ಟೆರರ್ ಫಂಡಿಂಗ್ ಕೇಸ್: ಸೈಯದ್ ಸಲಾವುದ್ದೀನ್ ಪುತ್ರ ಯೂಸುಫ್ ಅರೆಸ್ಟ್

ನವದೆಹಲಿ, ಮಂಗಳವಾರ, 24 ಅಕ್ಟೋಬರ್ 2017 (15:40 IST)

ನವದೆಹಲಿ: 2011ರ ಟೆರರ್ ಫಂಡಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ತಂಡ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಮುಖ್ಯಸ್ಥ ಸೈಯದ್ ಸಲಾವುದ್ದೀನ್ ಪುತ್ರ, ಸೈಯದ್ ಶಾಹಿದ್ ಯೂಸೂಫ್ ನನ್ನು ಬಂಧಿಸಿದ್ದಾರೆ.


ಎನ್ಐಎ ತಂಡ ಯೂಸೂಫ್ ನನ್ನು ವಿಚಾರಣೆ ನಡೆಸುತ್ತಿದೆ. ಅ. 16 ರಂದು ವಿಚಾರಣೆಗೆ ಹಾಜರಾಗಬೇಕೆಂದು ಎನ್ಐಎ ಯೂಸೂಫ್ ಗೆ ಸಮನ್ಸ್ ಜಾರಿ ಮಾಡಿ, ಟೆರರ್ ಫಂಡಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಪ್ರಶ್ನೆಗೆ ಉತ್ತರದ ಅಗತ್ಯವಿದೆ ಎಂದು ಎನ್ಐಎ ಹೇಳಿತ್ತು.

ಉಗ್ರಗಾಮಿ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸೈಯದ್ ಸಲಾವುದ್ದೀನ್ ನ ಮೂರನೇ ಪುತ್ರ ಶಾಹಿದ್ ಯೂಸೂಫ್. ಈತ ಬುಡ್ಗಾಮ್ ಸೋಯಿಬುಗ್ ನ ನಿವಾಸಿ. ಕೃಷಿ ಪದವಿ ಪಡೆದಿರುವ ಯೂಸೂಫ್, ಜಮ್ಮು ಕಾಶ್ಮೀರ ಸರ್ಕಾರದಲ್ಲಿ ಕೃಷಿ ಇಲಾಖೆಯಲ್ಲಿ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿದೆ.

ಯೂಸೂಫ್ ಹವಾಲಾ ಮೂಲಕ ಹಣ ಸ್ವೀಕರಿಸಿ ಕಣಿವೆ ರಾಜ್ಯದಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸಲು ನೀಡುತ್ತಿರುವುದಾಗಿ ಆರೋಪ ಕೇಳಿಬಂದಿದೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನಾಳೆ ಗುಜರಾತ್ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟಣೆ

ನವದೆಹಲಿ: ನಾಳೆ ಕೇಂದ್ರ ಚುನಾವಣೆ ಆಯೋಗ ಗುಜರಾತ್ ವಿಧಾನಸಭೆ ಚುನಾವಣೆ ದಿನಾಂಕ ಘೋಷಿಸಲಿದೆ ಎಂದು ಆಯೋಗದ ...

news

ಅವರು ಕೇಳಿದಾಗ ನಾನು ಒಪ್ಪಬಾರದಿತ್ತು: ಟಿ.ಎನ್.ಸೀತಾರಾಂ

ಬೆಂಗಳೂರು: ವಿಧಾನಸೌಧ ವಜ್ರಮಹೋತ್ಸವ ಸಾಕ್ಷ್ಯಚಿತ್ರಕ್ಕೆ ಕೋಟಿ ರೂ. ಖರ್ಚು ಮಾಡುವ ಅಗತ್ಯವೇನಿತ್ತು ಎಂದು ...

news

ಮುಸ್ಲಿಮರಿಗಾಗಿ 2ನೇ ಪಾಕಿಸ್ತಾನ ಸೇಷ್ಟಿಸಲು ಆಗುತ್ತಾ..?: ಮಾಜಿ ಪ್ರಧಾನಿ ದೇವೇಗೌಡ

ಬಳ್ಳಾರಿ: ಟಿಪ್ಪು ಜಯಂತಿ ವಿಷಯದಲ್ಲಿ ಅನಗತ್ಯ ಪೈಪೋಟಿ ನಡೆಯುತ್ತಿದೆ. ಈ ವಿಷಯದಲ್ಲಿ ಬಿಜೆಪಿಯವರು ಅನಗತ್ಯ ...

news

ಛಾಪಾಕಾಗದ ಹಗರಣ: ಸಾವು ಬದುಕಿನ ಹೋರಾಟದಲ್ಲಿ ತೆಲಗಿ

ಬೆಂಗಳೂರು: ಬಹುಕೋಟಿ ನಕಲಿ ಛಾಪಾಕಾಗದ ಹಗರಣದ ಕಿಂಗ್ಪಿನ್ ಅಬ್ದುಲ್ ಕರೀಂ ಲಾಲ್ ತೆಲಗಿ(56) ನಗರದ ...

Widgets Magazine
Widgets Magazine