ಉಗ್ರರ ದಾಳಿಗೆ 6 ಜನ ಅಮರನಾಥ ಯಾತ್ರಿಕರು ಬಲಿ: ಮಾಹಿತಿ ಪಡೆದ ರಾಜನಾಥ್ ಸಿಂಗ್

ಶ್ರಿನಗರ, ಮಂಗಳವಾರ, 11 ಜುಲೈ 2017 (06:50 IST)

ಅನಂತ್ ನಾಗ್:ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಗೆ 6 ಜನ ಅಮರನಾಥ್ ಯಾತ್ರಿಕರು ಸಾವನ್ನಪ್ಪಿದ್ದಾರೆ. 12 ಯಾತ್ರಿಗಳು ಗಾಯಗೊಂಡಿದ್ದಾರೆ. 
 
ಶಸ್ತ್ರಸಜ್ಜಿತ ಭಯೋತ್ಪಾದಕರ ಗುಂಪೊಂದು ಬೆಟೆಂಗೂ ಹಾಗೂ ಖನಬಾಲ್ ಪ್ರದೇಶದಲ್ಲಿ ಪೊಲೀಸ್ ಬೆಂಗಾವಲು ಪಡೆಯ ಮೇಲೆ ದಾಳಿ ನಡೆಸಿದ್ದು, ಗುಂಡಿನ ಚಕಮಕಿ ನಡೆಯುತ್ತಿದ್ದ ವೇಳೆಯೇ ದುರದೃಷ್ಟವಶಾತ್ ಅಮರನಾಥ ಯಾತ್ರಿಕರ ಬಸ್ ಒಂದು ಹಾದುಹೋಗಿದೆ. ಈ ವೇಳೆ ಬಸ್ ನಲ್ಲಿದ್ದ 6 ಯಾತ್ರಿಕರು ಸಾವನ್ನಪ್ಪಿದ್ದು, 12 ಯಾತ್ರಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
 
ಅನಂತ್ ನಾಗ್ ಜಿಲ್ಲೆಯಲ್ಲಿ ಅಮರನಾಥ ಯಾತ್ರಿಕರ ಮೇಲೆ ಭಯೋತ್ಪಾದಕರ ದಾಳಿ ನಡೆದಿರುವುದರ ಬಗ್ಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ರಾಜ್ಯಪಾಲರಿಂದ ಮಾಹಿತಿ ಪಡೆದಿದ್ದಾರೆ. ಭಯೋತ್ಪಾದಕರ ದಾಳಿ ಹಿನ್ನೆಲೆಯಲ್ಲಿ ಅಮರನಾಥ ಯಾತ್ರಿಗಳಿಗೆ ಭದ್ರತೆಯನ್ನು ಹೆಚ್ಚಿಸುವಂತೆ ಸೂಚಿಸಲಾಗಿದೆ.
 ಇದರಲ್ಲಿ ಇನ್ನಷ್ಟು ಓದಿ :  
ಅಮರನಾಥ ಯಾತ್ರಿಕರು ಸಾವು ಉಗ್ರರ ದಾಳಿ Killed Terror Attack 6 Amarnath Yatra Pilgrims Jammu And Kashmir

ಸುದ್ದಿಗಳು

news

ಬೆಳಗಾವಿ ನಗರದಲ್ಲಿ 3.11 ಕೋಟಿ ಹಳೇ ನೋಟುಗಳ ವಶ

ಬೆಳಗಾವಿ: ನಗರದಲ್ಲಿ ರೋಹನ್ ರೆಸಿಡೆನ್ಸಿ ಲಾಡ್ಜ್ ಮೇಲೆ ದಾಳಿ ನಡೆಸಿದ ಪೊಲೀಸರು 3.11 ಕೋಟಿ ಹಳೆ ...

news

ಹುಣಸೂರಿನಲ್ಲಿ ಎಚ್. ವಿಶ್ವನಾಥ್ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ: ಜಿ.ಟಿ.ದೇವೇಗೌಡ

ಮೈಸೂರು: ಇತ್ತೀಚೆಗೆ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದ ಎಚ್. ವಿಶ್ವನಾಥ್ ಹುಣಸೂರು ವಿಧಾನಸಭಾ ...

news

ಕುಮಾರಸ್ವಾಮಿ ಹೇಳಿಕೆಗೆ ಜಮೀರ್ ಅಹ್ಮದ್ ತಿರುಗೇಟು

ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ...

news

ಉತ್ತರ ಪ್ರದೇಶದ ಲಷ್ಕರ್ ಇ ತೊಯ್ಬಾ ಅಡಗುದಾಣಗಳ ಮೇಲೆ ದಾಳಿ: ಇಬ್ಬರ ಬಂಧನ

ಜಮ್ಮು-ಕಾಶ್ಮೀರ ಪೊಲೀಸರು ಉತ್ತರಪ್ರದೇಶದಲ್ಲಿದ್ದ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಯ ಅಡಗು ತಾಣಗಳ ಮೇಲೆ ...

Widgets Magazine