ಅಣ್ಣಾಡಿಎಂಕೆ ಜನರಲ್ ಕೌನ್ಸಿಲ್ ಸಭೆ: ಶಶಿಕಲಾ ಉಚ್ಚಾಟನೆ ಸಾಧ್ಯತೆ

ಚೆನ್ನೈ, ಮಂಗಳವಾರ, 12 ಸೆಪ್ಟಂಬರ್ 2017 (10:39 IST)

ಜಯಲಲಿತಾ ನಿಧನದ ಬಳಿಕ ದಿನಕ್ಕೊಂದು ವಿವಾದದ ಮೂಲಕ ಸುದ್ದಿಯಾಗುತ್ತಿರುವ ತಮಿಳುನಾಡಿನ ಻ಣ್ಣಾಡಿಎಂಕೆ ಪಕ್ಷದಲ್ಲಿ ಇವತ್ತು ಮತ್ತೊಂದು ಹೈಡ್ರಾಮಾ ನಡೆಯುವ ಸಾಧ್ಯತೆ ಇದೆ.


ಸಿಎಂ ಎಡಪ್ಪಾಡ ಪಳನಿಸ್ವಾಮಿ ಅಣ್ಣಾಡಿಎಂಕೆಯ ಜನರಲ್ ಕೌನ್ಸಿಲ್ ಸಭೆ ಕರೆದಿದ್ದಾರೆ. ಪಳನಿಸ್ವಾಮಿ ಮತ್ತು ಪನ್ನೀರ್ ಸೆಲ್ವಂ ಬಣ್ಣ ಒಗ್ಗೂಡಿದ ಬಳಿಕ ನಡೆಯುತ್ತಿರುವ ಸಾಮಾನ್ಯ ಸಭೆ ಇದಾಗಿದ್ದು, ವಿಲೀನ ಒಪ್ಪಂದದಂತೆ ಪಕ್ಷದಿಂದ ಶಶಿಕಲಾ ಅವರನ್ನ ಉಚ್ಚಾಟಿಸುವ ಸಾಧ್ಯತೆ ಇದೆ. ಹೀಗಾಗಿ, ಪಕ್ಷದಲ್ಲಿ ಮೂಲೆಗುಂಪಾಗಿರುವ ಶಶಿಕಲಾ ಸಂಬಂಧಿ ಟಿಟಿವಿ ದಿನಕರನ್ ಸಭೆ ರದ್ದು ಮಾಡಲು ಇನ್ನಿಲ್ಲದಂತೆ ಕಸರತ್ತು ನಡೆಸಿದ್ಧಾರೆ. ಈ ಮಧ್ಯೆ, ಸಿಎಂ ಪಳನಿಸ್ವಾಮಿ ಕರೆದಿರುವ ಕೌನ್ಸಿಲ್ ಸಭೆ ಕಾನೂನು ಬಾಹಿರವಾದದ್ದು, ಜನರಲ್ ಕೌನ್ಸಿಲ್ ಸಭೆ ಕರೆಯುವ ಅಧಿಕಾರ ಇರುವುದು ಪ್ರಧಾನ ಕಾರ್ಯರರ್ಶಿಗೆ ಮಾತ್ರ. ಹೀಗಾಗಿ, ಸಭೆ ರದ್ದು ಆದೇಶ ನೀಡಬೇಕೆಂದು ದಿನಕರನ್ ಆಪ್ತ ವೆಟ್ರಿವೇಲ್ ಸಲ್ಲಿಸಿದ್ದ ಅರ್ಜಿಯನ್ನ ಮದ್ರಾಸ್ ಹೈಕೋರ್ಟ್ ವಜಾ ಮಾಡಿದೆ. ಜೊತೆಗೆ ಅನುಮತಿ ಪಡೆಯದೇ ಅರ್ಜಿ ಸಲ್ಲಿಸಿದ್ದರಿಂದ ಹೈಕೋರ್ಟ್ 1 ಲಕ್ಷ ರೂಪಾಯಿ ದಂಡ ವಿಧಿಸಿದೆ.

ಈಗಾಗಲೇ ಪಳನಿಸ್ವಾಮಿ ಕರೆದಿರುವ ಜನರಲ್ ಕೌನ್ಸಿಲ್ ಸಭೆಗೆ ರಾಜ್ಯದ ವಿವಿಧೆಡೆಗಳಿಂದ ಮುಖಂಡರು ಚೆನ್ನೈಗೆ ಆಗಮಿಸಿದ್ದಾರೆ. ಸಿಎಂ ಪಳನಿಸ್ವಾಮಿ, ಡಿಸಿಎಂ ಪನ್ನೀರ್ ಸೆಲ್ವಂ ಬಣದ ಸದಸ್ಯರೂ ಆಗಮಿಸಿದ್ದಾರೆ. ಪಕ್ಷದ 3000 ಸದಸ್ಯರು ಭಾಗವಹಿಸುತ್ತಿದ್ದು, ಟಿಟಿವಿ ದಿನಕರನ್ ಮತ್ತವರ ಬಣ ಗೈರಾಗುವ ಎಲ್ಲ ಸಾಧ್ಯತೆ ಇದೆ.      

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ರಧಾನಿಯಾಗಲು ನಾನು ರೆಡಿ ಎಂದ ರಾಹುಲ್ ಗಾಂಧಿ

ನ್ಯೂಯಾರ್ಕ್: 2019 ರ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವ ವಹಿಸಲು ತಾನು ಸಿದ್ಧ ಎಂದು ಕಾಂಗ್ರೆಸ್ ...

news

ಪ್ರಧಾನಿ ಮೋದಿ ನನಗಿಂತ ಉತ್ತಮ ವಾಗ್ಮಿ: ರಾಹುಲ್ ಗಾಂಧಿ

ನ್ಯೂಯಾರ್ಕ್: ಅಮೆರಿಕಾ ಪ್ರವಾಸದಲ್ಲಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕ್ಯಾಲಿಫೋರ್ನಿಯಾ ...

news

‘ನಾನು ಸುಳ್ಳು ಹೇಳಿದ್ದರೆ ನನ್ನ ಕುಟುಂಬ ಸರ್ವ ನಾಶವಾಗಲಿ’

ಬೆಂಗಳೂರು: ಲಿಂಗಾಯುತ ಪ್ರತ್ಯೇಕ ಧರ್ಮ ವಿಚಾರವಾಗಿ ಸಿದ್ದಗಂಗಾ ಶ್ರೀಗಳ ಹೇಳಿಕೆಯನ್ನು ನಾನು ತಿರುಚಿದ್ದರೆ, ...

news

ಇಂಗ್ಲಿಷ್ ಮಾತನಾಡಿದ್ದಕ್ಕೆ ಯುವಕನ ಮೇಲೆ ಹಲ್ಲೆ

ನವದೆಹಲಿ: ಈ ಯುವಕ ತನ್ನ ಗೆಳೆಯನೊಂದಿಗೆ ಸುಲಲಿತವಾಗಿ ಇಂಗ್ಲಿಷ್ ಮಾತಾಡಿದ್ದೇ ತಪ್ಪಾಯ್ತು. ಅದೇ ತಪ್ಪಿಗೆ ...

Widgets Magazine