ಅತ್ಯಾಚಾರ-ಕೊಲೆ ಆರೋಪಿಗಳನ್ನು ಪೊಲೀಸ್ ಠಾಣೆಯಿಂದ ಹೊರಗೆಳೆದು ಮರಣದಂಡನೆ ನೀಡಿದ ಜನರ ಗುಂಪು

ಅತಿಥಾ 

ಬೆಂಗಳೂರು, ಮಂಗಳವಾರ, 20 ಫೆಬ್ರವರಿ 2018 (17:24 IST)

 ಹಾಗು ಕೊಲೆ ಪ್ರಕರಣದಲ್ಲಿ ಪೊಲೀಸರ ಅತಿಥಿಗಳಾಗಿದ್ದ ಇಬ್ಬರನ್ನು ಠಾಣೆಯಿಂದ ಹೊರಗೆಳೆದ ಸಾರ್ವಜನಿಕರು ಹಿಗ್ಗಾ ಮುಗ್ಗಾ ಥಳಿಸಿ ಕೊಂದ ಘಟನೆ ಸೋಮವಾರದಂದು ಅರುಣಾಚಲ ಪ್ರದೇಶದ ಲೋಹಿತ್‌ ಜಿಲ್ಲೆಯಲ್ಲಿ ನಡೆದಿದೆ.
ಅಸ್ಸಾಂನ ಟೀ ತೋಟದಲ್ಲಿ ಕಾರ್ಮಿಕರಾಗಿರುವ 30 ವರ್ಷದ ಸಂಜಯ್ ಸೊಬೊರ್‌ ಮತ್ತು 25 ವರ್ಷದ ಜಗದೀಶ್ ಲೋಹರ್ ಎಂಬುವವರನ್ನು ಜನರ ಗುಂಪು ಪೊಲೀಸ್ ಠಾಣೆಯಿಂದ ಮಾರುಕಟ್ಟೆ ಪ್ರದೇಶಕ್ಕೆ ಏಳೆದು ಪೊಲೀಸರ ಎದುರೇ ತಳಿಸಿ ಕೊಂದಿದ್ದಾರೆ. ನಂತರ ಅವರ ದೇಹಗಳನ್ನು ಮಾರುಕಟ್ಟೆ ಪ್ರದೇಶದಲ್ಲಿ ಎಸೆಯಲಾಗಿದೆ. ಆರೋಪಿಗಳಿಗೆ ಬೆಂಕಿ ಹಚ್ಚಲು ಮುಂದಾದ ಜನರ ಗುಂಪನ್ನು ಭದ್ರತಾ ಸಿಬ್ಬಂದಿಯವರು ತಡೆದರು.
 
ಫೆಬ್ರವರಿ 12 ರಂದು, ವಾಕ್ರೊ ಪೊಲೀಸ್ ಠಾಣೆಯ ಅಡಿಯಲ್ಲಿ ಐದುವರೆ ವರ್ಷದ ಹುಡುಗಿ ಹಳ್ಳಿಯಿಂದ ಕಾಣೆಯಾಗಿದ್ದಳು. ನಂತರ, ಮಗುವಿನ ಸಂಬಂಧಿಗಳು ರುಂಡರಹಿತ ಮತ್ತು ಅಂಗಹೀನಗೊಂಡ ದೇಹವನ್ನು ನಾಮ್ಗೊ ಗ್ರಾಮದ ಕಾಡಿನಲ್ಲಿರುವ ಕೊಳವೊಂದರ ಬಳಿ ಪತ್ತೆ ಮಾಡಲಾಯಿತು.
 
ನಂತರ, ಅತ್ಯಾಚಾರ ಮತ್ತು ಬಾಲಕಿಯ ಕೊಲೆಯ ಅನುಮಾನದ ಮೇಲೆ ಸೊಬೊರ್‌ ಮತ್ತು ಲೋಹರ್ ಎಂಬುವವರನನ್ನು ಬಂಧಿಸಲಾಯಿತು. ಇಬ್ಬರು ಅಪರಾಧವನ್ನು ಒಪ್ಪಿಕೊಂಡಿದ್ದರು. ಮತ್ತು ಇಬ್ಬರನ್ನು ಕೋರ್ಟ್‌ಗೆ ಹಾಜರು ಮಾಡಲಾಗಿತ್ತು.
 
ಪ್ರಕರಣದಲ್ಲಿ ಕೆಲ ಅನಾಮಧೇಯ ವ್ಯಕ್ತಿಗಳ ಮೇಲೆ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದರು. ಇದೇ ಸಂಬಂಧ ಮೂರು ಪೇದೆಗಳನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
 
2015 ರಲ್ಲಿ ಇಂಥದ್ದೇ ಪ್ರಕರಣದಲ್ಲಿ ನಾಗಾಲ್ಯಾಂಡ್‌ನ ದಿಮಾಪುರ ಕೇಂದ್ರ ಕಾರಾಗೃಹದಲ್ಲಿದ್ದ ಅತ್ಯಾಚಾರ ಆರೋಪಿಯನ್ನು ಜನರ ಗುಂಪೊಂದು ಹೊರಗೆಳೆದು ಕೊಲೆ ಮಾಡಿತ್ತು.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಮವಸ್ತ್ರದ ಅಳತೆಗೆಂದು ವಿದ್ಯಾರ್ಥಿನಿಯನ್ನು ಸಂಪೂರ್ಣ ವಿವಸ್ತ್ರಗೊಳಿಸಿದ ಶಿಕ್ಷಕ

ಲಖನೌ: ಉತ್ತರ ಪ್ರದೇಶದ ಸರ್ಕಾರಿ ಶಾಲಾ ಶಿಕ್ಷಕ ವಿದ್ಯಾರ್ಥಿನಿಯೊಬ್ಬಳ ಸಮವಸ್ತ್ರದ ಅಳತೆ ...

news

ಸಿನೆಮಾ ನಟನ ಪತ್ನಿಯ ಎದುರೇ ನಡೆಯಿತು ಕಾಮುಕನ ಹೀನ ಕೃತ್ಯ

ನವದೆಹಲಿ: ಉದ್ರೇಕಗೊಂಡು ಸಾರ್ವಜನಿಕವಾಗಿ ಹಸ್ತಮೈಥುನ ಮಾಡಿಕೊಳ್ಳುವ ಕಾಮುಕರ ಸಂಖ್ಯೆ ಮತ್ತು ಪ್ರಕರಣಗಳು ...

news

ವಿದ್ವತ್ ಪ್ರಕರಣ: ಬಾಯ್ತಪ್ಪಿ ಬಂದ ಮಾತು ಒಪ್ಪಿಕೊಂಡ ಅಮಿತ್ ಶಾ

ಬೆಂಗಳೂರು: ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ಮಲಪಾಡ್ ನಿಂದ ಹಲ್ಲೆಗೊಳಗಾದ ವಿದ್ವತ್ ಬಿಜೆಪಿ ಕಾರ್ಯಕರ್ತ ...

news

ಉಳ್ಳವರ ಮಕ್ಕಳ ದೌರ್ಜನ್ಯಕ್ಕೆ ಕಡಿವಾಣ ಅಗತ್ಯ– ಬಸವರಾಜ ಹೊರಟ್ಟಿ

ರಾಜ್ಯದಲ್ಲಿ ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿ ಹೋಗಿದೆ. ಪ್ರಕರಣದಲ್ಲಿ ರಾಜಕಾರಣ ಮಾಡದೇ ಸೂಕ್ತ ಕ್ರಮ ...

Widgets Magazine
Widgets Magazine