ತಾನು ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯಿಂದಲೇ ಮಗಳ ಮೇಲೆ ಐದು ಬಾರಿ ಅತ್ಯಾಚಾರ ಮಾಡಿಸಿದ ಕ್ರೂರಿ ತಾಯಿ

ಭುವನೇಶ್ವರ, ಭಾನುವಾರ, 16 ಸೆಪ್ಟಂಬರ್ 2018 (07:02 IST)

: ಹೆತ್ತ ತಾಯಿಯೇ ತಾನು ಅನೈತಿಕ ಹೊಂದಿದ್ದ ವ್ಯಕ್ತಿಯ ಜೊತೆಗೆ ಮಗಳಿಗೂ ಸಂಬಂಧ ಹೊಂದುವಂತೆ ಹೇಳಿ ಬಲವಂತವಾಗಿ ಆಕೆಯ ಮೇಲೆ  ಮಾಡಿಸಿದ  ಘಟನೆ ಒಡಿಶಾದ ಬಾಲಸೋರ್ ನಲ್ಲಿ ನಡೆದಿದೆ.

17 ವರ್ಷದ ಬಾಲಕಿಯೊಬ್ಬಳು  ತನ್ನ ತಾಯಿ ವ್ಯಕ್ತಿಯೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾಳೆ. ಆದ ಕಾರಣ ತಾಯಿ ಆ ವ್ಯಕ್ತಿ ಜೊತೆಗೆ ಮಗಳಿಗೂ ಅಕ್ರಮ ಸಂಬಂಧ ಹೊಂದುವಂತೆ ಒತ್ತಾಯ ಮಾಡಿದ್ದಾಳೆ. ಇದಕ್ಕೆ ಮಗಳು ಒಪ್ಪದಿದ್ದಾಗ ಆಕೆಯ ಮೇಲೆ ಬಲವಂತವಾಗಿ ಆ ವ್ಯಕ್ತಿಯಿಂದ ಅತ್ಯಾಚಾರ ಮಾಡಿಸಿದ್ದಾಳೆ. ಅದು ಒಂದಲ್ಲ ಎರಡಲ್ಲ, ಸುಮಾರು ಐದು ಬಾರಿ ಆತ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

 

ಈ ಬಗ್ಗೆ ಅತ್ಯಾಚಾರ ಸಂತ್ರಸ್ತೆ ಸದರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಎಫ್‍ಐಆರ್ ಕೂಡ ದಾಖಲಾಗಿದೆ. ಆದರೆ ಮಗಳು ಮಾಡಿದ ಈ ಆರೋಪವನ್ನು ತಳ್ಳಿ ಹಾಕಿದ ತಾಯಿ ಆಕೆಗೆ ಕಾಯಿಲೆ ಇದೆ, ದೀರ್ಘಕಾಲದಿಂದ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಆರೋಪಿಸಿದ್ದಾಳೆ. ಸದ್ಯಕ್ಕೆ ಪ್ರಕರಣ ದಾಖಲಿಸಿಕೊಂಡ ಪೊಲೀಸ್ ಅಧಿಕಾರಿಯೊಬ್ಬರು ತನಿಖೆ ಬಳಿಕ ಸತ್ಯಾಸತ್ಯತೆ ತಿಳಿದು ಬರುತ್ತದೆ ಎಂದು ಹೇಳಿದ್ದಾರೆ.  
  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸ್ವಂತ ಮಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ವೈದ್ಯ ಅರೆಸ್ಟ್

ಮೈಸೂರು : ತಾನೇ ಜನ್ಮ ನೀಡಿದ ಮಗಳಿಗೆ ಕಳೆದ ಏಳು ವರ್ಷಗಳಿಂದ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ ...

ಕಂಬಳಕ್ಕೆ ಮತ್ತೆ ಅಡ್ಡಿ?

ಬಹು ಪ್ರಸಿದ್ಧವಾಗಿರುವ ಕಂಬಳ ಹಾಗೂ ಇತರ ಪ್ರಾಣಿಗಳ ಗಾಡಿ ಸ್ಪರ್ಧೆಗಳಿಗೆ ನಿಷೇಧ ಹೇರಬೇಕು. ಹೀಗಂತ ...

news

ಕುಂದಾನಗರಿಗೆ ರಾಷ್ಟ್ರಪತಿ ಭೇಟಿ

ಕುಂದಾನಗರಿಗೆ ಬೆಳಗಾವಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ ಭೇಟಿ ನೀಡಿದ್ದರು.

ನಕಲಿ ವಕೀಲನ ವಿರುದ್ಧ ವಕೀಲರ ದೂರು

ನಕಲಿ ಸರ್ಟಿಫಿಕೇಟ್ ಸೃಷ್ಟಿಸಿ ವಕೀಲ ವೃತ್ತಿಯಲ್ಲಿ ತೊಡಗಿದ್ದ ವ್ಯಕ್ತಿಯ ವಿರುದ್ಧ ವಕೀಲರೇ ಪತ್ತೆ ಹಚ್ಚಿ, ...

Widgets Magazine