Widgets Magazine

ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಗುಪ್ತಾಂಗದಲ್ಲಿ ಕಲ್ಲು ತೂರಿದ ದುಷ್ಕರ್ಮಿಗಳು

ಮುಂಬೈ, ಸೋಮವಾರ, 17 ಜುಲೈ 2017 (19:22 IST)

Widgets Magazine

ಮೂವರು ದುಷ್ಕರ್ಮಿಗಳು 40 ವರ್ಷದ ಮಹಿಳೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದಲ್ಲದೇ ನೀಡಿದ ಹೇಯ ಘಟನೆ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಉದ್ಗೀರ್ ತಾಲೂಕಿನಲ್ಲಿ ವರದಿಯಾಗಿದೆ. 
 
ಕಳೆದ ಜುಲೈ 13 ರಂದು ಆಸ್ಪತ್ರೆಯಿಂದ ಮನೆಗೆ ಅಟೋದಲ್ಲಿ ಮರಳುತ್ತಿದ್ದ 40 ವರ್ಷ ವಯಸ್ಸಿನ ಮಹಿಳೆಯನ್ನು ಅಪಹರಿಸಿದ ಕಾಮುಕರು ಗ್ರಾಮದಿಂದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗುವಂತೆ ಅಟೋ ಚಾಲಕನನ್ನು ಒತ್ತಾಯಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 
 
ಮಹಿಳೆಯ ಕೈ ಮತ್ತು ಕಾಲುಗಳನ್ನು ಕಟ್ಟಿ ಹಾಕಿದ ಆರೋಪಿಗಳು ಆಕೆಯ ಮೇಲೆ ಗ್ಯಾಂಗ್‌ರೇಪ್ ಎಸಗಿದ್ದಾರೆ. ನಂತರ ಒಬ್ಬ ಆರೋಪಿ ಆಕೆಯ ಗುಪ್ತಾಂಗದಲ್ಲಿ ಕಲ್ಲುಗಳನ್ನು ಹಾಕಿದರೆ ಮತ್ತೊಬ್ಬ ಆಕೆಯ ಮೈಮೇಲೆ ಮೂತ್ರ ಮಾಡಿ ಹೀನ ಕೃತ್ಯ ಎಸಗಿ ಪರಾರಿಯಾಗಿದ್ದಾರೆ.
 
ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಉದ್ಗೀರ್ ತಾಲೂಕಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಲಾತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. 
 
ಆರೋಪಿಗಳ ವಿರುದ್ಧ ಹಲವು ಸೆಕ್ಷನ್‌ಗಳನ್ನು ದಾಖಲಿಸಲಾಗಿದ್ದು ಅವರ ಬಂಧನಕ್ಕಾಗಿ ತಂಡಗಳನ್ನು ರಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಮಲಮಗಳ ಮೇಲೆ ನಿರಂತರ ಅತ್ಯಾಚಾರವೆಸಗುತ್ತಿದ್ದ ಮಲತಂದೆ ಅರೆಸ್ಟ್

ಫತೇಹಬಾದ್: ಮಲತಂದೆಯೊಬ್ಬ ತನ್ನ ಮಲಮಗಳ ಮೇಲೆ ಮೂರು ತಿಂಗಳುಗಳಿಂದ ನಿರಂತರವಾಗಿ ಅತ್ಯಾಚಾರೆವೆಸಗಿದ ಹೇಯ ...

news

ಮುಂಬೈನಲ್ಲಿ ಲಷ್ಕರ್-ಎ-ತೊಯಿಬಾ ಉಗ್ರನ ಬಂಧನ

ಮುಂಬೈ: ನಗರದ ವಿಮಾನ ನಿಲ್ದಾಣಕ್ಕೆ ಬಂದಿಳಿದ ಜಾಗತಿಕ ಉಗ್ರಗಾಮಿ ಲಷ್ಕರ್-ಎ-ತೊಯಿಬಾ ಸಂಘಟನೆಯ ಉಗ್ರನನ್ನು ...

news

ಪಾಕ್ ಪಡೆಗಳ ಗುಂಡಿನ ದಾಳಿ: ಓರ್ವ ಯೋಧ, ಬಾಲಕಿ ಬಲಿ

ಜಮ್ಮು-ಕಾಶ್ಮೀರದ ಅಂತರಾಷ್ಟ್ರೀಯ ಗಡಿ ಭಾಗದಲ್ಲಿ ಪಾಕಿಸ್ತಾನ ಸೇನೆ ಮತ್ತೆ ಕದನ ವಿರಾಮ ಉಲ್ಲಂಘನೆ ...

news

ಡಿಐಜಿ ರೂಪಾ ಬೆನ್ನಲ್ಲೇ ಮುಖ್ಯ ಅಧೀಕ್ಷಕ ಕೃಷ್ಣಕುಮಾರ್ ಎತ್ತಂಗಡಿ

ಕೇಂದ್ರ ಕಾರಾಗೃಹದ ಡಿಐಜಿ ಡಿ. ರೂಪಾ ಎತ್ತಂಗಡಿ ಬೆನ್ನಲ್ಲೇ ಮುಖ್ಯ ಅಧೀಕ್ಷಕ ಕೃಷ್ಣಕುಮಾರ್ ಅವರನ್ನೂ ...

Widgets Magazine Widgets Magazine