ಮತದಾನಕ್ಕೂ ಇನ್ನುಮುಂದೆ ಆಧಾರ್ ಕಾರ್ಡ್ ಕಡ್ಡಾಯ…?

ನವದೆಹಲಿ, ಮಂಗಳವಾರ, 17 ಅಕ್ಟೋಬರ್ 2017 (19:55 IST)

Widgets Magazine

ನವದೆಹಲಿ: ಶೀಘ್ರವೇ ಮತದಾನಕ್ಕೂ ಆಧಾರ್‌ ಕಾರ್ಡನ್ನು ಏಕೈಕ ಗುರುತು ಪತ್ರವಾಗಿ ಬಳಸಬಹುದು ಎಂದು ಟಿ.ಎಸ್‌.ಕೃಷ್ಣಮೂರ್ತಿ ಹೇಳಿದ್ದಾರೆ.


ಮತದಾನಕ್ಕೆ ವೋಟರ್ ಐಡಿ ಇಲ್ಲದೆ ಇದ್ದ ಸಂದರ್ಭದಲ್ಲಿ ಪಾಸ್ ಪೋರ್ಟ್, ಡ್ರೈವಿಂಗ್ ಲೈಸನ್ಸ್ಸ ಸೇರಿದಂತೆ ಪರ್ಯಾಯವಾಗಿ ಬೇರೆ ದಾಖಲೆಗಳನ್ನು ಬಳಸುತ್ತಿದ್ದೇವೆ. ಇದು ಹಲವು ಬಗೆಯ ತೊಂದರೆ, ಗೊಂದಲಗಳಿಗೆ ಕಾರಣವಾಗಿದೆ. ಹೀಗಾಗಿ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಮತದಾನಕ್ಕೆ ಒಂದೇ ಗುರುತು ಪತ್ರ ಬಳಸುವುದು ಒಳಿತು. ಇದಕ್ಕೆ ಪರ್ಯಾಯವಾಗಿ ಆಧಾರ್‌ ಕಾರ್ಡ್‌ ವ್ಯವಸ್ಥೆ ಉತ್ತಮವಾಗಿದೆ ಎಂದು ಅಭಿಪ್ರಾಯಪಟ್ಟರು.

ದೇಶದಲ್ಲಿ ಬಹುತೇಕ ಮಂದಿ ಆಧಾರ್‌ ಕಾರ್ಡ್‌ ಹೊಂದಿದ್ದಾರೆ. ಇನ್ನೂ ಕಾರ್ಡ್ ಪಡೆಯದವರು 2019 ಅಥವಾ 2020 ಕಟ್‌ ಆಫ್ ಡೇಟ್‌ ಎಂದು ನಿಗದಿಸಬಹುದು. ಆ ಬಳಿಕ ಆಧಾರ್‌ ಕಾರ್ಡನ್ನು ಮತದಾನಕ್ಕೆ ಏಕೈಕ ಗುರುತು ಪತ್ರವೆಂದು ಸರ್ಕಾರ ಘೋಷಿಸಬಹುದು ಎಂದರು.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ದಿಗ್ವಿಜಯ್ ಸಿಂಗ್ ಅಳಿಯ 1.15 ಕೋಟಿ ಲಂಚ ಪಡೆದಿದ್ದಾರೆ: ಬಾಬುರಾವ್ ಚೌಹಾಣ್

ಬೆಂಗಳೂರು: ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಅಳಿಯ ಭವಾನಿ ಸಿಂಗ್ ವಿರುದ್ಧ ಕೇಳಿ ಬಂದಿರುವ ...

news

ಜೀವನದಿ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ

ಮಡಿಕೇರಿ: ಕನ್ನಡ ನಾಡಿನ ಜೀವನದಿ ತಲಕಾವೇರಿಯಲ್ಲಿ ಇಂದು 12.33ಕ್ಕೆ ಪವಿತ್ರ ತೀರ್ಥೋದ್ಭವವಾಯಿತು. ರಾಜ್ಯದ ...

news

ಡಿಕೆಶಿ ನನ್ನ ಬಳಿ ಭಿಕ್ಷೆ ಬೇಡಿ ಬಂದಿದ್ದರು: ಸಿ.ಪಿ.ಯೋಗೇಶ್ವರ್

ರಾಮನಗರ: ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ನನ್ನ ಬಳಿ ಭಿಕ್ಷೆ ಬೇಡಿ ಬಂದಿದ್ದರು ಎಂದು ಕಾಂಗ್ರೆಸ್ ...

news

ವೀರಶೈವ ಲಿಂಗಾಯುತರು ಒಂದಾಗಿದ್ದರೆ ಬಲ ಬರುತ್ತದೆ: ಪೇಜಾವರ ಶ್ರೀ

ಉಡುಪಿ: ವೀರಶೈವರು ಮತ್ತು ಲಿಂಗಾಯುತರು ಒಂದಾಗಿದ್ದರೆ ಬಲ ಬರುತ್ತದೆ ಎಂದು ಉಡುಪಿ ಶ್ರೀಕೃಷ್ಣ ಮಠದ ಪೇಜಾವರ ...

Widgets Magazine