಡ: ಸಚಿವ ಪಾಟೀಲ್

ಬೆಂಗಳೂರು: ವೀರಶೈವ ಲಿಂಗಾಯುತ ಪ್ರತ್ಯೇಕ ಧರ್ಮ ಬೇಡ ಎಂದು ಜಲಸಂಪನ್ಮೂಲ ಖಾತೆ ಸಚಿವ ಎಂ.ಬಿ.ಪಾಟೀಲ್ ...

news

ವಿಮಾನ ಹತ್ತಿದ್ದು 191 ಮಂದಿ ಇಳಿದಾಗ 192 ಪ್ರಯಾಣಿಕರಿದ್ದರು..!

ಕೊಲಂಬಿಯಾ ರಾಜಧಾನಿ ಬೊಗೋಟಾದಿಂದ ಹೊರಟ ವಿಮಾನದಲ್ಲಿ 191 ಮಂದಿ ಪ್ರಯಾಣಿಕರು ಹತ್ತಿದ್ದರು. ...

news

ಪ್ರಧಾನಿ ಮೋದಿ ಭಸ್ಮಾಸುರನಂತೆ: ವಿ.ಎಸ್, ಉಗ್ರಪ್ಪ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಭಸ್ಮಾಸುರನಂತೆ. ಕೈ ಇಟ್ಟಲೆಲ್ಲಾ ಭಸ್ಮವಾಗುತ್ತಾ ಹೋಗುತ್ತದೆ ಎಂದು ...

Widgets Magazine