ಮಗನ ಪ್ರೇಮ ಸಂಬಂಧಕ್ಕೆ ಬೆಂಬಲ ನೀಡಿ ಜೀವ ಕಳೆದುಕೊಂಡ ತಾಯಿ

ರಾಯ್ ಪುರ| pavithra| Last Modified ಶುಕ್ರವಾರ, 8 ಜನವರಿ 2021 (06:35 IST)
ರಾಯ್ ಪುರ : ತನ್ನ ಮಗನ ಪ್ರೇಮ ಸಂಬಂಧದಕ್ಕೆ ನೀಡಿ ತಾಯಿಯೊಬ್ಬಳು ಜೀವ ಕಳೆದುಕೊಂಡ ಘಟನೆ ಛತ್ತೀಸ್ ಗಢದ ಜಗದಾಲ್ ಪುರ ಗ್ರಾಮದಲ್ಲಿ ನಡೆದಿದೆ.

ವಿಧವೆಯಾಗಿದ್ದ ಮಹಿಳೆ ತನ್ನ ಬೇರೆ ಜಾತಿಯ ಹುಡುಗಿಯನ್ನು ಪ್ರೀತಿಸುತ್ತಿದ್ದ ವಿಷಯ ತಿಳಿದು ಅವರಿಬ್ಬರ ಮದುವೆ ಮಾಡಿಸಿ ಬೇರೆ ಊರಿಗೆ ಕಳುಹಿಸಿದ್ದಾಳೆ. ಆದರೆ ಈ ವಿಚಾರ ತಿಳಿದ ಹುಡುಗಿಯ ತಂದೆ ಕೋಪಗೊಂಡು ಕುಡಿದು ಬಂದು ಮಹಿಳೆಯ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಮತ್ತು ಆರೋಪಿಯನ್ನು ಬಂಧಿಸುವ ಪ್ರಯತ್ನ ನಡೆಯುತ್ತಿದೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :