Widgets Magazine
Widgets Magazine

ಆಮ್ ಆದ್ಮಿ ಆಂತರಿಕ ಬೇಗುದಿ ತಾತ್ಕಾಲಿಕ ಶಮನ: ಕುಮಾರ್ ವಿಶ್ವಾಸ್`ಗೆ ರಾಜಸ್ಥಾನ ಹೊಣೆ

ನವದೆಹಲಿ, ಬುಧವಾರ, 3 ಮೇ 2017 (20:48 IST)

Widgets Magazine

ಆಮ್ ಆದ್ಮಿ ಪಕ್ಷದ ಆಂತರಿಕ ಬೇಗುದಿಗೆ ಅಲ್ಪ ವಿರಾಮ ಬಿದ್ದಿದೆ. ದೆಹಲಿ ಸ್ಥಳೀಯ ಸಂಸ್ಥೆ ಚುನಾವಣೆ ಸೋಲಿನ ಬಳಿಕ ತಮ್ಮ ವಿರುದ್ಧವೇ ಬಂಡೆದಿದ್ದ ಕುಮಾರ್ ವಿಶ್ವಾಸ್ ಅವರನ್ನ ಸಮಾಧಾನಗೊಳಿಸುವಲ್ಲಿ ಕೇಜ್ರಿವಾಲ್ ಯಶಸ್ವಿಯಾಗಿದ್ದಾರೆ. ದೆಹಲಿಯಲ್ಲಿ ನಡೆದ ರಾಜಕೀಯ ವ್ಯವಹಾರಗಳ ಸಮಿತಿ ಸಭೆಯಲ್ಲಿ ಚರ್ಚೆ ಬಳಿಕ ಉಭಯ ನಾಯಕರೂ ಭಿನ್ನಾಭಿಪ್ರಾಯ ಬದಿಗೊತ್ತಿ ಒಂದಾಗಿದ್ದಾರೆ.  


ಈ ಮಧ್ಯೆ, ಕುಮಾರ್ ವಿಶ್ವಾಸ್ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸಿದ್ದ ಶಾಸಕ ಅಮಾನತುಲ್ಲಾ ಖಾನ್ ಅವರನ್ನ ಪಕ್ಷದಿಂದ ಅಮಾನತು ಮಾಡಿ, ಅವರ ನೀಡಿರುವ ಹೇಳಿಕೆ ಮತ್ತು ಆರೋಪಗಳ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಕುಮಾರ್ ವಿಶ್ವಾಸ್ ಅವರನ್ನ ರಾಜಸ್ಥಾನದ ವಿಧಾನಸಭಾ ಚುನಾವಣಾ ಉಸ್ತುವಾರಿಯಾಗಿ ನೇಮಿಸಲಾಗಿದೆ.

ಒಟ್ಟಿನಲ್ಲಿ, ಆಮ್ ಆದ್ಮಿ ಪಕ್ಷದಲ್ಲಿ ಕುದಿಯುತ್ತಿದ್ದ ಆಂತರಿಕ ಬೇಗುದಿ ಬುಸುಗುಟ್ಟಿ ಸುಮ್ಮನಾಗಿದೆ. ಸದ್ಯಕ್ಕೆ, ಪಕ್ಷದ ಭಿನ್ನಮತವನ್ನ ಅಡಗಿಸಲಾಗಿದೆ.ಸಾಮಾಜಿಕ ಹೋರಾಟದ ಮೂಲಕ ಅಸ್ತಿತ್ವಕ್ಕೆ ಬಂದ ಆಮ್ ಆದ್ಮಿ ಪಕ್ಷ ಭಿನ್ನಮತ ಬಿಟ್ಟು ಜನಸೇವೆಗೆ ಮುಂದಾದಲ್ಲಿ ಮಾತ್ರ ಅಸ್ತಿತ್ವ ಉಳಿಯಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಕೇದಾರನಾಥದಲ್ಲಿ ಮೋದಿ ಶೂ ತೆಗೆಯಲು ಮುಂದಾದ ವ್ಯಕ್ತಿ..!

ಪ್ರಧಾನಮಂತ್ರಿ ನರೇಂದ್ರ ಮೋದಿ ಇವತ್ತು ಉತ್ತರಾಖಂಡ್`ನ ಕೇದಾರನಾಥ ದೇಗುಲಕ್ಕೆ ಭೇಟಿ ನೀಡಿ ರುದ್ರಾಭಿಷೇಕ ...

news

ನಿಂತಿದ್ದ ಯುವತಿಗೆ ಬ್ಯಾಕ್`ಗೆ ಹೊಡೆದು ಹೋದ ಬೈಕ್ ಸವಾರರು..!

ಬೆಂಗಳೂರಿನಲ್ಲಿ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದೆ. ಊಟದ ಪಾರ್ಸೆಲ್ ಪಡೆಯಲು ನಿಂತಿದ್ದ ...

news

ಮೂವರು ಪತ್ನಿಯರಿಗೆ ತಲಾಕ್ ನೀಡಿ 4ನೇ ಮದುವೆಗೆ ಸಿದ್ಧವಾಗಿದ್ದವನಿಗೆ ತಡೆಗೋಡೆಯಾಗಿ ನಿಂತ ಮಾಜಿ ಪತ್ನಿಯರು..!

ಮೂವರು ಪತ್ನಿಯರಿಗೆ ತಲಾಕ್ ನೀಡಿ 4ನೇ ಮದುವೆಗೆ ಸಿದ್ಧನಾಗಿದ್ದವನನ್ನ ಆತನ ಪತ್ನಿಯರೇ ತಡೆಯಲು ಮುಂದಾಗಿರುವ ...

news

ಪ್ರಧಾನಿ ಮೋದಿಗೆ ಪತ್ರ ಬರೆದ ಲೈಂಗಿಕ ಕಾರ್ಯಕರ್ತೆ ಹೇಳಿದ್ದೇನು?

ನವದೆಹಲಿ: ಪ್ರಧಾನಿ ಮೋದಿಗೆ ಹಲವಾರು ಜನ ತಮ್ಮ ಸಮಸ್ಯೆ ಹೇಳಿಕೊಂಡು ಸಂದೇಶ ಕಳುಹಿಸುತ್ತಾರೆ. ಆದರೆ ಲೈಂಗಿಕ ...

Widgets Magazine Widgets Magazine Widgets Magazine