107 ರ ಅಜ್ಜಿಗೆ ರಾಹುಲ್ ಗಾಂಧಿ ಕಂಡ್ರೆ ಇಷ್ಟವಂತೆ! ಕಾರಣ ಏನು ಗೊತ್ತಾ?!

ನವದೆಹಲಿ, ಮಂಗಳವಾರ, 26 ಡಿಸೆಂಬರ್ 2017 (10:46 IST)

ನವದೆಹಲಿ: ಕಾಂಗ್ರೆಸ್ ಧುರೀಣ ರಾಹುಲ್ ಗಾಂಧಿಯನ್ನು  ಅವರ ರಾಜಕೀಯ ನಾಯಕತ್ವಕ್ಕಿಂತ ಹೆಚ್ಚು ಸೌಂದರ್ಯಕ್ಕೆ ಮರುಳಾದ ಎಷ್ಟೋ ಮಂದಿಯಿದ್ದಾರೆ. ಇದೀಗ 107 ರ ಅಜ್ಜಿಯೂ ಆ ಸಾಲಿಗೆ ಸೇರಿದ್ದಾಳೆ!
 

ಟ್ವಿಟರ್ ನಲ್ಲಿ ದೀಪಾಲಿ ಸಿಕಂದ್ ಎಂಬ ಮಹಿಳೆ ತನ್ನ 107 ವರ್ಷದ ಅಜ್ಜಿಯ ಜನ್ಮ ದಿನ ಎಂದು ಬರೆದುಕೊಂಡಿದ್ದಲ್ಲದೆ, ಆಕೆಗೆ ರಾಹುಲ್ ಗಾಂಧಿಯನ್ನು ಭೇಟಿ ಮಾಡುವುದು ಆಕೆಯ ಏಕೈಕ ಆಸೆ ಎಂದಿದ್ದಾಳೆ. ಯಾಕೆ ಎಂದು ಕೇಳಿದ್ದಕ್ಕೆ ಅವಳು ಮೆಲು ಧ್ವನಿಯಲ್ಲಿ ‘ಆತ ತುಂಬಾ ಸುಂದರಾಂಗ’ ಎಂದಿದ್ದಾಳೆ ಎಂದು  ಅಜ್ಜಿಯ ಫೋಟೋ ಸಮೇತ ಬರೆದುಕೊಂಡಿದ್ದರು.
 
ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ ‘ಡಿಯರ್ ದೀಪಾಲಿ, ನಿಮ್ಮ ಅಜ್ಜಿಗೆ ನಮ್ಮ ಕಡೆಯಿಂದ ಹುಟ್ಟುಹಬ್ಬ ಮತ್ತು ಕ್ರಿಸ್ ಮಸ್ ಶುಭಾಷಯ ತಿಳಿಸಿ. ಅವರಿಗೆ ನನ್ನ ಕಡೆಯಿಂದ ಒಂದು ಪ್ರೀತಿಯ ಅಪ್ಪುಗೆ ನೀಡಿ’ ಎಂದರು.  ಈ ಟ್ವೀಟ್ ಇದೀಗ ಭಾರೀ ವೈರಲ್ ಆಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮುಚ್ಚಿದ ಗಾಜಿನ ನಡುವೆ ಕುಟುಂಬದವರನ್ನು ಕಣ್ತುಂಬಿಕೊಂಡ ಕುಲಭೂಷಣ್ ಜಾದವ್

ಇಸ್ಲಾಮಾಬಾದ್: ಕೊನೆಗೂ ಪಾಕಿಸ್ತಾನ ಭಾರತೀಯ ಖೈದಿ ಕುಲಭೂಷಣ್ ಜಾದವ್ ಗೆ ಕುಟುಂಬದವರನ್ನು ಭೇಟಿಯಾಗಲು ಅವಕಾಶ ...

news

ಸಿಎಂ ಸಂಸದೀಯ ಕಾರ್ಯದರ್ಶಿ ತುಕಾರಾಂ ವಿರುದ್ದ ಕಿಕ್ ಬ್ಯಾಕ್ ಆರೋಪ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಲೋಕೋಪಯೋಗಿ ಇಲಾಖೆಯ ಸಂಸದೀಯ ಕಾರ್ಯದರ್ಶಿಯಾಗಿರುವ ಶಾಸಕ ತುಕಾರಾಂ ...

news

ಭಾರತೀಯ ಸೇನೆಯಿಂದ ಮತ್ತೊಂದು ಸರ್ಜಿಕಲ್ ಸ್ಟ್ರೈಕ್

ನವದೆಹಲಿ: ಕದನ ವಿರಾಮ ಉಲ್ಲಂಘಿಸಿ ಭಾರತದ ತಾಳ್ಮೆ ಕೆಣಕುತ್ತಿರುವ ಪಾಕಿಸ್ತಾನಕ್ಕೆ ಭಾರತೀಯ ಸೇನೆ ...

news

ಶೀಲದ ಶಂಕೆ, ತಾಯಿಯನ್ನು ಕೊಲೆಗೈದ ತಂದೆಯನ್ನು ಬಂಧಿಸಲು ನೆರವಾದ ಮಗ

ಶೀಲದ ಶಂಕೆಯಿಂದ ತಾಯಿಯನ್ನು ತಂದೆಯೇ ಕೊಲೆ ಮಾಡಿದ್ದಾನೆ ಎಂದ ಮಗ ತಂದೆಯನ್ನು ಬಂಧಿಸಲು ಪೊಲೀಸರಿಗೆ ನೆರವು ...

Widgets Magazine