14 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿ ಹೋದ 28 ವರ್ಷದ ಶಿಕ್ಷಕಿ

ಹೈದರಾಬಾದ್‌, ಶನಿವಾರ, 7 ಅಕ್ಟೋಬರ್ 2017 (15:19 IST)

ಹೈದರಾಬಾದ್‌ನಲ್ಲಿ 28 ವರ್ಷ ವಯಸ್ಸಿನ ಶಿಕ್ಷಕಿಯೊಬ್ಬಳು ತನ್ನ 14 ವರ್ಷದ ಅಪ್ರಾಪ್ತ ವಿದ್ಯಾರ್ಥಿಯೊಂದಿಗೆ ಪ್ರೇಮದಲ್ಲಿ ಸಿಲುಕಿ ಓಡಿ ಹೋಗಲು ಯತ್ನಿಸಿದ ವಿಚಿತ್ರ ಘಟನೆ ವರದಿಯಾಗಿದೆ. 
ಶಿಕ್ಷಕಿ ಮತ್ತು ವಿದ್ಯಾರ್ಥಿ ಇಬ್ಬರು ದೆಹಲಿಗೆ ಹೋಗಲು ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ ಭೋಪಾಲ್‌ನಲ್ಲಿ ರೈಲ್ವೆ ಪೊಲೀಸರು ಇಬ್ಬರನ್ನು ಬಂಧಿಸಿ, ಪೋಷಕರಿಗೆ ಮಾಹಿತಿ ನೀಡಿದ್ದಾರೆ.
 
ಬಾಲಕನ ಪೋಷಕರು ಭೋಪಾಲ್‌ ಪೊಲೀಸ್ ಠಾಣೆಗೆ ಆಗಮಿಸಿದ್ದು, ಶಿಕ್ಷಕಿಯ ಪೋಷಕರು ಕೂಡಾ ಪೊಲೀಸ್ ಠಾಣೆಗೆ ಆಗಮಿಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ರೈಲ್ವೆ ಪೊಲೀಸರ ಪ್ರಕಾರ, ಇಬ್ಬರು ಹೈದ್ರಾಬಾದ್ ಮೂಲದವರಾಗಿದ್ದು 28 ವರ್ಷ ವಯಸ್ಸಿನ ಶಿಕ್ಷಕಿ ಟ್ಯೂಶನ್ ಹೇಳಿಕೊಡಲು ಬಾಲಕನ ಮನೆಗೆ ಬರುತ್ತಿದ್ದಳು. ಇಬ್ಬರು ಪ್ರೇಮಪಾಶದಲ್ಲಿ ಸಿಲುಕಿದ್ದಾರೆ. ನಂತರ ದೆಹಲಿಗೆ ಓಡಿಹೋಗಲು ನಿರ್ಧರಿಸಿದಾಗ ಭೋಪಾಲ್‌ ಪೊಲೀಸರ ಬಲೆಗೆ ಸಿಲುಕಿದ್ದಾರೆ.
 
ಅಕ್ಟೋಬರ್ 2 ರಂದು 14 ವರ್ಷದ ಹುಡುಗನ ಕುಟುಂಬವು ಹೈದರಾಬಾದ್ನಲ್ಲಿ ಅವರ ಕಣ್ಮರೆಗೆ ಸಂಬಂಧಿಸಿದಂತೆ ಕಳೆದುಹೋದ ವರದಿಯನ್ನು ದಾಖಲಿಸಿದೆ. ಅದರ ನಂತರ ಪೊಲೀಸರು ಆತನನ್ನು ಹುಡುಕುತ್ತಿದ್ದಾರೆ.
 
ಕಳೆದ ಆಕ್ಟೋಬರ್ 2 ರಂದು ಬಾಲಕನ ಪೋಷಕರು ಪುತ್ರಕಾಣೆಯಾಗಿರುವ ಬಗ್ಗೆ ಹೈದ್ರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ಬಾಲಕನ ಹುಡುಕಾಟಕ್ಕೆ ಪೊಲೀಸರು ಮುಂದಾಗಿದ್ದರು.
 
ಇಬ್ಬರೂ ದೆಹಲಿಗೆ ತೆಲಂಗಾಣ ಎಕ್ಸ್‌ಪ್ರೆಸ್ ರೈಲಿನಲ್ಲಿ ಹೋಗಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ದೊರೆತಿತ್ತು ಎನ್ನಲಾಗಿದೆ. 
 
ಈ ಬಗ್ಗೆ ಹೈದರಾಬಾದ್ ಪೊಲೀಸರು ಬಾಲಕನನ ಛಾಯಾಚಿತ್ರವನ್ನು ವಾಟ್ಸಪ್‌ ಮೂಲಕ ಭೋಪಾಲ್ ರೈಲ್ವೆ ಪೊಲೀಸ್‌ಗೆ ರವಾನಿಸಿ ಸಹಾಯ ಕೋರಿದ್ದರು.ಮತ್ತೊಂದೆಡೆ ಶಿಕ್ಷಕಿ ತಮ್ಮ ಪುತ್ರನನ್ನು ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋಗಿದ್ದಾಳೆ ಎಂದು ಬಾಲಕನ ತಂದೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.   
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪತ್ನಿಗೆ ರಿವಾಲ್ವರ್ ತೋರಿಸಿ ಸೆಕ್ಸ್ ಸುಖ ಪಡೆಯುತ್ತಿದ್ದ ಪತಿ ಅರೆಸ್ಟ್

ಇಂದೋರ್: ಪತಿ ನನಗೆ ರಿವಾಲ್ವರ್‌ನಿಂದ ಬೆದರಿಸಿ ಸೆಕ್ಸ್‌ ಸುಖ ಅನುಭವಿಸುತ್ತಾರೆ ಎಂದು ಮಹಿಳೆಯೊಬ್ಬಳು ...

news

ಮಹಿಳೆಯರು ಪಾರ್ಟಿಗಳಲ್ಲಿ ಅತ್ಯಾಚಾರಕ್ಕೊಳಗಾಗುತ್ತಾರೆ, ಜಾತ್ರೆಗಳಲ್ಲಿ ಅಲ್ಲ: ಭಾರತಿ ಶಂಕರ್

ಬೆಂಗಳೂರು: ಅನ್‌ವಾಂಟೆಡ್ ಪಾರ್ಟಿಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರಗಳಾಗುತ್ತವೆಯೇ ಹೊರತು ಜಾತ್ರೆಗಳಲ್ಲಿ ...

news

ಪಾಕಿಸ್ತಾನ ಸರ್ಕಾರಕ್ಕೆ ಜಿಹಾದ್, ಫತ್ವಾ ಘೋಷಿಸುವ ಹಕ್ಕಿದೆ, ಮೌಲ್ವಿಗಳಿಗಲ್ಲ: ಪಾಕ್ ಸಚಿವ

ಇಸ್ಲಾಮಾಬಾದ್: 'ಜಿಹಾದ್' ಮತ್ತು 'ಫತ್ವಾ'ವನ್ನು ಘೋಷಿಸುವ ಹಕ್ಕು ಸರ್ಕಾರ ಮಾತ್ರ ಹೊಂದಿದೆಯೇ ಹೊರತು ...

news

ಪತಿ ಭೇಟಿಗೆ ಆಸ್ಪತ್ರೆಗೆ ಬಂದ ಶಶಿಕಲಾ ನಟರಾಜನ್

ಚೆನ್ನೈ: ಐದು ದಿನಗಳ ಪರೋಲ್ ಪಡೆದಿರುವ ಎಐಎಡಿಎಂಕೆ ಮಾಜಿ ಪ್ರಧಾನ ಕಾರ್ಯದರ್ಶಿ ಶಶಿಕಲಾ ಆಸ್ಪತ್ರೆಯಲ್ಲಿರುವ ...

Widgets Magazine