Widgets Magazine

ಮನೆಯಲ್ಲಿ ಶೌಚಾಲಯವಿಲ್ಲದ ಕುಟುಂಬಗಳ ಪುತ್ರಿಯರನ್ನು ವಿವಾಹವಾಗಬೇಡಿ: ನಿತೀಶ್ ಕುಮಾರ್

ಪಾಟ್ನಾ| ರಾಜೇಶ್ ಪಾಟೀಲ್|
PTI
ಮನೆಯಲ್ಲಿ ಹೊಂದಿರದ ಕುಟುಂಬಗಳ ಪುತ್ರಿಯರನ್ನು ವಿವಾಹವಾಗಬೇಡಿ ಎಂದು ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಕರೆ ನೀಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮನೆಯಲ್ಲಿ ಶೌಚಾಲಯವಿಲ್ಲದ ಕುಟುಂಬಗಳ ಹೆಣ್ಣುಮಕ್ಕಳು ನೈಸರ್ಗಿಕ ಕರೆಗಾಗಿ ಹೊರಗಡೆ ಹೋಗುವುದರಿಂದ ಅತ್ಯಾಚಾರದಂತಹ ಅನೇಕ ದೌರ್ಜನ್ಯಗಳಿಗೆ ಕಾರಣವಾಗುತ್ತಿವೆ ಎಂದು ಹೇಳಿದ್ದಾರೆ.

ಮನೆಯಲ್ಲಿ ಶೌಚಾಲಾಯಗಳನ್ನು ನಿರ್ಮಿಸುವುದರಿಂದ ಕೇವಲ ಆರೋಗ್ಯದ ಸಮಸ್ಯೆ ಮಾತ್ರ ಬಗೆಹರಿಯುವುದಿಲ್ಲ. ಪ್ರತಿಷ್ಠೆಗೂ ಕಾರಣವಾಗುತ್ತದೆ ಎಂದು ತಿಳಿಸಿದ್ದಾರೆ.

ಎಪಿಎಲ್ ಮತ್ತು ಬಿಪಿಎಲ್ ಕುಟುಂಬಗಳಿಗೆ ಶೌಚಾಲಯ ನಿರ್ಮಾಣಕ್ಕಾಗಿ ಸರಕಾರ 10 ಸಾವಿರ ರೂಪಾಯಿಗಳ ಸಹಾಯಧನ ನೀಡುತ್ತಿದೆ . ಸಾರ್ವಜನಿಕರ ಸರಕಾರಿ ಯೋಜನೆಯ ಲಾಭಪಡೆಯಬೇಕು ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಕೋರಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :