ಗದಗದಲ್ಲಿ ವಿಚಿತ್ರ ಪ್ರಾಣಿಯನ್ನ ಕಂಡ ಬಸ್ ಡ್ರೈವರ್..? ಏಲಿಯನ್ ಶಂಕೆ

ಗದಗ, ಗುರುವಾರ, 13 ಜುಲೈ 2017 (16:22 IST)

ಇತ್ತೀಚೆಗೆ ತಾನೆ ಗದಗದ ಹಳ್ಳಿಯೊಂದರಲ್ಲಿ ದೊಡ್ಡ ಪಾದದ ಗುರುತು ಕಾಣಿಸಿಕೊಂಡು ಏಲಿಯನ್ಸ್ ಬಂದು ಹೋಗಿದೆ ಎಂಬ ಸುದ್ದಿ ಹರಡಿತ್ತು. ಇದೀಗ, ಬಸ್ ಚಾಲಕನೊಬ್ಬ 8 ಻ಡಿಯ ಪ್ರಾಣಿಯೊಂದನ್ನ ನೊಡಿದ್ದಾಗಿ ಹೇಳಿರುವುದು ಗ್ರಾಮಗಳ ಜನರ ನಿದ್ದೆಗೆಡಿಸಿದೆ.


ಲಕ್ಷ್ಮೇಶ್ವರದಿಂದ ಅಣ್ಣಿಗೇರಿಗೆ ಪ್ರಯಾಣಿಸುವ ಬಸ್ ಚಾಲಕನೊಬ್ಬ ಕಳೆದ ರಾತ್ರಿ 8 ಅಡಿ ಉದ್ದದ ಪ್ರಾಣಿ ಬಸ್ಸಿನ ಮುಂದೆ ಹಾದುಹೋಯಿತು. ಬಿಳಿ ಬಣ್ಣದ ಆ ಪ್ರಾಣಿ ನೋಡುವುದಕ್ಕೆ ಕುರಿ ಮರಿಯ ಹಾಗೆ ಕಾಣುತ್ತಿತ್ತು. ನನಗೂ ಒಂದು ಕ್ಷಣ ಗಾಬರಿಯಾಯಿತು ಎಂದು ಹೇಳಿದ್ದಾನೆ. ಚಾಲಕನ ಹೇಳಿದ ಮಾತನ್ನ ಕೇಳಿದ ಅಂತೂರು ಬಂತೂರು ಗ್ರಾಮಗಳ ರೈತರು ವಿಚಿತ್ರ ಪ್ರಾಣಿಯ ಹುಡುಕಾಟದಲ್ಲಿ ತೊಡಗಿದ್ದಾರೆ. ಡ್ರ್ಯಾಕ್ಟರ್`ಗಳಲ್ಲಿ ತೆರಳಿ ಇಡೀ ಪ್ರದೇಶವನ್ನ ಶೋಧಿಸುತ್ತಿದ್ದಾರೆ.

 ಅಂದಹಾಗೆ, ಏಲಿಯನ್ಸ್`ಗಳು ಬಂದು ಹೋದ ಬಗ್ಗೆ ಸುದ್ದಿಯಾಗುತ್ತಿರುವುದು ಇದೇ ಮೊದಲಲ್ಲ. ಹಲವು ವರ್ಷಗಳಿಂದ ದೇಶ ವಿದೇಶಗಳಲ್ಲಿ ಏಲಿಯನ್ಸ್`ಗಳ ಮಾತು ಕೇಳಿಬರುತ್ತಿದೆ. ರಾಜ್ಯದಲ್ಲೂ ಈ ಬಗ್ಗೆ ಊಹಾಪೋಹಗಳು ಬಂದುಹೋಗಿವೆ. ಗದಗದಲ್ಲೂ ಕೇಳಿಬರುತ್ತಿರುವ ಮಾತು ಊಹಾಪೋಹವೋ ಅಥವಾ ಸತ್ಯವೋ ಕಾಲವೇ ಉತ್ತರಿಸಬೇಕಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಗದಗ ಏಲಿಯನ್ ಬಸ್ ಡ್ರೈವರ್ Aliens Rumours In Gadag

ಸುದ್ದಿಗಳು

news

ಮತ್ತೊಂದು ಹನಿಟ್ರ್ಯಾಪ್ ಪ್ರಕರಣ ಬಹಿರಂಗ: 8 ಆರೋಪಿಗಳು ಅರೆಸ್ಟ್

ಬೆಂಗಳೂರು: ಮತ್ತೊಂದು ಹನಿಟ್ರ್ಯಾಪ್ ಪ್ರಕರಣ ಬಹಿರಂಗವಾಗಿದ್ದು, ಪೊಲೀಸರು ಎಂಟು ಮಂದಿ ಆರೋಪಿಗಳನ್ನು ...

news

ಹೆಣ್ಣು ಭ್ರೂಣ ಹತ್ಯೆಯ ಫಲ: ವಯಸ್ಸಿಗೆ ಬಂದ ಹುಡುಗರಿಗೆ ಇಲ್ಲಿ ವಧುಗಳೇ ಸಿಗುತ್ತಿಲ್ಲ..!

ಈ ರಾಜ್ಯದಲ್ಲಿ ವಯಸ್ಸಿಗೆ ಬಂದ ಹುಡುಗರಿಗೆ ಮದುವೆಯಾಗಲು ಹೆಣ್ಣುಗಳೇ ಸಿಗುತ್ತಿಲ್ಲ. 50,000 ರೂ ನಿಂದ 1 ...

news

ರಾಜಕೀಯ ವ್ಯವಸ್ಥೆಯೇ ಹಾಳಾಗಿ ಹೋಗಿದೆ: ಎಚ್.ಡಿ.ದೇವೇಗೌಡ ಕಿಡಿ

ಬೆಂಗಳೂರು: ಸರಕಾರದ ಸಂಪೂರ್ಣ ವ್ಯವಸ್ಥೆಯೇ ಹಾಳಾಗಿ ಹೋಗಿದೆ ಎಂದು ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ...

news

ಪ್ರಭಾಕರ್ ಭಟ್ ಬಂಧಿಸಿದ್ರೆ ಇಡೀ ರಾಜ್ಯ ಬೆಂಕಿ ಹೊತ್ತಿ ಉರಿಯುತ್ತೆ: ಯಡಿಯೂರಪ್ಪ

ಮಂಗಳೂರು: ಆರೆಸ್ಸೆಸ್ ಮುಖಂಡ ಪ್ರಭಾಕರ್ ಭಟ್ ಬಂಧಿಸಿದ್ರೆ ಇಡೀ ರಾಜ್ಯ ಹೊತ್ತಿ ಉರಿಯುತ್ತದೆ ಎಂದು ಬಿಜೆಪಿ ...

Widgets Magazine