ಕೇಂದ್ರದಿಂದ ಮಹಿಳೆಯರಿಗೆ ಮಹತ್ತರವಾದ ಕೊಡುಗೆ; ಕಡಿಮೆ ದರದಲ್ಲಿ ‘ಸುವಿಧಾ’ ಸ್ಯಾನಿಟರಿ ಪ್ಯಾಡ್

ನವದೆಹಲಿ, ಶುಕ್ರವಾರ, 9 ಮಾರ್ಚ್ 2018 (07:26 IST)

ನವದೆಹಲಿ : ಈ ಹಿಂದೆ ಸ್ಯಾನಿಟರಿ ಪ್ಯಾಡ್ ಗಳ ಮೇಲೆ ಅಧಿಕ ಜಿಎಸ್ಟಿ ವಿಧಿಸಿ ಟೀಕೆಗೆ ಗುರಿಯಾಗಿದ್ದ ಕೇವಲ 2.50 ರೂಪಾಯಿಗೆ ಸ್ಯಾನಿಟರಿ ಪ್ಯಾಡ್ ಗಳನ್ನು ಒದಗಿಸುವುದರ ಮೂಲಕ ಮಹಿಳೆಯರಿಗೆ ಅಂತರಾಷ್ಟ್ರೀಯ ಮಹಿಳಾ ದಿನದಂದು ಮಹತ್ತರವಾದ ಕೊಡುಗೆಯನ್ನು ನೀಡಿದೆ.


ಮಣ್ಣಿನಲ್ಲಿ ಕರಗುವ ಈ 'ಸುವಿಧಾ' ನ್ಯಾಪ್ಕಿನ್‌ಗಳನ್ನು ವಿಶ್ವ ಋುತುಸ್ರಾವ ಆರೋಗ್ಯ ದಿನವಾಗಿರುವ ಮೇ 28ರಿಂದ ದೇಶದ 3200 ಜನೌಷಧಿ ಕೇಂದ್ರಗಳಲ್ಲಿ ಮಾರಾಟ ಮಾಡಲಾಗುತ್ತದೆ.


ಗುರುವಾರ ಹೊಸದಿಲ್ಲಿಯಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್‌ ಅವರು ಹೊಸ ಸ್ಯಾನಿಟರಿ ನ್ಯಾಪ್ಕಿನ್‌ ಬಿಡುಗಡೆಗೊಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ‘ಭಾರತೀಯ ಜನೌಷಧ ಪರಿಯೋಜನೆಯಡಿ ಪೂರೈಸುವ ಇದು ಶೇಕಡಾ 100ರಷ್ಟು ಆಕ್ಸೊ ಬಯೊ ಡಿಗ್ರೇಡೆಬಲ್‌ ಆಗಿರುವುದರಿಂದ ಪರಿಸರಕ್ಕೂ ಯಾವುದೇ ರೀತಿಯ ಧಕ್ಕೆ ಆಗುವುದಿಲ್ಲ. ದೇಶದ ಸೌಲಭ್ಯವಂಚಿತ ಮಹಿಳೆಯರ ಸ್ವಚ್ಛತೆ, ಆರೋಗ್ಯ ಮತ್ತು ಸೌಖ್ಯದ ದೃಷ್ಟಿಯಿಂದ ಯೋಜನೆ ಜಾರಿ ಮಾಡಲಾಗುತ್ತಿದ್ದು, ಎಲ್ಲರಿಗೂ ಕೈಗೆಟಕುವ ಮತ್ತು ಗುಣಮಟ್ಟದ ಆರೋಗ್ಯ ಒದಗಿಸುವ ಪ್ರಧಾನಿ ಮೋದಿ ಕನಸಿನ ಭಾಗವಿದು ಎಂದು ಅನಂತಕುಮಾರ್‌ ಅವರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ರಿಟ್ಝ್‌ಕರ್‌ ಆರ್ಕಿಟೆಕ್ಚರ್‌ ಪ್ರಶಸ್ತಿಗೆ ಭಾಜನರಾದ ಬಾಲಕೃಷ್ಣ ದೋಷಿ

ವಾಷಿಂಗ್ಟನ್‌: ಭಾರತೀಯ ವಾಸ್ತುಶಿಲ್ಪಿ ಬಾಲಕೃಷ್ಣ ದೋಷಿ(90) ಅವರು ಪ್ರಿಟ್ಝ್‌ಕರ್‌ ಆರ್ಕಿಟೆಕ್ಚರ್‌ ...

news

ಲೋಕಾಯುಕ್ತರಿಗೆ ಇರಿತ ಪ್ರಕರಣ: ವಿಚಾರಣೆ ವೇಳೆ ವಿಚಿತ್ರ ಹೇಳಿಕೆ ನೀಡಿದ ಆರೋಪಿ

ಬೆಂಗಳೂರು: ಲೋಕಾಯು ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿಗೆ ನಿನ್ನೆ ಅವರ ಕಚೇರಿಯಲ್ಲೇ ಚಾಕುವಿನಿಂದ ಇರಿದು ...

news

‘ಸಂಜೆಯೊಳಗೆ ಸಿಎಂ ಸಿದ್ದರಾಮಯ್ಯ ಕೊಲೆಯಾಗಬಹುದು!’

ವಿಜಯಪುರ: ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಬಿಜೆಪಿ ನಾಯಕ ...

news

ಕರ್ನಾಟಕಕ್ಕೆ ಸಿಕ್ಕಿತು ಹೊಸ ಧ್ವಜ! ಹೇಗಿದೆ ಗೊತ್ತಾ?

ಬೆಂಗಳೂರು: ಕೊನೆಗೂ ಕರ್ನಾಟಕಕ್ಕೆ ಪ್ರತ್ಯೇಕ ನಾಡಧ್ವಜ ಸಿಕ್ಕಿದೆ. ಇದುವರೆಗೆ ಇದ್ದ ಧ್ವಜಕ್ಕಿಂತ ಕೊಂಚ ...

Widgets Magazine
Widgets Magazine