ಮುಂಬೈ ಸರಣಿ ಸ್ಫೋಟದ ಪ್ರಮುಖ ಖಾದಿರ್ ಅಹ್ಮದ್ ಬಂಧನ

ಲಖನೌ, ಶನಿವಾರ, 8 ಜುಲೈ 2017 (16:14 IST)

Widgets Magazine

ಲಖನೌ: 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಖಾದಿರ್ ಅಹ್ಮದ್ ನನ್ನು ಗುಜರಾತ್, ಉತ್ತರ ಪ್ರದೇಶ ಎಟಿಎಸ್ ಅಧಿಕಾರಿಗಳು ಬಂಧಿಸಿದ್ದಾರೆ.
 
ಮುಂಬಯಿ ಸರಣಿ ಬಾಂಬ್‌ ಸ್ಫೋಟ ಸಂಭವಿಸಿದ 24 ವರ್ಷಗಳ ತರುವಾಯ ವಿಶೇಷ ಟಾಟಾ ನ್ಯಾಯಾಲಯ ಕಳೆದ ಜೂನ್‌ 16ರಂದು ಅಬು ಸಲೇಂ ಮತ್ತು ಮುಸ್ತಫಾ ದೊಸ್ಸಾ ಸೇರಿದಂತೆ ಆರು ಪ್ರಮುಖ ಆರೋಪಿಗಳನ್ನು ದೋಷಿ ಎಂದು ಘೋಷಿಸಿ ಒಬ್ಬ ಆರೋಪಿಯನ್ನು ಖುಲಾಸೆಗೊಳಿಸಿತ್ತು. ದೊಸ್ಸಾ ಜೂ.28ರಂದು ಎದೆ ನೋವಿನಿಂದ ಮುಂಬೈ ಜೆ ಜೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ.
 
ಉತ್ತರ ಪ್ರದೇಶದ ನಜಿಬಾಬಾದ್ ನಲ್ಲಿ ಆರೋಪಿ ಖಾದಿರ್ ಅಹ್ಮದ್ ನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಖಾದಿರ್ ಅಹ್ಮದ್ ಇರುವಿಕೆ ಕುರಿತು ಖಚಿತ ಮಾಹಿತಿ ಪಡೆದಿದ್ದ ಗುಜರಾತ್ ಎಟಿಎಸ್  ಅಧಿಕಾರಿಗಳು ಉತ್ತರ ಪ್ರದೇಶ ಎಟಿಎಸ್ ಅಧಿಕಾರಿಗಳ ನೆರವು ಪಡೆದು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. 
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
1993 ಮುಂಬೈ ಸ್ಫೋಟ ಪ್ರಕರಣ ಖಾದಿರ್ ಅಹ್ಮದ್ ಬಂಧನ Arrested Kadir Ahmed 1993 Mumbai Blasts

Widgets Magazine

ಸುದ್ದಿಗಳು

news

ಕೈಕಂಬ ಬಳಿ ಮತ್ತೊರ್ವ ಯುವಕನಿಗೆ ಚೂರಿ ಇರಿತ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೈಕಂಬ ಬಳಿ ಮತ್ತೊಬ್ಬ ಯುವಕನಿಗೆ ಚೂರಿಯಿಂದ ಇರಿದ ...

news

ಭಾರತ ಪ್ರವಾಸ ಮಾಡದಂತೆ ನಾಗರಿಕರಿಗೆ ಚೀನಾ ಸರಕಾರ ಸಲಹೆ

ಬೀಜಿಂಗ್: ಭಾರತ ಮತ್ತು ಚೀನಾ ಗಡಿಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸದ್ಯಕ್ಕೆ ಭಾರತ ...

news

ಮಂಗಳೂರು ಗಲಾಟೆ ನಿಯಂತ್ರಿಸಲು ಸರಕಾರ ವಿಫಲ: ಈಶ್ವರಪ್ಪ

ಶಿವಮೊಗ್ಗ: ಮಂಗಳೂರು ಗಲಾಟೆ ನಿಯಂತ್ರಿಸುವಲ್ಲಿ ಸರಕಾರ ವಿಫಲವಾಗಿದೆ ಎಂದು ವಿಧಾನಪರಿಷತ್ ವಿಪಕ್ಷ ...

news

ಶರತ್ ಮಡಿವಾಳ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಿ: ಯಡಿಯೂರಪ್ಪ

ಬೆಂಗಳೂರು: ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಬೇಕು ಎಂದು ಬಿಜೆಪಿ ...

Widgets Magazine