ವಿವಾದಾತ್ಮಕ ಟ್ವೀಟ್ ಮಾಡಿದ ನಟಿ ರಮ್ಯಾ

Bangalore, ಶನಿವಾರ, 5 ಆಗಸ್ಟ್ 2017 (10:25 IST)

ಬೆಂಗಳೂರು: ನಟಿ ಹಾಗೂ ಮಾಜಿ ಸಂಸದೆ ರಮ್ಯಾ  ಮಾಡಿದ ಟ್ವೀಟ್ ಒಂದು ಈಗ ವಿವಾದಕ್ಕೆ ಕಾರಣವಾಗುವ ಲಕ್ಷಣ ತೋರಿದೆ.


 
ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣವನ್ನು ನಿಭಾಯಿಸುತ್ತಿರುವ ರಮ್ಯಾ, ಗುಜರಾತ್ ನಲ್ಲಿ ರಾಹುಲ್ ಗಾಂಧಿ ಕಾರಿನ ಮೇಲೆ ನಡೆದ ಕಲ್ಲು ತೂರಾಟದ ಬಗ್ಗೆ ಪ್ರತಿಕ್ರಿಯಿಸುವಾಗ ಎಡವಟ್ಟು ಮಾಡಿದ್ದಾರೆ.
 
ಘಟನೆ ಬಗ್ಗೆ ಟ್ವೀಟ್ ಮಾಡಿದ್ದ ಗುಜರಾತ್ ಸಿಎಂ ವಿಜಯ್ ರೂಪಾನಿ ‘ಕಾಂಗ್ರೆಸ್ ನ ಇಂತಹ ನಾಟಕಗಳ ಬಗ್ಗೆ ಜನರಿಗೆ ಚೆನ್ನಾಗಿ ಗೊತ್ತು’ ಎಂದಿದ್ದರು. ಇದಕ್ಕೆ ತಿರುಗೇಟು ನೀಡುವ ಭರದಲ್ಲಿ ‘ಹೌದೌದು. ಕಾನೂನು ಸುವ್ಯವಸ್ಥೆಯನ್ನು ನೀವು ಒಬ್ಬ ಕೊಲೆಗಡುಕನಿಂದ ಕಲಿತವರಲ್ಲವೇ’ ಎಂದಿದ್ದಾರೆ.
 
ರಮ್ಯಾ ಬಳಸಿದ ಕೊಲೆಗಡುಕ ಶಬ್ಧ ಯಾರಿಗೆ ಸಲ್ಲುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಇದು ಪ್ರಧಾನಿ ಮೋದಿಗೋ, ಅಮಿತ್ ಶಾ ನೀಡಿದ ಟಾಂಗ್ ಎಂದೋ ವಿಶ್ಲೇಷಿಸಲಾಗುತ್ತಿದೆ.
 
ಇದನ್ನೂ ಓದಿ.. ಪಾಕಿಸ್ತಾನ ಸರ್ಕಾರದಲ್ಲಿ ಹಿಂದೂ ಸಚಿವ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ನಟಿ ರಮ್ಯಾ ಟ್ವಿಟರ್ ರಾಹುಲ್ ಗಾಂಧಿ ಕಾಂಗ್ರೆಸ್ ರಾಷ್ಟ್ರೀಯ ಸುದ್ದಿಗಳು Twitter Congress Rahul Gandhi Actress Ramya National News

ಸುದ್ದಿಗಳು

news

ಪಾಕಿಸ್ತಾನ ಸರ್ಕಾರದಲ್ಲಿ ಹಿಂದೂ ಸಚಿವ!

ಇಸ್ಲಾಮಾಬಾದ್: ಪಕ್ಕಾ ಮುಸ್ಲಿಂ ರಾಷ್ಟ್ರವಾದ ಪಾಕಿಸ್ತಾನದ ನೂತನ ಸರ್ಕಾರದಲ್ಲಿ ಎರಡು ದಶಕಗಳಲ್ಲಿ ಇದೇ ಮೊದಲ ...

news

‘ಉದ್ಯೋಗವೆಲ್ಲಿದೆ ಮಿ.ಅರುಣ್ ಜೇಟ್ಲಿ?’

ನವದೆಹಲಿ: ನೋಟು ನಿಷೇಧ ಮಾಡುವುದರಿಂದ ದೇಶದಲ್ಲಿ ಕಪ್ಪು ಹಣ ದಂಧೆ ನಿಲ್ಲಲಿದೆ. ನಿರುದ್ಯೋಗಿಗಳಿಗೆ ಸಿಗಲಿದೆ ...

news

ಗುಜರಾತ್ ಶಾಸಕರೊಂದಿಗೆ ಕಾಂಗ್ರೆಸ್ ರೆಸಾರ್ಟ್ ರಾಜಕಾರಣ ಮಾಡಿದ್ದೇಕೆ ಗೊತ್ತಾ?!

ನವದೆಹಲಿ: ಗುಜರಾತ್ ನಲ್ಲಿ ನಡೆಯಲಿರುವ ರಾಜ್ಯಸಭೆ ಚುನಾವಣೆ ಕಾಂಗ್ರೆಸ್ ಪಾಲಿಗೆ ಮಹತ್ವದ್ದಾಗಿದೆ. ಅಲ್ಲಿ ...

news

10 ವರ್ಷದ ಬಾಲಕ ಪ್ರಧಾನಿ ಮೋದಿಗೆ ದುಡ್ಡು ಕೊಟ್ಟಿದ್ದೇಕೆ?

ನವದೆಹಲಿ: ನಮ್ಮ ದೇಶದಲ್ಲಿದ್ದವರೇ ಕೆಲವರು ನಮ್ಮ ವೀರ ಯೋಧರ ಬಗ್ಗೆ ಹಗುರವಾಗಿ ಮಾತನಾಡಿ ತಮ್ಮ ನಾಲಿಗೆ ಚಪಲ ...

Widgets Magazine