ಮೂವರು ಪತ್ನಿಯರಿಗೆ ತಲಾಕ್ ನೀಡಿ 4ನೇ ಮದುವೆಗೆ ಸಿದ್ಧವಾಗಿದ್ದವನಿಗೆ ತಡೆಗೋಡೆಯಾಗಿ ನಿಂತ ಮಾಜಿ ಪತ್ನಿಯರು..!

ಲಖನೌ, ಬುಧವಾರ, 3 ಮೇ 2017 (16:17 IST)

Widgets Magazine

ಮೂವರು ಪತ್ನಿಯರಿಗೆ ತಲಾಕ್ ನೀಡಿ 4ನೇ ಮದುವೆಗೆ ಸಿದ್ಧನಾಗಿದ್ದವನನ್ನ ಆತನ ಪತ್ನಿಯರೇ ತಡೆಯಲು ಮುಂದಾಗಿರುವ ಘಟನೆ ಉತ್ತರಪ್ರದೇಶದ ಬಹ್ರೇಚ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
 


ಮದುವೆಯಾದ ಬಳಿಕ ಪತ್ನಿಯರ ಸೆಕ್ಸ್ ವಿಡಿಯೋ ಮಾಡುತ್ತಿದ್ದ ಈತ ಬಳಿಕ ಆ ವಿಡಿಯೋ ತೋರಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದ. ಹಣ ಕೊಡದಿದ್ದರೆ ಬಹಿರಂಗಪಡಿಸುವುದಾಗಿ ಹೆದರಿಸುತ್ತಿದ್ದ. ಹಣ ಸುಲಿಗೆ ಮಾಡಿ ಬಳಿಕ ಹೆದರಿಸಿ ತಲಾಕ್ ನೀಡುತ್ತಿದ್ದ ಎಂದು ತಿಳಿದುಬಂದಿದೆ.
 
ಮಾಜಿ ಪತಿ ಡ್ಯಾನಿಶ್ ವಿರುದ್ಧ ಸಿಡಿದೆದ್ದಿರುವ ಮೂವರೂ ಮಾಜಿ ಪತ್ನಿಯರು ಈ ಸಂಬಂಧ ಹೆಚ್ಚುವರಿ ಎಎಸ್`ಪಿ ದಿನೇಶ್ ತ್ರಿಪಾಠಿಯನ್ನ ಭೇಟಿ ಮಾಡಿ  ಆತನ ಹೀನ ಕೃತ್ಯವನ್ನ ಬಿಚ್ಚಿಟ್ಟಿದ್ದಾರೆ.  
 
2013ರಲ್ಲಿ ಮೊದಲ ಮದುವೆಯಾಗಿದ್ದ 30 ವರ್ಷದ ಡ್ಯಾನಿಶ್, ಪತ್ನಿಯ ಅಶ್ಲೀಲ ಎಂಎಂಎಸ್ ಮಾಡಿದ್ದ. ಹಣ ಕೊಡು ಇಲ್ಲದಿದ್ದರೆ ಎಂಎಂಎಸ್ ರಿಲೀಸ್ ಮಾಡುವುದಾಗಿ ಪತ್ನಿಯನ್ನೇ ಪೀಡಿಸಿದ್ದ. ಬಳಿಕ ತ್ರಿವಳಿ ನೀಡಿ 2ನೇ ವಿವಾಹವಾಗಿದ್ದ. ಒಂದೇ ವರ್ಷದಲ್ಲಿ 2ನೇ ಹೆಂಡತಿಗೂ ಈತ ಕೈಕೊಟ್ಟಿದ್ದ
 
ಅಕ್ಟೋಬರ್ 24, 2016ರಲ್ಲಿ ಸಂಬಂಧಿಕರ ಮನೆಗೆ ಹೋಗಿದ್ದ ಕೀಚಕ ಡ್ಯಾನಿಶ್, 15 ವರ್ಷದ ಯುವತಿ ಮೇಲೆ ಅತ್ಯಾಚಾರ ಮಾಡಿ ಬಳಿಕ ಮದುವೆಯಾಗಿದ್ದ. ಯುವತಿಯ ಎಂಎಂಎಸ್ ಮಾಡಿ ತನ್ನ ವಿರುದ್ಧ ಮಾತನಾಡಿದರೆ ಬಹಿರಂಗಪಡಿಸುವುದಾಗಿ ಯುವತಿಯ ಪೋಷಕರನ್ನ ಬೆದರಿಸಿದ್ದ.
 
ಈ ಮಧ್ಯೆ, ಡ್ಯಾನಿಶ್ 4ನೇ ಮದುವೆಗೂ ಸಿದ್ಧನಾಗಿದ್ದಾನೆಂಬುದನ್ನ ಅರಿತ ಮೂವರೂ ಮಾಜಿ ಪತ್ನಿಯರು ಪೊಲೀಸರ ಮೊರೆ ಹೋಗಿದ್ದಾರೆ. ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ.
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ತಲಾಖ್ ತ್ರಿವಳಿ ತಲಾಖ್ ಉತ್ತರಪ್ರದೇಶ Talaq Uttarpradesh Trible Talaq

Widgets Magazine

ಸುದ್ದಿಗಳು

news

ಪ್ರಧಾನಿ ಮೋದಿಗೆ ಪತ್ರ ಬರೆದ ಲೈಂಗಿಕ ಕಾರ್ಯಕರ್ತೆ ಹೇಳಿದ್ದೇನು?

ನವದೆಹಲಿ: ಪ್ರಧಾನಿ ಮೋದಿಗೆ ಹಲವಾರು ಜನ ತಮ್ಮ ಸಮಸ್ಯೆ ಹೇಳಿಕೊಂಡು ಸಂದೇಶ ಕಳುಹಿಸುತ್ತಾರೆ. ಆದರೆ ಲೈಂಗಿಕ ...

news

ಯಾವುದೇ ಕಾರಣಕ್ಕೂ ರಾಯಣ್ಣ ಬ್ರಿಗೇಡ್ ಚಟುವಟಿಕೆ ನಿಲ್ಲುವುದಿಲ್ಲ: ಈಶ್ವರಪ್ಪ

ಯಾವುದೇ ಕಾರಣಕ್ಕೂ ರಾಯಣ್ಣ ಬ್ರಿಗೇಡ್ ಚಟುವಟಿಕೆ ನಿಲ್ಲುವುದಿಲ್ಲ ಎಂದು ದಾವಣಗೆರೆಯಲ್ಲಿ ಮಾಜಿ ಡಿಸಿಎಂ ...

news

ಬಾಲಕಿಯರಿಗೆ 200 ಕೋಟಿ ಗಿಫ್ಟ್ ಕೊಟ್ಟ ಸೂರತ್ ಮೂಲದ ವ್ಯಕ್ತಿ!

ಸೂರತ್: ಪ್ರಧಾನಿ ಮೋದಿಯವರ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಿಂದ ಪ್ರಭಾವಿತನಾದ ಸೂರತ್ ಮೂಲದ ...

news

ಕಾಂಗ್ರೆಸ್ ಜೊತೆ ಮೈತ್ರಿಯಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ: ಕುಮಾರಸ್ವಾಮಿ

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲವೆಂದು ...

Widgets Magazine