ಆಮ್ ಆದ್ಮಿ ಪಕ್ಷದಲ್ಲೀಗ ಆಂತರಿಕ ಕಲಹ

NewDelhi, ಬುಧವಾರ, 3 ಮೇ 2017 (07:58 IST)

Widgets Magazine

ನವದೆಹಲಿ: ಆಮ್ ಆದ್ಮಿ ಪಕ್ಷದಲ್ಲಿ ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಸೋತ ಮೇಲೆ ಎಲ್ಲವೂ ಸರಿಯಿಲ್ಲ ಎನ್ನುವುದು ಬಹಿರಂಗವಾಗಿದೆ. ನಾಯಕತ್ವದ ವಿರುದ್ಧ ಕುಮಾರ್ ವಿಶ್ವಾಸ್ ತಿರುಗಿಬಿದ್ದಿದ್ದಾರೆ.


 
ತನ್ನ ವಿರುದ್ಧ ಪಕ್ಷದ ನಾಯಕರೇ ಕುತಂತ್ರ ನಡೆಸುತ್ತಿದ್ದಾರೆಂದು ವಿಶ್ವಾಸ್ ಆರೋಪ ಮಾಡಿದ್ದು, ಪಕ್ಷ ಬಿಡುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಸದ್ಯದಲ್ಲೇ ತನ್ನ ಮುಂದಿನ ರಾಜಕೀಯ ನಡೆ ಬಗ್ಗೆ ನಿರ್ಧಾರ ಮಾಡುವುದಾಗಿ ಎಚ್ಚರಿಸಿದ್ದಾರೆ.
 
ವಿಶ್ವಾಸ್ ಎಚ್ಚರಿಕೆ ಬೆನ್ನಲ್ಲೇ ಎಚ್ಚೆತ್ತುಕೊಂಡ ಸಿಎಂ ಕೇಜ್ರಿವಾಲ್ ಅವರನ್ನು ಸಮಾಧಾನಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ದೆಹಲಿ ಸೋಲಿನ ನಂತರ ಅವರು ಪಕ್ಷದ ಚುಕ್ಕಾಣಿ ಹಿಡಿಯಲು ಬಯಸಿದ್ದರು ಎಂಬ ಸುದ್ದಿ ಹಬ್ಬಿತ್ತು.
 
ಅದನ್ನು ಅವರು ನಿರಾಕರಿಸಿದ್ದಾರೆ.  ಅಲ್ಲದೆ ತಾನು ಯಾವುದೇ ಆಂದೋಲನ ಅಥವಾ ಬೇರೆ ರಾಜಕೀಯ ಪಕ್ಷಕ್ಕೆ ಸೇರ್ಪಡೆಯಾಗುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಕೇಜ್ರಿವಾಲ್ ಅವರನ್ನು ತಣ್ಣಗಾಗಿಸುವ ಯತ್ನ ಮಾಡಿದ್ದಾರೆ. ವಿಶ್ವಾಸ್ ಪಕ್ಷದ ಪ್ರಮುಖ ಆಸ್ತಿ ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಅಖಿಲೇಶ್ ಯಾದವ್ ಫೋಟೋ ಇರುವ ಶಾಲಾ ಬ್ಯಾಗ್ ವಿತರಿಸುತ್ತಿರುವ ಸಿಎಂ ಯೋಗಿ!

ಲಕ್ನೋ: ಸಾಮಾನ್ಯವಾಗಿ ಅಧಿಕಾರಕ್ಕೆ ಬಂದ ನಂತರ ಯಾವ ಸಿಎಂ ಕೂಡಾ ವಿರೋಧಿ ನಾಯಕರಿಗೆ ಪ್ರಚಾರ ಸಿಗುವಂತಹ ಕೆಲಸ ...

news

ಅಮೆರಿಕದ 10,000 ಜನರಿಗೆ ಉದ್ಯೊಗ ನೀಡಲು ಮುಂದಾದ ಇನ್ಫೋಸಿಸ್‌

ಭಾರತದ ಐಟಿ ದಿಗ್ಗಜ ಇನ್ಫೋಸಿಸ್‌ ಮುಂದಿನ ಎರಡು ವರ್ಷಗಳಲ್ಲಿ ಅಮೆರಿಕದ 10 ಸಾವಿರ ಜನರಿಗೆ ಉದ್ಯೋಗ ...

news

ಉಗ್ರರಿಗೆ ಹಣಕಾಸು, ಕಪ್ಪುಹಣ ಟ್ರ್ಯಾಕ್ ಮಾಡಲು ಪ್ಯಾನ್ ಕಾರ್ಡ್`ಗೆ ಆಧಾರ್ ಲಿಂಕ್: ಸುಪ್ರೀಂಕೋರ್ಟ್`ಗೆ ಕೇಂದ್ರದ ಸ್ಪಷ್ಟನೆ

ಭಯೋತ್ಪಾದನೆಗೆ ಹಣಕಾಸು ನೆರವು ನೀಡಲು ಮತ್ತು ಕಪ್ಪುಹಣದ ವ್ಯವಹಾರಕ್ಕೆ ಬಳಸಲಾಗುತ್ತಿರುವ ನಕಲಿ ಪ್ಯಾನ್ ...

news

ನಮ್ಮ ಒಬ್ಬ ಯೋಧನ ರುಂಡಕ್ಕೆ ಪ್ರತಿಯಾಗಿ 10 ಪಾಕ್ ಯೋಧರ ರುಂಡ ಕತ್ತರಿಸಿ ತರುವ ಕೇಂದ್ರದ ಭರವಸೆ ಏನಾಯ್ತು: ಹುತಾತ್ಮ ಯೋಧ ತಾಯಿ ಪ್ರಶ್ನೆ

ನಮ್ಮ ಒಬ್ಬ ಯೋಧನ ರುಂಡಕ್ಕೆ ಪ್ರತಿಯಾಗಿ 10 ಪಾಕಿಸ್ತಾನ ಯೋಧರ ರುಂಡ ಕಡಿದು ತರುತ್ತೇವೆಂದು ಈ ಹಿಂದೆ ...

Widgets Magazine