ನೆಟ್ ವರ್ಕ್ಸ್ ಸಮಸ್ಯೆಯಿಂದ ಮರವೇರಿ ಮಾತನಾಡಿದ ಕೇಂದ್ರ ಸಚಿವರು

ಜೈಪುರ, ಮಂಗಳವಾರ, 6 ಜೂನ್ 2017 (10:58 IST)

Widgets Magazine

ಜೈಪುರ:ನೆಟ್ ವರ್ಕ್ ಪ್ರಾಬ್ಲಮ್ ಎಂಬುದು ಕೇಂದ್ರ ಸಚಿವರನ್ನೂ ಬಿಟ್ಟಿಲ್ಲ. ಏನೋ ಅರ್ಜಂಟ್ ಇರುವ ಸಂದರ್ಬದಲ್ಲೇ ಮೊಬೈಲ್ ನೆಟ್ ವರ್ಕ್ ಕೂಡ ನಮ್ಮನ್ನ ಆಟವಾಡಿಸುತ್ತದೆ. ರಾಜಸ್ಥಾನದ ಗ್ರಾಮವೊಂದರಲ್ಲಿ ಇಲ್ಲಿ ಸಿಗ್ನಲ್‌ ಸರಿಯಾಗಿ ಸಿಗುತ್ತಿಲ್ಲ ಎಂದು ಕೇಂದ್ರ ಸಚಿವರೊಬ್ಬರು ಮರ ಏರಿ ಮಾತಾಡಿದ್ದಾರೆ.
 
ತಮ್ಮ ಕ್ಷೇತ್ರದ ಗ್ರಾಮವೊಂದಕ್ಕೆ ಭೇಟಿ ನೀಡಿದ್ದ ಕೇಂದ್ರದ ವಿತ್ತ ಖಾತೆ ಸಹಾಯಕ ಸಚಿವ ಅರ್ಜುನ್‌ ರಾಂ ಮೇಘವಾಲ್‌ ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದರು. ಈ ವೇಳೆ ಜನರಿಗೆ ಸೌಲಭ್ಯ ತಲುಪಿಸದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳಲು ಫೋನಾಯಿಸಲು ಮುಂದಾದಾಗ, ಸಿಗ್ನಲ್ಲೇ ಇರಲಿಲ್ಲ. ಮೊಬೈಲ್‌ ಹಿಡಿದ ಕೈ ಮೇಲೆ ಮಾಡಿಕೊಂಡು ಆಚೀಚೆ ಓಡಾಡಿದರೂ ಸಿಗ್ನಲ್‌ ಬರಲಿಲ್ಲ. ಸಿಗ್ನಲ್‌ ಪ್ರಾಬ್ಲಿಂನಿಂದ ಬೇಸತ್ತ ಸಚಿವರು ಕೊನೆಗೆ, ಸ್ಥಳೀಯರ ಸಲಹೆ ಮೇರೆಗೆ ಅಲ್ಲೇ ಇದ್ದ ಮರವೊಂದಕ್ಕೆ ಏಣಿ ಹಾಕಿಸಿಕೊಂಡು ಹತ್ತಿ ನಿಂತರು. ಆಗ ನೆಟ್ವರ್ಕ್ ಲಭ್ಯವಾಗಿದೆ.
 
ಕೇಂದ್ರ ಸರ್ಕಾರ ಡಿಜಿಟಲ್‌ ಇಂಡಿಯಾ ಮಂತ್ರ ಜಪಿಸುತ್ತಿದ್ದರೆ, ಇತ್ತ ಸಚಿವರ ಸ್ವಕ್ಷೇತ್ರದಲ್ಲೇ ಮೊಬೈಲ್‌ ಸಿಗ್ನಲ್‌ಗೆ ಸಮಸ್ಯೆಯಾಗಿರುವುದು ವಿಪಕ್ಷಗಳ ಹಾಸ್ಯಕ್ಕೆ ಕಾರಣವಾಗಿದೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/
 
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
Rajasthan Make A Phone Call Minister Climbed Up A Tree

Widgets Magazine

ಸುದ್ದಿಗಳು

news

ಪೊಲೀಸ್ ಅಧಿಕಾರಿ ಫೋನ್ ಕದ್ದಾಲಿಕೆ ಮಾಡಿಸಿದ್ರಾ..?

ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದ್ದ ಫೋನ್ ಕದ್ದಾಲಿಕೆ ವಿವಾದ ಇದೀಗ ಪೊಲೀಸ್ ಇಲಾಖೆಯಲ್ಲೂ ಕಂಡುಬಂದಿದೆ. ...

news

ಖಾಸಗಿ ಆಸ್ಪತ್ರೆಗಳಿಗೆ ಶೀಘ್ರವೇ ಬೀಳಲಿದೆ ಕಡಿವಾಣ

ಬೆಂಗಳೂರು: ಲಂಗು ಲಗಾಮಿಲ್ಲದೆ ಬೇಕಾ ಬಿಟ್ಟಿ ಬಿಲ್ ನೀಡಿ ರೋಗಿಗಳನ್ನು ಸುಲಿಗೆ ಮಾಡುವ ಖಾಸಗಿ ಆಸ್ಪತ್ರೆಗಳು ...

news

ಎಲ್ಲದಕ್ಕೂ ಸದನದಲ್ಲೇ ಉತ್ತರಿಸುತ್ತೇನೆ ಎಂದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಪ್ರತಿಪಕ್ಷಗಳ ಎಲ್ಲಾ ಆರೋಪಗಳಿಗೂ, ಅನುಮಾನಗಳಿಗೂ ಸದನದಲ್ಲೇ ಉತ್ತರಿಸುತ್ತೇನೆ. ಮಾಧ್ಯಮಗಳ ...

news

ಹಿಂದೆ ಕೆಲಸ ಮಾಡುತ್ತಿದ್ದ ಕಂಪನಿಗೇ ನುಗ್ಗಿ ಶೂಟೌಟ್ ಮಾಡಿದ ವ್ಯಕ್ತಿ: 5 ಜನರ ಸಾವು

ಅಮೆರಿಕದ ಫ್ಲೋರಿಡಾದಲ್ಲಿ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿ 5 ಮಂದಿಯನ್ನು ಹತ್ಯೆಗೈದಿದ್ದಾನೆ. ಅದೂ ...

Widgets Magazine