‘ಮನಮೋಹನ್ ಸಿಂಗ್ ವಿದೇಶಕ್ಕೆ ಹೋದರೂ ಗೊತ್ತೇ ಆಗುತ್ತಿರಲಿಲ್ಲ’

NewDelhi, ಶುಕ್ರವಾರ, 5 ಮೇ 2017 (14:43 IST)

Widgets Magazine

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೂಡಾ ವಿದೇಶಗಳಿಗೆ ಹೋಗುತ್ತಿದ್ದರು. ಆದರೆ ಯಾರಿಗೂ ಗೊತ್ತಾಗುತ್ತಿರಲಿಲ್ಲ. ಆದರೆ ಹಾಲಿ ಪ್ರಧಾನಿ ಮೋದಿ ಎಲ್ಲಿಗೇ ಹೋದರೂ ಸುದ್ದಿಯಾಗುತ್ತದೆ. ಅದೇ ವ್ಯತ್ಯಾಸ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.


 
ಪ್ರಧಾನಿ ಮೋದಿ ಆಗಾಗ ವಿದೇಶಕ್ಕೆ ಪ್ರವಾಸ ಹೋಗುವ ಬಗ್ಗೆ ಪ್ರತಿಪಕ್ಷಗಳು ಟೀಕೆ ಮಾಡುವ ಬಗ್ಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ. ‘ಮನಮೋಹನ್ ವಿದೇಶಕ್ಕೆ ವಿಮಾನ ಹತ್ತಿದ್ದು ಯಾವಾಗ, ಇಳಿದಿದ್ದು ಯಾವಾಗ ಎಂದು ಗೊತ್ತಾಗುತ್ತಿರಲಿಲ್ಲ’ ಎಂದು ಅವರು ವ್ಯಂಗ್ಯವಾಡಿದ್ದಾರೆ.
 
ಪ್ರಧಾನಿ ಮೋದಿ ವಿದೇಶ ಪ್ರವಾಸದ ಬಗ್ಗೆ ಪದೇ ಪದೇ ಟೀಕೆ ಮಾಡುವ ಪ್ರಮುಖ ವಿಪಕ್ಷ ಕಾಂಗ್ರೆಸ್ ಮೋದಿಗೆ ವಿದೇಶ ಪ್ರವಾಸ ಮಾಡುವಾಗ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅಗತ್ಯವೂ ಇಲ್ಲ. ಒಬ್ಬರೇ ವಿದೇಶಾಂಗ ವ್ಯವಹರಾಗಳನ್ನೂ ನಿಭಾಯಿಸುತ್ತಾರೆ ಎಂದಿದ್ದಾರೆ.
 
ಪ್ರಧಾನಿ ಮೋದಿ ಅಧಿಕಾರ ಸ್ವೀಕರಿಸಿದ ಮೇಲೆ ಇದುವರೆಗೆ 43 ದೇಶಗಳ ಪ್ರವಾಸ ಮಾಡಿದ್ದಾರೆ. ಹಲವು ವಿದೇಶಿ ಒಪ್ಪಂದಗಳಿಗೆ ಅಂಕಿತ ಹಾಕಿದ್ದಾರೆ. ಇದಕ್ಕೇ ದೇಶದ ಹಿತಕ್ಕಿಂತ ವಿದೇಶ ಪ್ರವಾಸವೇ ಪ್ರಧಾನಿಗೆ ಮುಖ್ಯ ಎಂದು ವಿಪಕ್ಷಗಳು ಟೀಕೆ ಮಾಡುತ್ತಿವೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಮನಮೋಹನ್ ಸಿಂಗ್ ಪ್ರಧಾನಿ ಮೋದಿ ಅಮಿತ್ ಶಾ ಬಿಜೆಪಿ ಕಾಂಗ್ರೆಸ್ ರಾಷ್ಟ್ರೀಯ ಸುದ್ದಿಗಳು Bjp Congress Amith Shah Manmohan Singh Pm Modi National News

Widgets Magazine

ಸುದ್ದಿಗಳು

news

ಉತ್ತರ ಪ್ರದೇಶದಲ್ಲಿ ಅಪ್ಪನಿಗೊಂದು ಮಗನಿಗೊಂದು ಪಕ್ಷ

ಲಕ್ನೋ: ಉತ್ತರ ಪ್ರದೇಶದಲ್ಲಿ ಇದುವರೆಗೆ ಒಟ್ಟಾಗಿ ರಾಜಕಾರಣ ಮಾಡಿದ ತಂದೆ-ಮಗ ಇನ್ನು ಪ್ರತ್ಯೇಕ ಪಕ್ಷ ...

news

ಅತೃಪ್ತರಿಗೆ ತಿರುಗೇಟು ನೀಡಲು ಬಿಎಸ್‌ವೈ ಪ್ಲ್ಯಾನ್

ಮೈಸೂರು: ನಾಳೆ ನಡೆಯಲಿರುವ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಅತೃಪ್ತ ನಾಯಕರಿಗೆ ತಿರುಗೇಟು ನೀಡಲು ಬಿಜೆಪಿ ...

news

ಸಚಿವರು, ಮುಖಂಡರು, ಶಾಸಕರ ಮಧ್ಯೆ ಹೊಂದಾಣಿಕೆಯಿಲ್ಲ: ದಿನೇಶ್ ಗುಂಡೂರಾವ್

ಶಿವಮೊಗ್ಗ: ಸಚಿವರು, ಮುಖಂಡರು, ಶಾಸಕರ ಮಧ್ಯೆ ಹೊಂದಾಣಿಕೆಯಿಲ್ಲದಿರುವುದರಿಂದ ನಮ್ಮಲ್ಲಿರುವ ಸಮಸ್ಯೆಗಳ ...

news

ಬಿಜೆಪಿಯಲ್ಲಿರುವ ಭಿನ್ನಮತ ಶೀಘ್ರವೇ ಶಮನ: ಜನಾರ್ದನ ರೆಡ್ಡಿ

ಕೋಲಾರ: ರಾಜ್ಯ ಬಿಜೆಪಿಯಲ್ಲಿರುವ ಭಿನ್ನಮತ ಶೀಘ್ರವೇ ಶಮನವಾಗುವ ವಿಶ್ವಾಸವಿದೆ. ಎಂದು ಮಾಜಿ ಸಚಿವ ಗಾಲಿ ...

Widgets Magazine