ಆರ್‌ಎಸ್ಎಸ್ ಕಾರ್ಯಕರ್ತರ ಮೇಲೆ ಮಾರಣಾಂತಿಕ ದಾಳಿ

ಕೋಝಿಕ್ಕೋಡ್, ಭಾನುವಾರ, 5 ಮಾರ್ಚ್ 2017 (10:20 IST)

ಕೇರಳದಲ್ಲಿ ಎಡ ಮತ್ತು ಬಲ ಪಂಥೀಯರ  ನಡುವಿನ ವೈಷಮ್ಯ ತಾರಕಕ್ಕೇರಿದ್ದು, ಆರ್‌ಎಸ್ಎಸ್ ಕಚೇರಿಯ ಮುಂದೆ ಬಾಂಬ್ ದಾಳಿ ನಡೆದ ಬೆನ್ನಲ್ಲೇ ಮತ್ತೀಗ ಮೂವರು ಆರ್‌ಎಸ್ಎಸ್ ಕಾರ್ಯಕರ್ತರ ಮೇಲೆ ದಾಳಿಯನ್ನು ನಡೆಸಲಾಗಿದೆ. 
ಕೇರಳದ ಕೋಝಿಕ್ಕೋಡ್‌ನಲ್ಲಿ ನಿನ್ನೆ ರಾತ್ರಿ ಈ ಹೇಯ ಕೃತ್ಯ ನಡೆದಿದ್ದು ಸಿಪಿಎಂ ಕಾರ್ಯಕರ್ತರೇ ಈ ದಾಳಿ ನಡೆಸಿದ್ದಾರೆಂಬ ಆರೋಪ ಕೇಳಿ ಬಂದಿದೆ.
 
ಗಾಯಗೊಂಡ ಮೂವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. 
 
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಲೆಗೆ ಒಂದು ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಆರ್.ಎಸ್.ಎಸ್ ನಾಯಕ ಕುಂದನ್ ಚಂದ್ರಾವತ್ ಘೋಷಿಸಿದ ಬೆನ್ನಲ್ಲೇ ಕೋಝಿಕ್ಕೋಡ್ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಚೇರಿ ಮೇಲೆ ಬಾಂಬ್ ಎಸೆಯಲಾಗಿತ್ತು. ಘಟನೆಯಲ್ಲಿ ಮೂವರು ಆರ್‌ಎಸ್ಎಸ್ ಕಾರ್ಯಕರ್ತರು ಗಾಯಗೊಂಡಿದ್ದರು. 
 
ಕೋಝಿಕ್ಕೋಡ್ ಆರ್.ಎಸ್.ಎಸ್ ಕಚೇರಿ ಮೇಲೆ ಕಚ್ಚಾ ಬಾಂಬ್ ಎಸೆದ ಕೆಲವೇ ಗಂಟೆಗಳಲ್ಲಿ ಇಬ್ಬರು ಡಿವೈಎಫ್ಐ ಕಾರ್ಯಕರ್ತರ ಮೇಲೆ ಹಲ್ಲೆಯಾಗಿತ್ತು. ಈ ಕುರಿತು ಮೂವರು ಬಿಜೆಪಿ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗಿದೆ. ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಈ ದಾಳಿ ನಡೆದಿತ್ತು. ಅಷ್ಟೇ ಅಲ್ಲದೆ ಕೋಝಿಕ್ಕೋಡ್ ಸಿಪಿಐಎಂ ಕಚೇರಿಗೂ ದುಷ್ಕರ್ಮಿಗಳು ಗುರುವಾರ ರಾತ್ರಿ ಬೆಂಕಿ ಹಚ್ಚಿದ್ದರು.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬ್ರಿಗೇಡ್ ನಲ್ಲಿ ಗುರುತಿಸಿಕೊಂಡವರಿಗೆ ನ್ಯಾಯ ಸಿಗುವವರೆಗೆ ಬಿಡುವುದಿಲ್ಲ ಎಂದು ಈಶ್ವರಪ್ಪ ಪಟ್ಟು

ಬೆಂಗಳೂರು: ಮತ್ತೊಮ್ಮೆ ರಾಜ್ಯ ಬಿಜೆಪಿಯಲ್ಲಿ ಈಶ್ವರಪ್ಪ ಭಿನ್ನಮತ ಹೊಗೆಯಾಡುವ ಲಕ್ಷಣ ಕಾಣುತ್ತಿದೆ. ...

news

ಕುಡಿಯಲು ನೀರಿಲ್ಲವೆಂದು ತಂದೆ ಹತ್ಯೆ

ಕುಡಿಯಲು ನೀರು ತಂದಿಟ್ಟಿಲ್ಲವೆಂದು ಪಾನಮತ್ತ ಮಗನೊಬ್ಬ ತನ್ನ ತಂದೆಯನ್ನು ಹತ್ಯೆಗೈದ ಅಮಾನವೀಯ ಘಟನೆ ಪಶ್ಚಿಮ ...

news

ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯನ ಮೇಲೆ ಶೂಟೌಟ್

ವಾಷಿಂಗ್ಟನ್: ಹೈದರಾಬಾದ್ ಟೆಕಿ ಶ್ರೀನಿವಾಸ್ ಹತ್ಯೆ ಪ್ರಕರಣ ಮಾಸುವ ಮೊದಲೇ ಅಮೆರಿಕಾದಲ್ಲಿ ಇನ್ನೊಬ್ಬ ...

news

ರಾಹುಲ್-ಅಖಿಲೇಶ್ ರೋಡ್‌ ಶೋನಲ್ಲಿ ಕಲ್ಲು ತೂರಾಟ

ವಾರಣಾಸಿ: ಉತ್ತರಪ್ರದೇಶ ವಿಧಾನಸಭೆ ಚುನಾವಣೆಯ ಆರನೇ ಹಂತದ ಪ್ರಚಾರ ಕಣ ರಂಗೇರಿದೆ. ಇಂದು ನಡೆದ ರಾಹುಲ್ ...

Widgets Magazine