ಜಂಗಲ್ ಬುಕ್ ಮೋಗ್ಲಿ ರೀತಿಯ ಬಾಲಕಿ ಉತ್ತರಪ್ರದೇಶದ ಕಾಡಿನಲ್ಲಿ ಪತ್ತೆ..!

ಲಖನೌ, ಗುರುವಾರ, 6 ಏಪ್ರಿಲ್ 2017 (15:17 IST)

Widgets Magazine

ಜಂಗಲ್ ಬುಕ್ ಸಿನಿಮಾದಲ್ಲಿ ಬಾಲಕೊನೊಬ್ಬ ಕಾಡು ಪ್ರಾಣಿಗಳ ಜೊತೆ ವಾಸವಿದ್ದ ಕಥೆಯನ್ನ ನೋಡಿದ್ದೀರಿ. ಉತ್ತರ ಪ್ರದೇಶದಲ್ಲೂ ಸಹ ಕೋತಿಗಳ ಜೊತೆ ವಾಸವಿದ್ದ 8 ವರ್ಷದ ಬಾಲಕಿಯೊಬ್ಬಳು ಪೊಲೀಸರಿಗೆ ಸಿಕ್ಕಿದ್ದಾಳೆ.ಕೋತಿಗಳ ಗುಂಪಿನಲ್ಲಿದ್ದುಕೊಂಡು ವಿಚಿತ್ರವಾಗಿ ವರ್ತಿಸುತ್ತಿದ್ದ ಬಾಲಕಿಯನ್ನ ಪೊಲೀಸರು ರಕ್ಷಿಸಿದ್ದಾರೆ.
 


ಎಸ್`ಐ ಸುರೇಶ್ ಯಾದವ್ ತಟಾರ್ನಿಯಾ ಘಾಟ್ ವನ್ಯಜೀವಿ ರಕ್ಷಿತಾರಣ್ಯದಲ್ಲಿ ರೊಟೀನ್ ಡ್ಯೂಟಿಯಲ್ಲಿದ್ದಾಗ ಕೋತಿಗಳ ಗುಂಪಿನಲ್ಲಿದ್ದ ಬಾಲಕಿ ಕಣ್ಣಿಗೆ ಬಿದ್ದಿದ್ದಾಳೆ.

 ಬಾಲಕಿಯ ರಕ್ಷಣೆಗೆ ಯತ್ನಿಸಿದಾಗ ಬರಲು ನಿರಾಕರಿಸಿದ್ದಾಳೆ. ಕೋತಿಗಳ ಜೊತೆ ಆರಾಮವಾಗಿರುವ ರೀತಿ ವಿರೋಧ ವ್ಯಕ್ತಪಡಿಸಿವೆ. ಬಾಲಕಿ ಜೊತೆ ಕೋತಿಗಳು ಸಹ ಕಿರುಚಿ ವಿರೋಧ ವ್ಯಕ್ತಪಡಿಸಿವೆ. ಆದರೂ ಬಿಡದ ಪೊಲೀಸರು ಹರಸಾಹಸ ಪಟ್ಟು ಬಾಲಕಿಯನ್ನ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬಾಲಕಿಗೆ ಮಾತುಗಳು ಬರುತ್ತಿಲ್ಲ, ಭಾಷೆ ಅರ್ಥವಾಗುತ್ತಿಲ್ಲ, ಮನುಷ್ಯರನ್ನ ನೋಡಿದರೆ ಗಾಬರಿಪಡುತ್ತಿದ್ದಾಳೆ. ಹೊಸ ಜಗತ್ತಿಗೆ ಬಂದ ರೀತಿ ವರ್ತಿಸುತ್ತಿದ್ದಾಳೆ ಎಂದು ತಿಳಿದು ಬಂದಿದೆ. ಏನನ್ನಾದರೂ ತಿನ್ನಲು ಕೊಟ್ಟರೆ ಕೈಯಿಂದ ತೆಗೆದುಕೊಳ್ಳದೆ ನೇರ ಬಾಯಿ ಹಾಕಿ ತಿನ್ನುತ್ತಿದ್ದಾಳೆ. ಆಸ್ಪತ್ರೆಯಲ್ಲಿ ಚಿಕಿತ್ಸೆ, ತರಬೇತಿ ನಡೆಯುತ್ತಿದ್ದರೂ ಬದಲಾವಣೆ ತೀರಾ ನಿದಾನಗತಿಯಲ್ಲಿದೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ುತ್ತರಪ್ರದೇಶ ಲಖನೌ Uttarapradesh Lucknow Wild Girl

Widgets Magazine

ಸುದ್ದಿಗಳು

news

ಬಿಜೆಪಿಯವರು ಸುಳ್ಳು ವರದಿ ಹರಡುತ್ತಿದ್ದಾರೆ ನಂಬಬೇಡಿ: ಸಿಎಂ ಸಿದ್ದರಾಮಯ್ಯ ಕರೆ

ಬಿಜೆಪಿಯವರು ಅನಗತ್ಯವಾಗಿ ಕಾಂಗ್ರೆಸ್ ಪಕ್ಷದ ವಿರುದ್ಧ ಇಲ್ಲ ಸಲ್ಲದ ವರದಿಗಳನ್ನು ಹರಡಿಸುತ್ತಿದ್ದಾರೆ. ...

news

ಸಚಿವ ರಾಮಲಿಂಗಾರೆಡ್ಡಿ ವಾಸ್ತವ್ಯದ ಕಾಟೇಜ್ ಮೇಲೆ ಚುನಾವಣಾಧಿಕಾರಿಗಳ ದಾಳಿ

ಗುಂಡ್ಲುಪೇಟೆ: ಉಪಚುನಾವಣೆ ಪ್ರಚಾರಕ್ಕಾಗಿ ಆಗಮಿಸಿದ ಸಚಿವ ರಾಮಲಿಂಗಾರೆಡ್ಡಿ ವಾಸ್ತವ್ಯ ಹೂಡಿದ್ದ ಕಾಟೇಜ್ ...

news

ಯಡಿಯೂರಪ್ಪ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ: ಸಿಎಂ ವಾಗ್ದಾಳಿ

ನಂಜನಗೂಡು: ಒಣಬುರುಡೆ ಬಿಡುವ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮಾತಿಗೆ ಕವಡೆ ಕಾಸಿನ ...

news

ಸಿಎಂ ಸಿದ್ದರಾಮಯ್ಯ ಬಳಿಯೇ ಹಣದ ಪ್ರಸ್ತಾಪವಿಟ್ಟ ಗ್ರಾಮಸ್ಥರು

ಸಿಎಂ ಸಿದ್ದರಾಮಯ್ಯ ಬಳಿಯೇ ಗ್ರಾಮಸ್ಥರು ಹಣದ ಪ್ರಸ್ತಾಪವಿಟ್ಟಿರುವ ಘಟನೆ ಮೈಸೂರಿನ ಟಿ.ಕೆ. ಬಡಾವಣೆಯಲ್ಲಿ ...

Widgets Magazine