ರೈತರಿಂದ ಭೂಮಿ ಕಸಿದು ಕೈಗಾರಿಕೋದ್ಯಮಿಗಳಿಗೆ ನೀಡುತ್ತಿರುವ ಮೋದಿ, ಹೂಡಾ: ಕೇಜ್ರಿವಾಲ್

ರೋಹ್ಟಕ್, ಶುಕ್ರವಾರ, 28 ಮಾರ್ಚ್ 2014 (16:24 IST)

Widgets Magazine

PTI
ಕೈಗಾರಿಕೋದ್ಯಮಿಗಳನ್ನು ಓಲೈಸಲು ರೈತರ ಫಲವತ್ತಾದ ಭೂಮಿಯನ್ನು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಹರಿಯಾಣಾದ ಮುಖ್ಯಮಂತ್ರಿ ಭೂಪಿಂದರ್ ಹೂಡಾ ಕಸಿದುಕೊಳ್ಳುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.

ಕಳೆದ ಮೂರು ದಿನಗಳಿಂದ ಹರಿಯಾಣಾದಲ್ಲಿ ರೋಡ್‌ಶೋ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕೇಜ್ರಿವಾಲ್, ಹರಿಯಾಣಾ ಮುಖ್ಯಮಂತ್ರಿ ರೈತರಿಂದ ಭೂಮಿಯನ್ನು ಕಸಿದು ರಾಬರ್ಟ್ ವಾದ್ರಾ ಮತ್ತು ಮುಕೇಶ್ ಅಂಬಾನಿಗೆ ಕೊಡುತ್ತಿದ್ದಾರೆ. ವಾದ್ರಾ ಮತ್ತು ಮುಕೇಶ್ ಅಂಬಾನಿಯವರ ಅವ್ಯವಹಾರಗಳ ಬಗ್ಗೆ ಧ್ವನಿ ಎತ್ತಲು ಪ್ರತಿಯೊಬ್ಬರು ಹೆದರುತ್ತಿದ್ದಾರೆ. ಆದರೆ, ನಾನು ಬಹಿರಂಗವಾಗಿ ಅವರ ಅವ್ಯವಹಾರಗಳನ್ನು ಖಂಡಿಸಿದ್ದೇನೆ ಎಂದು ಗುಡುಗಿದರು.

ವಾದ್ರಾ ಮತ್ತು ಸಿಎಂ ಹೂಡಾ ಹರಿಯಾಣಾದ ಜನತೆಯನ್ನು ಲೂಟಿ ಹೊಡೆಯುತ್ತಿದ್ದಾರೆ. ಅನೇಕ ವ್ಯಕ್ತಿಗಳು ವಾದ್ರಾ ವಂಚನೆ ವಿರುದ್ಧ ಮೌನವಾಗಿರುವಂತೆ ಸಲಹೆ ನೀಡಿದರು. ಆದರೆ, ನಾನು ಜೀವಕ್ಕೆ ಹೆದರದೆ ವಾದ್ರಾ ಮತ್ತು ಹೂಡಾ ಅವರ ಭ್ರಷ್ಟಾಚಾರವನ್ನು ಬಹಿರಂಗಗೊಳಿಸಿದ್ದೇನೆ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ನರೇಂದ್ರ ಮೋದಿ ಭೂಪಿಂದರ್ ಸಿಂಗ್ ಹೂಡಾ ರೈತರು ಅರವಿಂದ್ ಕೇಜ್ರಿವಾಲ್ ಭ್ರಷ್ಟಾಚಾರ

Widgets Magazine

ಸುದ್ದಿಗಳು

ಈ ಬೆತ್ತಲೆ ಮಹಿಳೆ ಮಾಡಿದಳು ಗದ್ದಲ

ಸೇಂಟ್‌‌‌‌‌ ಪೀಟರ್ಸ್‌‌‌ಬರ್ಗ್‌‌‌‌ : ಒಬ್ಬ ಮಹಿಳೆ ಬೆತ್ತಲಾಗಿ ಮ್ಯಾಕ್‌‌‌ಡೊನಾಲ್ಡ್‌ ಒಳಗಡೆ ಬಂದು ಗದ್ದಲ ...

ಬಿಸಿಲಿನ ಬೇಗೆಯಿಂದ ಬಸವಳಿದ ಜನರಿಗೆ ತಂಪೆರೆದ ಮಳೆರಾಯ

ಬೆಂಗಳೂರು: ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಬೆಂಗಳೂರಿನಲ್ಲಿ ಮಳೆರಾಯ ತಂಪೆರೆದಿದ್ದಾನೆ. ಬೆಂಗಳೂರು ...

ಮೋದಿ ಪ್ರಧಾನಿಯಾಗೋಲ್ಲ, ಯುಪಿಎ ಅಧಿಕಾರಕ್ಕೆ ಬರ್ತದೆ: ಇಬ್ರಾಹಿಂ ಭವಿಷ್ಯ

ಮಂಗಳೂರು: ನರೇಂದ್ರ ಮೋದಿ ಪ್ರಧಾನಮಂತ್ರಿ ಆಗೋದಿಲ್ಲ. ಯುಪಿಎ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆ. ಈ ಬಾರಿ ...

ಹಾಸನದಲ್ಲಿ ಮತ್ತೆ ದೇವೇಗೌಡರ ಕೊರಳಿಗೆ ವಿಜಯಮಾಲೆ ಬೀಳುತ್ತಾ?

ಮಾಜಿ ಪ್ರಧಾನಿಯ ಕ್ಷೇತ್ರ ಹಾಸನ ಕೂಡ ಸಮಸ್ಯೆಗಳಿಂದ ಹೊರತಾಗಿಲ್ಲ. ಮಾಜಿ ಪ್ರಧಾನಿಯ ತವರು ಎನ್ನುವ ಖ್ಯಾತಿ ...

Widgets Magazine