Widgets Magazine
Widgets Magazine

ಪಾಕಿಸ್ತಾನದಲ್ಲಿ ನಾಪತ್ತೆಯಾಗಿದ್ದ ಇಬ್ಬರು ಮೌಲ್ವಿಗಳು ಭಾರತಕ್ಕೆ ವಾಪಸ್

ನವದೆಹಲಿ, ಸೋಮವಾರ, 20 ಮಾರ್ಚ್ 2017 (14:02 IST)

Widgets Magazine

ದೆಹಲಿಯ ಹಜರರತ್ ನಿಜಾಮುದ್ದೀನ್ ದರ್ಗಾದ ಮುಖ್ಯಸ್ಥ ಸೇರಿದಂತೆ ಪಾಕಿಸ್ತಾನಕ್ಕೆ ತೆರಳಿ ನಾಪತ್ತೆಯಾಗಿದ್ದ ಇಬ್ಬರು ಮೌಲ್ವಿಗಳು ಭಾರತಕ್ಕೆ ವಾಪಸ್ ಆಗಿದ್ದಾರೆ. ಏರ್`ಪೋರ್ಟ್`ನಲ್ಲಿ ಬಂದಿಳಿದ ಮೌಲ್ವಿಗಳನ್ನ ಕುಟುಂಬ ಸದಸ್ಯರು ಸೇರಿ ಹಲವರು ಬರಮಾಡಿಕೊಂಡರು.


ಹಜರತ್ ನಿಜಾಮುದ್ದೀನ್ ದರ್ಗಾ ಮುಖ್ಯಸ್ಥ ಸೈಯದ್ ಆಸಿಫ್ ನಿಜಾಮಿ ಮತ್ತು ಅವರ ಸೋದರಳಿಯ ನಜೀಮ್ ಅಲಿ ನಿಜಾಮಿ ಮಾರ್ಚ್ 8ರಂದು ಲಾಹೋರ್`ಗೆ ತೆರಳಿದ್ದರು. 80 ವರ್ಷದ ಆಸೀಫ್ ತನ್ನ ಸಹೋದರಿಯನ್ನ ನೋಡಲು ಅಲ್ಲಿಂದ ಕರಾಚಿಗೆ ತೆರಳಿದ್ದರು. ಬಳಿಕ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಆತಂಕ ಸೃಷ್ಟಿಯಾಗಿತ್ತು.
 
ಬಳಿಕ ಸರ್ಕಾರವನ್ನ ಸಂಪರ್ಕಿಸಿದ್ದ ಭಾರತ ಮೌಲ್ವಿಗಳನ್ನ ಪತ್ತೆಮಾಡಿತ್ತು. ಮೌಲ್ವಿಗಳು ಸಿಂಧ್ ಪ್ರಾಂತ್ಯದ ಪ್ರದೇಶವೊಂದಕ್ಕೆ ತೆರಳಿದ್ದರಿಂದ ಸಂಪರ್ಕ ಸಾಧ್ಯವಾಗಿರಲಿಲ್ಲ ಎಂದು ತಿಳಿದುಬಂದಿದೆ.
 
ತಂದೆ ವಾಪಸ್ಸಾದ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಆಸೀಫ್ ಪುತ್ರ ಅಸೀಮ್ ನಿಜಾಮಿ, ಭಾರತ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲೇ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಏರ್ಪಡಿಸಲಾಗಿದೆ. ಪಾಕಿಸ್ತಾನದಿಂದ ವಾಪಸ್ಸಾದ ಇಬ್ಬರೂ ಮೌಲ್ವಿಗಳು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ತನಿಖಾ ಸಂಸ್ಥೆಗಳ ಅಧಿಕಾರಿಗಳನ್ನ ಸಹ ಭೇಟಿಮಾಡುವ ಸಾಧ್ಯತೆ ಇದೆ.



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಪತಿಯನ್ನು ಕೊಂದು ಸೂಟ್ ಕೇಸ್ ನಲ್ಲಿ ತುಂಬಿದ ಪತ್ನಿ!

ಮೊಹಾಲಿ: ನಾರಿ ಮುನಿದರೆ ಮಾರಿ ಎನ್ನುವುದು ಈ ಪತಿಯ ಪಾಲಿಗೆ ಅಕ್ಷರಶಃ ನಿಜವಾಯಿತು. ಪತ್ನಿಯೇ ಪತಿಯನ್ನು ...

news

ರಾಜ್ಯದಲ್ಲೂ ಬರ, ಸದನದಲ್ಲಿ ಸಚಿವರಿಗೂ ಬರ: ಜೆಡಿಎಸ್ ಕಿಡಿ

ಬೆಂಗಳೂರು: ರಾಜ್ಯದಲ್ಲಿ ಬೀಕರ ಬರ ಕಾಡುತ್ತಿದ್ದರೆ ಸದನದಲ್ಲೂ ಸಚಿವರ ಬರ ಕಾಡುತ್ತಿದೆ ಎಂದು ಜೆಡಿಎಸ್ ಶಾಸಕ ...

news

ಗುಂಡ್ಲುಪೇಟೆ: ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರ ಲಾಠಿಚಾರ್ಜ್

ಗುಂಡ್ಲುಪೇಟೆ: ಉಪಚುನಾವಣೆ ನಾಮಪತ್ರ ಸಲ್ಲಿಕೆ ವೇಳೆ ಉಭಯ ಪಕ್ಷಗಳು ಕಾರ್ಯಕರ್ತರ ಮಧ್ಯೆ ವಾಗ್ವಾದ ...

news

45 ಜನರ ವಿರುದ್ಧ ಲೈಂಗಿಕ ದೌರ್ಜನ್ಯ ದೂರು ದಾಖಲಿಸಿದ ಯುವತಿ

ಬೆಂಗಳೂರಿನ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣ ಬೆಳಕಿಗೆ ಬಂದಿದೆ. ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ...

Widgets Magazine Widgets Magazine