Widgets Magazine

ಲಾಲೂ ಪ್ರಸಾದ್‌ಗೆ ಶಿಕ್ಷೆ: ರಾಜಕೀಯ ಭವಿಷ್ಯ ನುಚ್ಚುನೂರು

ವೆಬ್‌ದುನಿಯಾ|
PR
PR
ನವದೆಹಲಿ: ಸಿಬಿಐನ ವಿಶೇಷ ಕೋರ್ಟ್ ಲಾಲೂ ಪ್ರಸಾದ್ ಯಾದವ್ ಮತ್ತು ಇನ್ನೂ 44 ಜನರನ್ನು ಮೇವು ಹಗರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರನ್ನಾಗಿ ಮಾಡಿದೆ. ಜಾನುವಾರುಗಳ ಮೇವು ಖರೀದಿಗೆ ಸರ್ಕಾರಿ ಖಜಾನೆಯಿಂದ 37 ಕೋಟಿ ರೂ. ಪೆಡದು ದುರ್ಬಳಕೆ ಮಾಡಿಕೊಂಡಿರುವುದಕ್ಕೆ ಈ ಹಗರಣ ಸಂಬಂಧಿಸಿದೆ. ಈ ತೀರ್ಪು ಲಾಲೂ ಪ್ರಸಾದ್ ಅವರಿಗೆ ದೊಡ್ಡ ಪೆಟ್ಟು ನೀಡಿದ್ದು, ಅವರ ರಾಜಕೀಯ ಭವಿಷ್ಯಕ್ಕೆ ಅಂತಿಮತೆರೆ ಬೀಳುವ ಸಾಧ್ಯತೆಯಿದೆ. ಮುಂದಿನ ಚುನಾವಣೆಯಲ್ಲಿ ಆರ್‌ಜೆಡಿ ಗೆದ್ದುಬರುವ ಸಾಧ್ಯತೆ ನುಚ್ಚುನೂರಾಗಿದೆ. ಬಿಹಾರದ ಮಾಜಿ ಮುಖ್ಯಮಂತ್ರಿ ಸುಪ್ರೀಂಕೋರ್ಟ್ ಜುಲೈನಲ್ಲಿ ನೀಡಿದ ತೀರ್ಪಿಗೆ ಎರಡನೇ ಬಲಿಪಶುವಾಗಿದ್ದಾರೆ.

ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ, ಕೋರ್ಟ್ ಶಿಕ್ಷೆ ನೀಡುವ ಸಂಸತ್ ಸದಸ್ಯರು ಮತ್ತು ರಾಜ್ಯ ಶಾಸಕರು ತಕ್ಷಣವೇ ತಮ್ಮ ಸದಸ್ಯತ್ವವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ ಮುಂಚೆ ರಾಜ್ಯಸಭೆ ಸದಸ್ಯ ರಷೀದ್ ಮಸೂದ್ ಅವರು ವೈದ್ಯಕೀಯ ಕಾಲೇಜು ಸೀಟುಗಳಿಗೆ ಅನರ್ಹ ಅಭ್ಯರ್ಥಿಗಳನ್ನು ಆಯ್ಕೆಮಾಡಿದ್ದರಿಂದ ವಿಶೇಷ ಸಿಬಿಐ ಕೋರ್ಟ್ ಅವರನ್ನು ತಪ್ಪಿತಸ್ಥರನ್ನಾಗಿ ಮಾಡಿದೆ. ಲಾಲೂ ಪ್ರಸಾದ್ ಅವರ ಹಿನ್ನಡೆಯಿಂದ ಬಿಹಾರದಲ್ಲಿ ರಾಜಕೀಯ ಪುನರ್‌ಹೊಂದಾಣಿಕೆ ಸಂಭವವಿದ್ದು, ಕಾಂಗ್ರೆಸ್‌ನ ವೋಟ್ ಬ್ಯಾಂಕ್ ಪುನಶ್ಚೇತನಕ್ಕೆ ಅವಕಾಶದ ಬಾಗಿಲು ತೆರೆಯಲಿದೆ.


ಇದರಲ್ಲಿ ಇನ್ನಷ್ಟು ಓದಿ :