ಕಲ್ಲಿದ್ದಲು ಹಗರಣ: ಮೂವರು ಮಾಜಿ ಅಧಿಕಾರಿಗಳು ದೋಷಿಗಳೆಂದು ತೀರ್ಪಿತ್ತ ಸಿಬಿಐ ಕೋರ್ಟ್

ನವದೆಹಲಿ, ಶುಕ್ರವಾರ, 19 ಮೇ 2017 (12:07 IST)

Widgets Magazine

ಕಲ್ಲಿದ್ದಲು ಇಲಾಖೆಯ ಮಾಜಿ ಕಾರ್ಯದರ್ಶಿ ಎಚ್.ಸಿ ಗುಪ್ತಾ ಸೇರಿ ಮೂವರು ಮಾಜಿ ಅಧಿಕಾರಿಗಳು ಬಹುಕೋಟಿ ಕೋಟಿ ರೂಪಾಯಿ ಕಲ್ಲಿದ್ದಲು ಹಗರಣದಲ್ಲಿ ದೋಷಿಗಳೆಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
  


ಮಧ್ಯಪ್ರದೇಶದ ಕಲ್ಲಿದ್ದಲು ನಿಕ್ಷೇಪವನ್ನ ಖಾಸಗಿ ಕಂಪನಿಗೆ  ಹಂಚಿಕೆ ಮಾಡಿದ ಯೋಜನೆಯಲ್ಲಿ ನಡೆದಿದ್ದ ಹಗರಣ ಇದಾಗಿದ್ದು, ಇದೇ ಮೊದಲ ಬಾರಿಗೆ ಮೂವರು ಅಧಿಕಾರಿಗಳು ತಪ್ಪಿತಸ್ಥರೆಂದು ಸಾಬೀತಾಗಿದೆ. ಭ್ರಷ್ಟಾಚಾರ ಕಾಯ್ದೆಯಡಿ ಮಾಜಿ ಅಧಿಕಾರಿಗಳಾದ ಎಚ್.ಸಿ. ಗುಪ್ತಾ, ಕೆ.ಎಸ್. ಕ್ರೋಫಾ, ಕೆ.ಸಿ. ಸಮ್ರಿಯಾ ಅವರು ದೋಷಿಗಳೆಂದು ಕೋರ್ಟ್ ಹೇಳಿದೆ.

2006 ಮತ್ತು 2008ರ ಸಂದರ್ಭ ಗುಪ್ತಾ ಕಲ್ಲಿದ್ದಲು ಕಾರ್ಯದರ್ಶಿಯಾಗಿದ್ದರು. ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷರಾಗಿಯೂ ಗುಪ್ತಾ ಕಾರ್ಯನಿರ್ವಹಿಸಿದ್ದರು. ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹರಾಜು ವೇಳೆ ಪಾರದರ್ಶಕತೆ ಕಾಯ್ದುಕೊಂಡಿಲ್ಲ. ಇದರಿಂದ ದೇಶದ ಬೊಕ್ಕಸಕ್ಕೆ ಕೋಟಿ ಕೋಟಿ ನಷ್ಟವಾಗಿದೆ ಎಂಬುದು ಆರೋಪ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಮಗಳಿಗಾಗಿ ಗರ್ಭಾಶಯ ದಾನ ಮಾಡಿದ ತಾಯಿ..!

ಪುಣೆಯ ವೈದ್ಯರ ತಂಡ ದೇಶದ ಮೊದಲ ಗರ್ಭಾಶಯ ಕಸಿ ಶಸ್ತ್ರಚಿಕಿತ್ಸೆಯನ್ನ ಯಶಸ್ವಿಯಾಗಿ ಪೂರೈಸಿದ್ದಾರೆ. ...

news

ಅಭಿಮಾನಿಗಳ ಜತೆ ಕಾಣಿಸಿಕೊಂಡ ರಜನೀಕಾಂತ್ ಹಿಂದಿದೆಯಾ ಭಾರೀ ಪ್ಲ್ಯಾನ್?!

ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಸತತ ಐದು ದಿನಗಳಿಂದ ಅಭಿಮಾನಿಗಳ ಜತೆ ಬೆರೆಯುತ್ತಿದ್ದಾರೆ. ಹಿಂದೆಂದೂ ...

news

ಕಾಂಗ್ರೆಸ್ ನ ಇಂದಿರಾ ಕ್ಯಾಂಟೀನ್ ಗೆ ಜೆಡಿಎಸ್ ನ ನಮ್ಮ ಅಪ್ಪಾಜಿ ಕ್ಯಾಂಟೀನ್ ಸ್ಪರ್ಧೆ!

ಬೆಂಗಳೂರು: ಈ ಸಾಲಿನ ಬಜೆಟ್ ನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ನಮ್ಮ ಇಂದಿರಾ ಕ್ಯಾಂಟೀನ್ ಆರಂಭಿಸುವುದಾಗಿ ...

news

ಐಸಿಜೆ ತೀರ್ಪು ನಾವೇಕೆ ಒಪ್ಪಬೇಕೆಂದ ಪಾಕಿಸ್ತಾನ

ಇಸ್ಲಾಮಾಬಾದ್: ಭಾರತೀಯ ನೌಕಾ ಪಡೆ ಮಾಜಿ ಅಧಿಕಾರಿಗೆ ವಿಧಿಸಿದ್ದ ಮರಣದಂಡನೆ ತೀರ್ಪಿಗೆ ತಡೆಯಾಜ್ಞೆ ...

Widgets Magazine