30 ತಾಸುಗಳು ಕಾರ್ಯಾಚರಣೆ, ಇಬ್ಬರು ಎಲ್ ಇಟಿ ಉಗ್ರರ ಹತ್ಯೆ

ಶ್ರೀನಗರ, ಬುಧವಾರ, 14 ಫೆಬ್ರವರಿ 2018 (08:06 IST)

ಶ್ರೀನಗರ: ಇಲ್ಲಿಯ ಕೇಂದ್ರೀಯ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌) ಶಿಬಿರದ ಬಳಿಯ ಕಟ್ಟಡದಲ್ಲಿ ಅಡಗಿದ್ದ ಇಬ್ಬರು ಲಷ್ಕರ್‌ ಎ ತಯ್ಯಿಬಾ (ಎಲ್‌ಇಟಿ) ಉಗ್ರರನ್ನು ಭದ್ರತಾ ಸಿಬ್ಬಂದಿ ಗುಂಡಿಕ್ಕಿ ಕೊಲ್ಲುವುದರೊಂದಿಗೆ 30 ತಾಸುಗಳ ಕಾರ್ಯಾಚರಣೆ ಅಂತ್ಯಗೊಂಡಿದೆ.


ವಿಶೇಷ ಪಡೆ ಕಾರ್ಯಾಚರಣೆ: ಮಂಗಳವಾರ ರಂಗಕ್ಕಿಳಿದ ಜಮ್ಮು-ಕಾಶ್ಮೀರ ಪೊಲೀಸ್‌ ಇಲಾಖೆಯ 'ವಿಶೇಷ ಕಾರ್ಯಾಚರಣೆ ಪಡೆ' (ಎಸ್‌ಒಜಿ) ಮತ್ತು ಸಿಆರ್‌ಪಿಎಫ್‌ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರೂ ಉಗ್ರರನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದೆ.


ಒಬ್ಬ ಉಗ್ರನನ್ನು ಆತ ಅಡಗಿದ್ದ ಕಟ್ಟಡದಲ್ಲಿಯೇ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮತ್ತೊಬ್ಬ ಪಕ್ಕದ ಕಟ್ಟಡಕ್ಕೆ ಪಾರಾಗುವ ಯತ್ನದಲ್ಲಿದ್ದಾಗ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾನೆ.


ಉಗ್ರರನ್ನು ಕೊಲ್ಲಲು ನಡೆದ ಕಾರ್ಯಾಚರಣೆ ವೇಳೆ ಸಿಆರ್‌ಪಿಎಫ್‌ ಯೋಧರೊಬ್ಬರು ಹುತಾತ್ಮರಾಗಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಉಗ್ರ ಯೋಧ ಸಾವು ಇಬ್ಬರು ಕಾರ್ಯಾಚರಣೆ ಕಟ್ಟಡ ಶ್ರೀನಗರ ಗುಂಡಿಗೆ ಸುದ್ದಿಗಳು Terrarist Solider Death Two Operation Building Srinagar Bullet News

ಸುದ್ದಿಗಳು

news

ಕೇಂದ್ರದ ಉಜ್ವಲಾ ಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್

ಹೊಸದಿಲ್ಲಿ : ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಪೆಟ್ರೋಲಿಯಂ ಸಚಿವಾಲಯ ನಡೆಸುತ್ತಿರುವ ಎಲ್‌ಪಿಜಿ ...

news

ಯತ್ನಾಳ್ ಬಿಜೆಪಿ ಸೇರ್ಪಡೆ ಸ್ವಾಗತಿಸಿದ ರಮೇಶ್ ಜಿಗಜಿಣಗಿ

ವಿಧಾನ ಪರಿಷತ್ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಅವರು ಬಿಜೆಪಿ ಸೇರುವುದನ್ನು ಸ್ವಾಗತಿಸುವುದಾಗಿ ಕೇಂದ್ರ ...

news

ಫೆ. 19ರಂದು ರಾಜ್ಯಕ್ಕೆ ನರೇಂದ್ರ ಮೋದಿ ಭೇಟಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಫೆಬ್ರುವರಿ 19ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದು, ನರೇಂದ್ರ ಮೋದಿ ...

news

ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಅನ್ನಭಾಗ್ಯ ಇಲ್ಲವೇಕೆ- ಪರಮೇಶ್ವರ್

ಅನ್ನಭಾಗ್ಯ ಯೋಜನೆ ವಿಷಯದಲ್ಲಿ ಕಾಂಗ್ರೆಸ್ ವಿರುದ್ಧ ಟೀಕಿಸುವ ಬಿಜೆಪಿಯವರು ತಮ್ಮ ಪಕ್ಷ ಅಧಿಕಾರದಲ್ಲಿ ಇರುವ ...

Widgets Magazine
Widgets Magazine