Widgets Magazine

ಸ್ಟಾಲಿನ್ ಇನ್ನು ಮೂರು ತಿಂಗಳಲ್ಲಿ ಸಾಯ್ತಾರೆ: ಅಳಗಿರಿ ಭವಿಷ್ಯ

ಚೆನ್ನೈ| ವೆಬ್‌ದುನಿಯಾ|
PR
PR
ಕರುಣಾನಿಧಿ ಪುತ್ರ ಅಳಗಿರಿ ಮತ್ತು ಕರುಣಾನಿಧಿ ನಡುವೆ ಭುಗಿಲೆದ್ದಿದೆ. ಅಳಗಿರಿಯನ್ನು ಡಿಎಂಕೆ ಪಕ್ಷದಿಂದ ಉಚ್ಚಾಟಿಸುವ ಮೂಲಕ ಕರುಣಾನಿಧಿ ಮನೆಯ ಒಳಜಗಳ ಬಹಿರಂಗವಾಗಿತ್ತು. ಪಕ್ಷ ವಿರೋಧಿ ಚಟುವಟಿಕೆಯ ಆರೋಪಗಳ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಡಿಎಂಕೆ ಅಧ್ಯಕ್ಷ ಎಂ ಕರುಣಾನಿಧಿ ತಮ್ಮ ಪುತ್ರ ಎಂ.ಕೆ.ಅಳಗಿರಿಯನ್ನು ಪಕ್ಷದಿಂದ ಉಚ್ಚಾಟಿಸಿ ಆದೇಶ ಹೊರಡಿಸಿದ್ದರು.ಪಕ್ಷದ ಉನ್ನತ ಮೂಲಗಳ ಪ್ರಕಾರ, ಅಳಗಿರಿ ಮತ್ತು ಅವರ ಬೆಂಬಲಿಗರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದರಿಂದ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ತಿಳಿಸಿದ್ದವು.

ಇಂದು ಅಳಗಿರಿ ಕರುಣಾನಿಧಿಯನ್ನು ಭೇಟಿಯಾಗಿದ್ದ ವೇಳೆ ಕರುಣಾನಿಧಿ ಅವರ ಇನ್ನೊಬ್ಬ ಪುತ್ರ ಸ್ಟಾಲಿನ್ ಇನ್ನು ಮೂರು ತಿಂಗಳಲ್ಲಿ ಸಾಯುತ್ತಾನೆ ಎಂದು ಹೇಳುವ ಮೂಲಕ ಭಿನ್ನಮತದ ಬೆಂಕಿಗೆ ಅಳಗಿರಿ ಇನ್ನಷ್ಟು ತುಪ್ಪ ಎರೆದಿದ್ದಾರೆ. ಇದರಿಂದ ಡಿಎಂಕೆ ಮತ್ತು ಅಳಗಿರಿ ನಡುವೆ ಭಿನ್ನಮತ ಸ್ಫೋಟಗೊಂಡು ಜ್ವಾಲಾಮುಖಿಯಾಗಿದೆ. ಕರುಣಾನಿಧಿ ತಮ್ಮ ಪುತ್ರ ಅಳಗಿರಿ ಬಗ್ಗೆ ಕೆಂಡಾಮಂಡಲವಾಗಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :