Widgets Magazine
Widgets Magazine

10 ವರ್ಷದ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ ಚಿಕ್ಕಪ್ಪ

ನವದೆಹಲಿ, ಮಂಗಳವಾರ, 18 ಜುಲೈ 2017 (13:52 IST)

Widgets Magazine

ಕಳೆದೊಂದು ವರ್ಷದಿಂದ 10 ವರ್ಷದ ಬಾಲಕಿಯ ಮೇಲೆ ಆಕೆಯ ಚಿಕ್ಕಪ್ಪನೆ ಅತ್ಯಾಚಾರವೆಸಗಿದ ಹೇಯ ಘಟನೆ ಆಗ್ನೇಯ ದೆಹಲಿಯ ಜಾಮಿಯಾ ನಗರದಲ್ಲಿ ನಡೆದಿದೆ. 
 
ಬಾಲಕಿಯ ಪೋಷಕರು ಅತ್ಯಾಚಾರ ಪ್ರಕರಣ ದಾಖಲಿಸಿದ ನಂತರ ಆರೋಪಿ ಪರಾರಿಯಾಗಿದ್ದನು. ಒಂದು ತಿಂಗಳ ನಂತರ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
 
ಪಶ್ಚಿಮ ಬಂಗಾಳದ ಗ್ರಾಮವೊಂದರಲ್ಲಿ ವಾಸವಾಗಿರುವ ತನ್ನ ಕುಟುಂಬದವರನ್ನು ಭೇಟಿಯಾಗಲು ಆರೋಪಿ ತೆರಳಿದ್ದಾಗ, ಬಾಲಕಿ ತನ್ನ ಪೋಷಕರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾಳೆ. ಪೋಷಕರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿದ್ದರು. 
 
ಬಾಲಕಿಯ ತಂದೆ ಫ್ಯಾಕ್ಟರಿಯಲ್ಲಿ ಉದ್ಯೋಗಿಯಾಗಿದ್ದು, ತಾಯಿ ಕೆಲಸದ ನಿಮಿತ್ಯ ಹೊರಹೋದಾಗ ಆರೋಪಿ ಬಾಲಕಿಯ ಮೇಲೆ ಅತ್ಯಾಚಾರವೆಸಗುತ್ತಿದ್ದನು. ಯಾರಿಗಾದರೂ ಮಾಹಿತಿ ನೀಡಿದಲ್ಲಿ ಕುಟುಂಬದ ಸದಸ್ಯರನ್ನು ಹತ್ಯೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದನು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 
 
ಆರೋಪಿ ಆರಂಭದಲ್ಲಿ ತನ್ನ ಹೇಯ ಕೃತ್ಯವನ್ನು ಒಪ್ಪಿಕೊಳ್ಳಲು ಸಿದ್ದನಿರಲಿಲ್ಲ. ಆದರೆ, ಪೊಲೀಸರ ಹೊಡೆತಕ್ಕೆ ಕಳೆದ ಒಂದು ವರ್ಷದಿಂದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾಗಿ ಬಹಿರಂಗಪಡಿಸಿದ್ದಾನೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಕ್ಷುಲ್ಲಕ ಕಾರಣಕ್ಕೆ ಸೇನಾಧಿಕಾರಿಯನ್ನೇ ಕೊಂದ ಯೋಧ

ಮೊಬೈಲ್ ಬಳಕೆ ಮಾಡುವ ವಿಚಾರಕ್ಕೆ ಆರಂಭವಾದ ಗಲಾಟೆಯಿಂದಾಗಿ ಸಿಟ್ಟಿಗೆದ್ದ ಭಾರತೀಯ ಸೇನೆ ಯೋಧನೊಬ್ಬ ತನ್ನ ...

news

ರಾಜೀನಾಮೆ ಕೊಡುತ್ತೇನೆಂದು ರಾಜ್ಯಸಭೆಯಿಂದ ಹೊರನಡೆದ ಮಾಯಾವತಿ

ಗೋರಕ್ಷಣೆ ನೆಪದಲ್ಲಿ ದಲಿತರ ಮೇಲಿನ ದೌರ್ಜನ್ಯ ಕುರಿತಂತೆ ಮಾತನಾಡಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಕೋಪಗೊಂಡ ...

news

ಕರ್ನಾಟಕ ಧ್ವಜಕ್ಕೆ ಕಾನೂನು ಮಾನ್ಯತೆ: ಫಲಿಸುತ್ತಾ ರಾಜ್ಯ ಸರ್ಕಾರದ ಯತ್ನ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕರ್ನಾಟಕ ಧ್ವಜಕ್ಕೆ ಕಾನೂನು ಮಾನ್ಯತೆ ...

news

ಉಷಾ ಪತಿಯಾಗಿರುತ್ತೇನೆಂದಿದ್ದ ವೆಂಕಯ್ಯ ನಾಯ್ಡು ಇಂದು ಉಪರಾಷ್ಟ್ರಪತಿ ಹುದ್ದೆಗಾಗಿ ನಾಮಪತ್ರ ಸಲ್ಲಿಕೆ!

ನವದೆಹಲಿ: ವೆಂಕಯ್ಯ ನಾಯ್ಡು ಉಪರಾಷ್ಟ್ರಪತಿಯಾಗಲಿದ್ದಾರೆ ಎಂಬ ಸುದ್ದಿ ಬಂದಾಗಲೆಲ್ಲಾ ನಾನು ...

Widgets Magazine Widgets Magazine Widgets Magazine