ಸಮವಸ್ತ್ರ ಧರಿಸದ್ದಕ್ಕೆ ವಿದ್ಯಾರ್ಥಿನಿಗೆ ಟಾಯ್ಲೆಟ್ ನಲ್ಲಿ ನಿಲ್ಲುವ ಶಿಕ್ಷೆ!

ನವದೆಹಲಿ, ಸೋಮವಾರ, 11 ಸೆಪ್ಟಂಬರ್ 2017 (08:33 IST)

Widgets Magazine

ನವದೆಹಲಿ: ಶಾಲೆಯೆಂದರೆ ಬೆಚ್ಚಿಬೀಳಿಸುವ ಮತ್ತೊಂದು ಘಟನೆ ವರದಿಯಾಗಿದೆ. ಹೈದರಾಬಾದ್ ನಲ್ಲಿ ಧರಿಸದ ವಿದ್ಯಾರ್ಥಿನಿಗೆ ದಿನವಿಡೀ ಬಾಲಕರ ಟಾಯ್ಲೆಟ್ ನಲ್ಲಿ ನಿಲ್ಲುವ ಶಿಕ್ಷೆ ವಿಧಿಸಲಾಗಿದೆ.


 
11 ವರ್ಷದ ಬಾಲಕಿ ಮೇಲೆ ದೈಹಿಕ ಶಿಕ್ಷಕಿ ಇಂತಹದ್ದೊಂದು ಅಮಾನವೀಯ ಕೃತ್ಯವೆಸಗಿದ್ದಾರೆ. ‘ನನ್ನ  ಸಮವಸ್ತ್ರ ಒಣಗಿರಲಿಲ್ಲ. ಹಾಗಾಗಿ ಸಮವಸ್ತ್ರ ಧರಿಸದೇ ಶಾಲೆಗೆ ಹೋಗಿದ್ದೆ. ನಾನು ತರಗತಿಗೆ ಹೋಗುವಾಗ ನನ್ನನ್ನು ನೋಡಿದ ದೈಹಿಕ ಶಿಕ್ಷಕಿ ಸಮವಸ್ತ್ರ ಧರಿಸದೇ ಬಂದಿದ್ದಕ್ಕೆ ಕೂಗಾಡಿದರು.
 
ನಾನು ಕಾರಣ ವಿವರಿಸಿದರೂ, ನನ್ನ ಪೋಷಕರು ಇದನ್ನು ನನ್ನ ಶಾಲೆಯ ಡೈರಿಯಲ್ಲಿ ಬರೆದಿದ್ದಾರೆಂದು ಹೇಳಿದರೂ ಆಕೆ ಕೇಳಲಿಲ್ಲ. ಹುಡುಗರ ಟಾಯ್ಲೆಟ್ ನಲ್ಲಿ ನಿಲ್ಲಿಸಿದರು. ಟಾಯ್ಲೆಟ್ ಗೆ ಬಂದಿದ್ದ ಹುಡುಗರು ನನ್ನ ನೋಡಿ ನಗುತ್ತಿದ್ದರು. ಕೊನೆಗೆ ಶಿಕ್ಷಕಿ ನನ್ನನ್ನು ಹೊರ ಕರೆತಂದಳು. ಆದರೆ ಇನ್ನು ನಾನು ಶಾಲೆಗೆ ಹೋಗಲ್ಲ’ ಎಂದು ವಿದ್ಯಾರ್ಥಿನಿ ಈಗ ಅಳುತ್ತಿದ್ದಾಳೆ.
 
ಘಟನೆ ಬಹಿರಂಗವಾಗುತ್ತಿದ್ದಂತೆ ಹಲವು ಮಕ್ಕಳ ಹಿತರಕ್ಷಣಾ ವೇದಿಕೆಗಳು ಶಾಲೆ ಮತ್ತು ಶಿಕ್ಷಕಿ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿವೆ.
 
ಇದನ್ನೂ ಓದಿ.. ಟೀಂ ಇಂಡಿಯಾ ವಿರುದ್ಧ ಸರಣಿ ಆರಂಭಕ್ಕೂ ಮೊದಲೇ ಬಿಳಿ ಬಾವುಟ ಹಾರಿಸಿದ ಆಸೀಸ್ ನಾಯಕ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಟಾಯ್ಲೆಟ್ ಸಮವಸ್ತ್ರ ವಿದ್ಯಾರ್ಥಿನಿ ಶಾಲೆ Toilet Uniform Student School

Widgets Magazine

ಸುದ್ದಿಗಳು

news

ವಿಶ್ವಾಸಮತಯಾಚನೆಗೆ ಸೂಚಿಸದಿದ್ದರೆ ಕಾನೂನು ಹೋರಾಟ: ಸ್ಟ್ಯಾಲಿನ್

ತಮಿಳುನಾಡಿನಲ್ಲಿ ಮತ್ತೆ ರಾಜಕೀಯ ಮೇಲಾಟಗಳು ಗರಿಗೆದರಿವೆ. ಸಿಎಂ ಪಳನಿಸ್ವಾಮಿಯವರನ್ನ ವಿಶ್ವಾಸಮತಯಾಚನೆಗೆ ...

news

ವಿಷಾನಿಲ ದಾಳಿಗೆ ಉಗ್ರರ ಸಂಚು: ದೇಶಾದ್ಯಂತ ಹೈಅಲರ್ಟ್

ಏರ್ ಪೋರ್ಟ್, ಮೆಟ್ರೋ ರೈಲು, ರೈಲು ಮತ್ತು ಬಸ್ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಿಸುವಂತೆ ಕೇಂದ್ರ ಗೃಹ ...

news

ಗೌರಿ ಲಂಕೇಶ್ ಹಂತಕರ ಪತ್ತೆಗೆ ಪೊಲೀಸರ ತಂತ್ರ

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹಂತಕರನ್ನು ಪತ್ತೆಹಚ್ಚಲು ಪೊಲೀಸರು ಶತಾಯಗತಾಯ ಯತ್ನಿಸುತ್ತಿದ್ದು, ...

news

ಪ್ರಧಾನಿ ಮೋದಿ ಚಿತ್ರ ಬರೆದ ತಪ್ಪಿಗೆ ಈಕೆಗೆ ಸಿಕ್ಕ ಶಿಕ್ಷೆಯೇನು ಗೊತ್ತಾ?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಚಿತ್ರ ಬರೆದ ತಪ್ಪಿಗೆ ...

Widgets Magazine