ಕುಡಿದ ಮತ್ತಿನಲ್ಲಿ ಉಬೇರ್ ಕಾರು ಚಾಲಕನ ಮೇಲೆ ಹಲ್ಲೆ ನಡಿಸಿದ ನಟಿಯ ಬಂಧನ

ಕೊಚ್ಚಿ, ಗುರುವಾರ, 21 ಸೆಪ್ಟಂಬರ್ 2017 (15:16 IST)

ಮದ್ಯ ಸೇವಿಸಿದ ಮತ್ತಿನಲ್ಲಿ ಉಹೇರ್ ಕಾರು ಚಾಲಕನ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಟಿವಿ ಧಾರವಾಹಿ ನಟಿ ಸೇರಿದಂತೆ ಮೂವರು ಮಹಿಳೆಯರನ್ನು ಬಂಧಿಸಿದ್ದಾರೆ. 
ಕಣ್ಣೂರು ಮೂಲದವರಾದ ಮೂವರು ಮಹಿಳೆಯರು ಮದ್ಯ ಸೇವಿಸಿದ ನಶೆಯಲ್ಲಿ ಶಫೀಕ್‌ ಮೇಲೆ ಹಾಡಹಗಲೇ ಹಲ್ಲಿ ನಡೆಸಿದ್ದರು. ಹಲ್ಲೆ ನಡೆಸಿದ ಮಹಿಳೆಯರಲ್ಲಿ ಒಬ್ಬಳು ಟಿವಿ ಧಾರವಾಹಿ ನಟಿಯಾಗಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 
 
ಕುಂಬಳಂ ಮೂಲದ ಕಾರು ಚಾಲಕ ಶಫೀಕ್‌ಗೆ ಹಲ್ಲೆಯಿಂದ ಗಂಭೀರವಾದ ಗಾಯಗಳಾಗಿದ್ದು ಎರ್ನಾಕುಲಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಫೀಕ್ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. 
 
ಒಂದೇ ಪ್ರದೇಶಕ್ಕೆ ತೆರಳುವ ಮತ್ತು ಬಾಡಿಗೆಯನ್ನು ಶೇರ್ ಮಾಡಿಕೊಳ್ಳುವ ಉಬೇರ್ ಪೂಲ್ ಸೌಲಭ್ಯವನ್ನು ಪಡೆದು ಮಹಿಳೆಯರು ಕಾರ್ ಬುಕ್ ಮಾಡಿದ್ದರು. ಏತನ್ಮಧ್ಯೆ, ಕಾರಿನಲ್ಲಿ ಮತ್ತೊಬ್ಬ ಪ್ರಯಾಣಿಕರಿರುವುದು ಕಂಡು ಚಾಲಕನೊಂದಿಗೆ ಮಹಿಳೆಯರು ವಾಗ್ವಾದಕ್ಕಿಳಿದಿದ್ದಾರೆ.
 
ಉಬೇರ್ ಕಾರು ಚಾಲಕ ಶಫೀಕ್ ತಮ್ಮೊಂದಿಗೆ ದುರ್ವರ್ತನೆ ತೋರಿದ್ದಕ್ಕಾಗಿ ಹಲ್ಲೆ ನಡೆಸಿದ್ದೇವೆ ಎಂದು ಮಹಿಳೆಯರು ಪೊಲೀಸರಿಗೆ ತಿಳಿಸಿದ್ದಾರೆ. ಆದರೆ, ಪ್ರತ್ಯಕ್ಷದರ್ಶಿಗಳು ಮಹಿಳೆಯರು ಮದ್ಯ ಸೇವಿಸಿದ ಮತ್ತಿನಲ್ಲಿ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
 
ಪೊಲೀಸರು ಮಹಿಳೆಯರ ವಿರುದ್ಧ ದೂರು ದಾಖಲಿಸಿಕೊಂಡು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಮಹಿಳೆ ಟಿವಿ ನಟಿ ಬಂಧನ ಪೊಲೀಸ್ ದೈಹಿಕ ಹಲ್ಲೆ ಉಬೇರ್ ಕಾರು ಚಾಲಕ Women Arrest Assault Uber Driver Tv Actress

ಸುದ್ದಿಗಳು

news

ರೌಡಿಶೀಟರ್ ನಾಗರಾಜ್, ಮಕ್ಕಳಿಗೆ ಹೈಕೋರ್ಟ್`ನಿಂದ ಜಾಮೀನು

ಪೊಲೀಸ್ ದಾಳಿ ವೇಳೆ ಮನೆಯಲ್ಲಿ ಕೋಟಿ ಕೋಟಿ ನಿಷೇಧಿತ ನೋಟು ಪತ್ತೆಯಾಗಿ ಬಂಧನಕ್ಕೀಡಾಗಿದ್ದ ರೌಡಿ ಶೀಟರ್ ...

news

ಟ್ರಾಲ್`ನ ಸಿಆರ್`ಪಿಎಫ್ ಯೂನಿಟ್ ಮೇಲೆ ಉಗ್ರರ ದಾಳಿ: ಮೂವರು ಸ್ಥಳೀಯರು ಬಲಿ

ಸಿಆರ್`ಪಿಎಫ್ ಯೂನಿಟ್ ಮೇಲೆ ಭಯೋತ್ಪಾದಕರು ನಡೆಸಿರುವ ದಾಳಿಯಲ್ಲಿ ಮೂವರು ನಾಗರಿಕರು ಮೃತಪಟ್ಟು, 20ಕ್ಕೂ ...

news

21 ವರ್ಷದ ಯುವತಿ ಮೇಲೆ ಅತ್ಯಾಚಾರ: 70 ವರ್ಷದ ಸ್ವಯಂಘೋಷಿತ ದೇವಮಾನವ ಅರೆಸ್ಟ್

ಜೈಪುರ್: ರಾಜಸ್ಥಾನದ ಸ್ವಯಂಘೋಷಿತ ದೇವಮಾನವ ನಿರಂತರವಾಗಿ ಅತ್ಯಾಚಾರಗೈದಿದ್ದಾನೆ ಎಂದು 21 ವರ್ಷದ ...

news

ಬಿಜೆಪಿಗೆ ಸಂಕಷ್ಟ: ನಿಷೇಧಿತ ಕಂಪೆನಿಗಳ ಪಟ್ಟಿಯಲ್ಲಿ ಶೆಟ್ಟರ್ ಕುಟುಂಬ

ಬೆಂಗಳೂರು: ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ನಿಷೇಧಿತ ಶೆಲ್ ಕಂಪೆನಿಗಳಲ್ಲಿ ನಿರ್ದೇಶಕರಾಗಿರುವ ಬಿಜೆಪಿ ...

Widgets Magazine
Widgets Magazine