‘ಸೋನಿಯಾ ಗಾಂಧಿ ಹಣವನ್ನು ಸಾಚಾ ಮಾಡುತ್ತಿದ್ದವರೇ ಪಿ. ಚಿದಂಬರಂ’

NewDelhi, ಗುರುವಾರ, 18 ಮೇ 2017 (06:33 IST)

Widgets Magazine

ನವದೆಹಲಿ: ಯುಪಿಎ ಅಧಿಕಾರವಧಿಯಲ್ಲಿ ಪಿ.ಚಿದಂಬರಂನಷ್ಟು ಭ್ರಷ್ಟ ಸಚಿವರು ಇನ್ಯಾರೂ ಇರಲಿಲ್ಲ ಎನ್ನುವ ಮೂಲಕ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಮತ್ತೆ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.


 
‘ಯುಪಿಎ ಅಧಿಕಾರವಧಿಯಲ್ಲಿ ಚಿದಂಬರಂನಷ್ಟು ಭ್ರಷ್ಟ ಸಚಿವರು ಬೇರಾರೂ ಇರಲಿಲ್ಲ. ಸೋನಿಯಾ ಗಾಂಧಿಯ ಹಣವನ್ನು ಸಾಚಾ ಮಾಡುತ್ತಿದ್ದವರೇ ಅವರು. ತಮ್ಮ ಪುತ್ರನಿಗಾಗಿ ನಿಯಮವನ್ನೇ ಬದಲಿಸಿದವರು. ಅಂತಹ ಸಚಿವರನ್ನು ಶಿಕ್ಷೆಗೊಳಪಡಿಸಬೇಕು. ಭವಿಷ್ಯದಲ್ಲಿ ಮತ್ತೆ ಯಾರೂ ಇಂತಹ ತಪ್ಪು ಮಾಡಬಾರದು’ ಎಂದು ಸ್ವಾಮಿ ಕಿಡಿಕಾರಿದ್ದಾರೆ.
 
ಅಲ್ಲದೆ ಹಣಕಾಸು ಇಲಾಖೆಯ ಕೆಲವು ಅಧಿಕಾರಿಗಳು ಇನ್ನೂ ಚಿದಂಬರಂ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಕೆಲಸದಿಂದ ಕಿತ್ತೊಗೆಯಬೇಕು ಎಂದು ನಾನು ಆಗ್ರಹಿಸಿದರೂ ಸಚಿವ ಅರುಣ್ ಜೇಟ್ಲಿ ಕಿವಿಗೊಡುತ್ತಿಲ್ಲ ಎಂದಿದ್ದಾರೆ.
 
ಅಲ್ಲದೆ ಸರ್ಕಾರ ತನ್ನ ಧ್ವನಿ ಹತ್ತಿಕ್ಕಲು ನೋಡುತ್ತಿದೆ ಎಂಬ ಚಿದಂಬರಂ ಆರೋಪವನ್ನು ಪ್ರಶ್ನಿಸಿದ ಸ್ವಾಮಿ, ಅವರಿಗೆ ಯಾವ ಧೈರ್ಯವಿದೆ. ಧೈರ್ಯವಿದ್ದರೆ ಸರ್ಕಾರದ ವಿರುದ್ಧ ಹೂಂಕರಿಸುವುದನ್ನು ಬಿಟ್ಟು ತಾನು ನಿರಪರಾಧಿ ಎಂದು ಸಾಬೀತುಪಡಿಸಲಿ ಎಂದು ಸವಾಲು ಹಾಕಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಪಿಯುಸಿ ಪರೀಕ್ಷೆ ಪಾಸಾದ 82 ವರ್ಷದ ಮಾಜಿ ಸಿಎಂ!

ಚಂಡೀಘಡ: ಸಾಮಾನ್ಯವಾಗಿ ಪಿಯುಸಿ ಪಾಸಾಗುವಾಗ ನಮಗೆಷ್ಟು ವರ್ಷವಾಗಿರುತ್ತದೆ? 18 ಅಥವಾ 25 ವರ್ಷದೊಳಗೆ ...

news

ತನಿಖಾ ಸಂಸ್ಥೆಗಳ ಕಾರ್ಯನಿರ್ವಹಣೆಗೆ ಸಂತೋಷ್ ಹೆಗ್ಡೆ ಅಸಮಾಧಾನ

ಮಡಿಕೇರಿ: ತನಿಖಾ ಸಂಸ್ಥೆಗಳ ಬೇಜವಾಬ್ದಾರಿ ಕಾರ್ಯನಿರ್ವಹಣೆಯಿಂದ ಆರೋಪಿಗಳಿಗೆ ಕ್ಲಿನ್ ಚಿಟ್ ದೊರೆಯುತ್ತಿದೆ ...

news

ಪರಿಷತ್‌ಗೆ ಸಿಎಂ ಲಿಂಗಪ್ಪ ನಾಮಕರಣಕ್ಕೆ ರಾಜ್ಯಪಾಲರ ನಕಾರ

ಬೆಂಗಳೂರು: ಪರಿಷತ್‌ಗೆ ಸಿಎಂ ಲಿಂಗಪ್ಪ ನಾಮನಿರ್ದೇಶನಕ್ಕೆ ರಾಜ್ಯಪಾಲ ವಜುಭಾಯಿ ವಾಲಾ ತಿರಸ್ಕರಿಸಿದ್ದಾರೆ ...

news

ನಾಯಿಗೆ ಮರಣದಂಡನೆ ವಿಧಿಸಿದ ಪಾಕಿಸ್ತಾನ

ಲಾಹೋರ್: ಒಂದು ವಿಲಕ್ಷಣ ಪ್ರಕರಣದಲ್ಲಿ, ಬಾಲಕನನ್ನು ಕಚ್ಚಿದ್ದಕ್ಕಾಗಿ ಪಾಕಿಸ್ತಾನದ ಪಂಜಾಬ್ ...

Widgets Magazine